ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಇಬ್ಬರ ನಡುವೆ ವಾಗ್ವಾದ!

ಫೆಬ್ರವರಿ 5, 2025 - 10:22
 0  11
ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಇಬ್ಬರ ನಡುವೆ ವಾಗ್ವಾದ!

ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ ಹೊಡೆದಿದ್ದು ಗೂಡ್ಸ್ ಆಟೋ ಡ್ರೈವರ್ ದ್ರಾವಿಡ್ ಅವರ ಜೊತೆಯೇ ವಾಗ್ವಾದಕ್ಕೆ ಇಳಿದಿದ್ದಾನೆ.

ಬೆಂಗಳೂರಿನ ಕನ್ನಿಂಗ್‌ ಹ್ಯಾಮ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೃದು ಭಾಷಿಯಾಗಿರುವ ರಾಹುಲ್ ದ್ರಾವಿಡ್ ಅವರಿಗೂ ಕಿರಿ ಕಿರಿ ಮಾಡುವಂತ ಸನ್ನಿವೇಶ ಸೃಷ್ಟಿಯಾಗಿತ್ತು. ದ್ರಾವಿಡ್ ತಮ್ಮ ಕಾರಿನಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಕಡೆಯಿಂದ ಹೈಗ್ರೌಂಡ್ ಕಡೆ ಹೋಗುವ ಸಂದರ್ಭದಲ್ಲಿ ಟ್ರಾಫಿಕ್‌ ಸಿಗ್ನ್‌ಲ್‌ನಲ್ಲಿ ನಿಂತಿದ್ದಾಗ ಹಿಂದಿನಿಂದ ಬಂದ ಗೂಡ್ಸ್‌ ಆಟೋ ಡಿಕ್ಕಿ ಹೊಡೆದಿದೆ.

ಗೂಡ್ಸ್ ಆಟೋ ತಮ್ಮ ಕಾರಿಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಕೆಳಗಿಳಿದ ರಾಹುಲ್ ದ್ರಾವಿಡ್ ಚಾಲಕನ ನಂಬರ್ ಪಡೆದುಕೊಂಡು ಹೋಗಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸದ್ಯ ಆಟೋ ಚಾಲಕನ ಮೇಲೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ

ಆದರೆ ರಾಹುಲ್ ದ್ರಾವಿಡ್ ಮತ್ತು ಆಟೋ ಚಾಲಕನ ನಡುವೆ ವಾಗ್ವಾದ ನಡೆಯುತ್ತಿರುವುದನ್ನು ಯಾರೋ ಚಿತ್ರೀಕರಣ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow