ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಕುಣಿದು ಕುಪ್ಪಳಿಸಿದ ವ್ಯಕ್ತಿ: ಬೆಟ್ಟದಷ್ಟು ದುಖಃ ಇದ್ರೂ ಹೀಗೆ ಮಾಡಿದ್ಯಾಕೆ?

ಮಂದಸೌರ್:- ಮಂದಸೌರ್ ಜಿಲ್ಲೆಯ ಜವಾಸಿಯಾ ಗ್ರಾಮದಲ್ಲಿ ವ್ಯಕ್ತಿಯೋರ್ವ ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಕುಣಿದು ಕುಪ್ಪಳಿಸಿರುವ ಘಟನೆ ಜರುಗಿದೆ.
ಮಂದಸೌರ್ ಜಿಲ್ಲೆಯ ಜವಾಸಿಯಾ ಗ್ರಾಮದಲ್ಲಿ ಬುಧವಾರ ನಡೆದ ಅಂತ್ಯಕ್ರಿಯೆ ಮೆರವಣಿಗೆ ವೇಳೆ ವ್ಯಕ್ತಿಯೊಬ್ಬ ಮೃತ ಸ್ನೇಹಿತನ ಕೊನೆಯ ಆಸೆಯನ್ನು ಈಡೇರಿಸಲು ನೃತ್ಯಮಾಡಿ ಕಣ್ಣಂಚಲ್ಲಿ ನೀಡಿದ್ದರೂ ಮುಖದಲ್ಲಿ ನಗು ತಂದುಕೊಂಡು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಸೋಹಲ್ ಲಾಲ್ ಜೈನ್ ಎಂಬುವವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು, ತನ್ನ ಆತ್ಮೀಯ ಗೆಳೆಯ ಅಂಬಾಲಾಲ್ ಪ್ರಜಾಪತಿಗೆ ಪತ್ರ ಬರೆದು, ತಮ್ಮ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ನೃತ್ಯ ಮಾಡಬೇಕೆಂದು ಬಯಸಿದ್ದರು.
ನನ್ನ ಅಂತ್ಯಕ್ರಿಯೆ ನಡೆಯುವಾಗ ಆತ ಅಳು ಮೊಗದಲ್ಲಿ ಇರಬಾರದು ನಗು ನಗುತ್ತಾ ನನ್ನನ್ನು ಕಳುಹಿಸಿಕೊಡಬೇಕು ಎಂದು ಆಶಿಸಿದ್ದರು. ಕಣ್ಣೀರು ಹಾಗೂ ನಗುವಿನ ಈ ಸಂಗಮವನ್ನು ನೋಡಿ ಗ್ರಾಮಸ್ಥರು ಭಾವುಕರಾದರು. ಎಲ್ಲರೂ ಈ ವಿಶಿಷ್ಟ ಹಾಗೂ ಹೃದಯಸ್ಪರ್ಶಿ ದೃಶ್ಯವನ್ನು ನೀಡಿ ಮೆಚ್ಚಿದ್ದಾರೆ. ಇಂದಿನ ಕಾಲದಲ್ಲಿ ಇಂಥಾ ಸ್ನೇಹ ಅಪರೂಪ ಎಂದು ಜನರು ಕೊಂಡಾಡಿದರು.
ನಿಮ್ಮ ಪ್ರತಿಕ್ರಿಯೆ ಏನು?






