ಕೆನಡಾ ಪ್ರಧಾನಿ ಪಟ್ಟಕ್ಕೆ ಕಣ್ಣಿಟ್ಟ ಕನ್ನಡಿಗ: ಪ್ರಧಾನಿ ಆಗ್ತಾರಾ ಚಂದ್ರ ಆರ್ಯ?

ಜನವರಿ 10, 2025 - 21:05
 0  10
ಕೆನಡಾ ಪ್ರಧಾನಿ ಪಟ್ಟಕ್ಕೆ ಕಣ್ಣಿಟ್ಟ ಕನ್ನಡಿಗ:  ಪ್ರಧಾನಿ ಆಗ್ತಾರಾ ಚಂದ್ರ ಆರ್ಯ?

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ  ಅವರು ಆಡಳಿತಾರೂಢ ಲಿಬರಲ್ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಅವರು ಮುಂದಿನ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ದೇಶದ ಪ್ರಧಾನಿ ಹುದ್ದೆಯಲ್ಲಿ ಉಳಿಯುತ್ತಾರೆ. ಹೊಸ ಪ್ರಧಾನಿ ಆಯ್ಕೆಯಾದ ನಂತರ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಲವು ನಾಯಕರು ಈಗ ಪ್ರಧಾನಿ ಹುದ್ದೆಯ ರೇಸ್ ನಲ್ಲಿದ್ದಾರೆ. ಇದೀಗ ಪ್ರಧಾನಿ ಹುದ್ದೆಯ ರೇಸ್‌ಗೆ ಹೊಸ ಹೆಸರು ಸೇರ್ಪಡೆಯಾಗಿದೆ. 

ಕೆನಡಾದಲ್ಲಿ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡುವ ಮೂಲಕ ಪ್ರಧಾನಿ ಹುದ್ದೆಗೆ ಹೊಸ ಮುಖಗಳಿಗೆ ಮಣೆ ಹಾಕಲಾಗುತ್ತಿದೆ. ಸದ್ಯ ಕೆನಡಾದ ಪ್ರಧಾನಿ ರೇಸ್​ನಲ್ಲಿ ಕನ್ನಡಿಗೆ ಚಂದ್ರ ಆರ್ಯ ಕೂಡ ಇದ್ದಾರೆ.

ಕೆನಡಾದ ನೆಪಿಯನ್ ಕ್ಷೇತ್ರದಿಂದ ಪಾರ್ಲಿಮೆಂಟ್​ಗೆ ಆಯ್ಕೆಯಾಗಿರುವ ಚಂದ್ರಆರ್ಯ, ಲಿಬರಲ್ ಪಕ್ಷದ ನಾಯಕ ಸ್ಥಾನವನ್ನು ಪಡೆದಿದ್ದಾರೆ. ಪ್ರಧಾನಿ ಸ್ಥಾನಕ್ಕೆ ಚಂದ್ರ ಆರ್ಯ ಸ್ಪರ್ಧೆ ಮಾಡಿದ್ದಾರೆ. ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಚಂದ್ರ ಆರ್ಯ ಸದ್ಯ ಕೆನಡಾ ಪಾರ್ಲಿಮೆಂಟ್ ಸದಸ್ಯ. ಆಗಾಗ್ಗೆ ಬೆಂಗಳೂರು, ಶಿರಾಗೆ ಚಂದ್ರ ಆರ್ಯ ಭೇಟಿ ನೀಡುತ್ತಾರೆ.

ಕಳೆದ ವರ್ಷ ಶಿರಾ ತಾಲೂಕಿನ ಹುಟ್ಟೂರಿಗೆ ಭೇಟಿ ನೀಡಿದ್ದರು. ಕೆನಡಾದ್ಲಿ ಸಣ್ಣ, ದಕ್ಷ ಸರ್ಕಾರವನ್ನು ಮುನ್ನಡೆಸಿ ದೇಶವನ್ನು ಮರು ನಿರ್ಮಾಣದ ಮಾಡುವ ಕನಸನ್ನು ಕಂಡಿದ್ದಾರೆ ಈ ಕನ್ನಡಿಗೆ. ಭವಿಷ್ಯದ ತಲೆಮಾರಿಗೆ ಸಮೃದ್ಧಿಯ ನಿರ್ಮಾಣದ ಭರವಸೆ ನೀಡಿದ ಚಂದ್ರ ಆರ್ಯ, ಸದ್ಯ ಜಸ್ಟಿನ್ ಟ್ರುಡೊ ರಾಜೀನಾಮೆಯಿಂದ ತೆರವಾಗಿರುವ ಪ್ರಧಾನಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow