ಮಲೆಯಾಳಂ ಖ್ಯಾತ ನಟಿಗೆ ಅಶ್ಲೀಲ ಮೆಸೇಜ್: ಖ್ಯಾತ ಉದ್ಯಮಿ ಅರೆಸ್ಟ್: ಆರೋಪಿ ಬಾಬಿ ಚೆಮ್ಮನೂರ್ ಯಾರು?

ಜನವರಿ 10, 2025 - 18:06
 0  11
ಮಲೆಯಾಳಂ ಖ್ಯಾತ ನಟಿಗೆ ಅಶ್ಲೀಲ ಮೆಸೇಜ್: ಖ್ಯಾತ ಉದ್ಯಮಿ ಅರೆಸ್ಟ್: ಆರೋಪಿ ಬಾಬಿ ಚೆಮ್ಮನೂರ್ ಯಾರು?

ನಟ ನಂದಮೂರಿ ಬಾಲಕೃಷ್ಣ ನಟನೆಯ ಬ್ಲಾಕ್ ಬಸ್ಟರ್ ಚಿತ್ರ ವೀರ ಸಿಂಹಾ ರೆಡ್ಡಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಮಲಯಾಳಂ ನಟಿ ಹನಿ ರೋಸ್ ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಕೇರಳದ ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಕೆಟ್ಟದಾಗಿ ಕಾಮೆಂಟ್​ ಮಾಡಿದ ಖ್ಯಾತ ಉದ್ಯಮಿ ವಿರುದ್ಧ ಮಲೆಯಾಳಂ ಖ್ಯಾತ ನಟಿ ಹನಿರೋಸ್ ದೂರು ಕೊಟ್ಟಿದ್ದಾರೆ. 

ದೂರಿನ ಅನ್ವಯ ಆರೋಪಿ ಉದ್ಯಮಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೋಲಿಸರು ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರ್ ಎಂಬಾತನನ್ನು​ ಪೊಲೀಸರು ಬಂಧಿಸಿದ್ದಾರೆ. 

ಕೇರಳದ ಪ್ರಮುಖ ಆಭರಣ ವ್ಯಾಪಾರಿಯಾಗಿರೋ ಬಾಬಿ ಚೆಮ್ಮನೂರ್ ವಿರುದ್ಧ ಬಿಎನ್‌ಎಸ್ ಮತ್ತು ಐಟಿ ಕಾಯ್ದೆಯ ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಪೊಲೀಸರು ವಿಚಾರಣೆ ನಡೆಸುವ ವೇಳೆ ಬಾಬಿ ಚೆಮ್ಮನೂರ್ ಈ ಆರೋಪ ತಳ್ಳಿ ಹಾಕಿದ್ದಾರೆ. 

ಬಾಬಿ ಚೆಮ್ಮನೂರ್ ಒಬ್ಬ ಇಂಟರ್‌ನ್ಯಾಶನಲ್ ಜ್ಯುವೆಲರ್ಸ್‌ನ ಡೈರೆಕ್ಟರ್ ಆಗಿದ್ದಾರೆ. ಆಕ್ಸಿಜನ್ ರೆಸಾರ್ಟ್‌ಗಳ ಮಾಲೀಕರಾಗಿದ್ದಾರೆ. ಜೊತೆಗೆ ಲೈಫ್ ವಿಷನ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಕೂಡ ಆಗಿದ್ದಾರೆ. 2012ರಲ್ಲಿ ಫುಟ್ಬಾಲ್ ದಂತಕಥೆ ಮರಡೋನಾ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಅಲ್ಲದೇ ಬ್ರಾಂಡ್ ಅಂಬಾಸಿಡರ್ ಆಗಿ ಸಹಿ ಹಾಕಿ ಕಣ್ಣೂರಿಗೆ ಕರೆತಂದಿದ್ದರು. ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು 812 ಕಿ.ಮೀ ಓಡಿ ವಿಶ್ವ ದಾಖಲೆ ಬರೆದಿದ್ದರು. ಯುನಿವರ್ಸಲ್ ಪೀಸ್ ಫೌಂಡೇಶನ್‌ನಿಂದ ಶಾಂತಿ ರಾಯಭಾರಿ ಪ್ರಶಸ್ತಿ ಕೂಡ ಗಿಟ್ಟಿಸಿಕೊಂಡರು.

ಇವರು ಸಾಕಷ್ಟು ಐಷಾರಾಮಿ ಕಾರುಗಳನ್ನ ಹೊಂದಿದ್ದಾರೆ. ಟ್ರಂಪ್ ಬಳಸಿದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಬಿಡ್ ಮಾಡಿದ್ದರು ಬಾಬಿ. ನಮ್ಮ ಮಳಿಗೆಗಳ ಉದ್ಘಾಟನೆಗಳಿಗೆ ಹನಿ ರೋಸ್ ಬರುತ್ತಿದ್ದರು. ಆಗ ನಾವು ಡ್ಯಾನ್ಸ್ ಮಾಡ್ತಿದ್ವಿ.. ಅವರಿಗೆ ಜೋಕ್ ಹೇಳುತ್ತಿದ್ದೆ. ಆದರೆ ಈಗ ನನ್ನ ವಿರುದ್ಧವೇ ದೂರು ಕೊಟ್ಟಿದ್ದಾರೆ ಅಂತಾ ಪೊಲೀಸರಿಗೆ ಬಾಬಿ ಆರೋಪ ತಳ್ಳಿ ಹಾಕಿದ್ದಾರೆ.

ಇನ್ನು ಉದ್ಯಮ ಬಾಬಿ ಚೆಮ್ಮನೂರ್ ಬಂಧನ ಬೆನ್ನಲ್ಲೇ ಮಾಧ್ಯಮ ಹೇಳಿಕೆ ನೀಡಿರುವ ನಟಿ ಹನಿರೋಸ್, 'ಇಂದು ನನಗೆ ಶಾಂತಿಯುತ ದಿನವಾಗಿದೆ. ಈ ಹಿಂದೆ ನಾನು ನನಗಾದ ಅನ್ಯಾಯದ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಮಾಹಿತಿ ನೀಡಿದ್ದೆ. ಅವರು ನನಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದರು ಎಂದು ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow