ಈ ಸಿನಿಮಾಗಳಿಂದ ಹೊರಬಂದ್ರಾ ಗರ್ಭಿಣಿ ಕಿಯಾರಾ ಅಡ್ವಾಣಿ? ಇಲ್ಲಿದೆ ಬಿಗ್ ಅಪ್ಡೇಟ್ಸ್

2023ರ ಆರಂಭದಲ್ಲಿ ದಾಂಪತ್ಯ ಜೀವನ ಆರಂಭಿಸಿದ ಬಾಲಿವುಡ್ ತಾರಾ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಿಯಾರಾ ಅಡ್ವಾಣಿ ಪ್ರಸ್ತುತ ಬಾಲಿವುಡ್ನಲ್ಲಿ ಬಹಳ ಬೇಡಿಕೆಯ ನಟಿ. ಪ್ರಸ್ತುತ, ಅವರ ಕೈಯಲ್ಲಿ 'ಟಾಕ್ಸಿಕ್' ಮತ್ತು 'ವಾರ್ 2' ನಂತಹ ಕ್ರೇಜಿ ಪ್ರಾಜೆಕ್ಟ್ಗಳಿವೆ. ಆದರೆ, ಕಿಯಾರಾ ಇತ್ತೀಚೆಗೆ ಗರ್ಭಿಣಿಯಾದರು. ಇದರಿಂದಾಗಿ ಅವರು ಕೆಲವು ಚಿತ್ರಗಳಿಂದ ಹೊರಗುಳಿಯಬೇಕಾಯಿತು ಎಂಬ ಮಾತು ಬಾಲಿವುಡ್ನಲ್ಲಿ ಕೇಳಿಬರುತ್ತಿದೆ.
ಪ್ರೆಗ್ನೆಂಟ್ ಆದ ನಂತರ ಕಿಯಾರಾ ಅಡ್ವಾಣಿ ಅವರಿಗೆ ‘ಡಾನ್ 3’ ಸಿನಿಮಾದ ಅವಕಾಶ ಕೈತಪ್ಪಿದೆ ಎನ್ನಲಾಗಿದೆ.ಕಿಯಾರಾ ಅಡ್ವಾಣಿ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಈಗಾಗಲೇ ಅವರು ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಪ್ರಸ್ತುತ ಅವರ ಕೈಯಲ್ಲಿ ಮಹತ್ವದ ಪ್ರಾಜೆಕ್ಟ್ಗಳು ಇವೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗೂ ಕಿಯಾರಾ ಅಡ್ವಾಣಿ ನಾಯಕಿ ಆಗಿದ್ದಾರೆ. ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್ ನಟನೆಯ ‘ವಾರ್ 2’ ಸಿನಿಮಾ ಕೂಡ ಕಿಯಾರಾ ಅಡ್ವಾಣಿ ಕೈಯಲ್ಲಿದೆ. ಆದರೆ ‘ಡಾನ್ 3’ ಚಿತ್ರ ಕೈತಪ್ಪುತ್ತಿದೆ ಎಂಬ ಸುದ್ದಿ ಹರಡಿದೆ.
ಫರ್ಹಾನ್ ಅಖ್ತರ್ ಅವರು ‘ಡಾನ್ 3’ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. ರಣವೀರ್ ಸಿಂಗ್ ಅವರು ಈ ಸಿನಿಮಾಗೆ ಹೀರೋ ಆಗಿದ್ದಾರೆ. ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾನಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಪ್ರೆಗ್ನೆಂಟ್ ಆದ ಬಳಿಕ ಶೂಟಿಂಗ್ನಲ್ಲಿ ಭಾಗಿಯಾಗುವುದು ಕಷ್ಟ ಎಂಬ ಕಾರಣಕ್ಕೆ ಕಿಯಾರಾ ಅಡ್ವಾಣಿ ಅವರು ‘ಡಾನ್ 3’ ಪಾತ್ರವರ್ಗದಿಂದ ಹೊರನಡೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಆಗಿದೆ.
ಕಿಯಾರಾ ಅಡ್ವಾನಿ ಅವರು ‘ಡಾನ್ 3’ ಸಿನಿಮಾ ತಂಡದಿಂದ ಹೊರಗೆ ನಡೆದಿದ್ದರಿಂದ ಈಗ ಬೇರೆ ನಟಿಯ ಆಯ್ಕೆ ಆಗಬೇಕಿದೆ. ಆದರೆ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಚಿತ್ರತಂಡದವರಾಗಲಿ, ಕಿಯಾರಾ ಅಡ್ವಾಣಿ ಅವರಾಗಲಿ ಏನನ್ನೂ ಹೇಳಿಲ್ಲ. ಚಿತ್ರತಂಡದಿಂದ ಅಧಿಕೃತ ಹೇಳಿಕೆ ಬಂದರಷ್ಟೇ ಖಚಿತ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






