ರಿಲೀಸ್ ಆಯ್ತು ‘ಕಾಮಿಡಿ ಕಿಲಾಡಿಗಳು ಸೀಸನ್ 5’ ಪ್ರೋಮೋ! ಎರಡು ದೊಡ್ಡ ಬದಲಾವಣೆ
ಕನ್ನಡದಲ್ಲಿ ಹಲವಾರು ರಿಯಾಲಿಟಿ ಶೋಗಳು ತೆರೆಗೆ ಬರುತ್ತಿರುತ್ತಿರುತ್ತವೆ. ಅದರಲ್ಲಿ ಕೆಲವೊಂದು ಶೋಗಳು ಅದ್ಭುತ ಪ್ರದರ್ಶನ ನೀಡಿ ಜನರ ಮನಗೆದ್ದರೆ, ಇನ್ನೂ ಕೆಲವು ಜನರಿಗೆ ಇಷ್ಟನೇ ಆಗಲ್ಲ. ಆದ್ರೆ ಕನ್ನಡದ ಟಾಪ್ ರಿಯಾಲಿಟಿ ಶೋಗಳಲ್ಲಿ ಒಂದಾದ ‘ಕಾಮಿಡಿ ಕಿಲಾಡಿಗಳು‘ ಮತ್ತೆ ತೆರೆಗೆ ಬರುತ್ತಿದೆ. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿತ್ತು. ಇದೀಗ ಮತ್ತೆ ಈ ಶೋ ಹೊಸ ರೀತಿಯಲ್ಲಿ ಜನರ ಮನಗೆಲ್ಲಲು ಸಜ್ಜಾಗಿದೆ.
ಕಾಮಿಡಿ ಕಿಲಾಡಿಗಳು ಈಗಾಗಲೇ 4 ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಸೀಸನ್ ಒಂದರಿಂದ ಹಿಡಿದು ಸೀಸನ್ ನಾಲ್ಕರವರೆಗೂ ಅದ್ಭುತ ಜನಮೆಚ್ಚುಗೆಯನ್ನು ಈ ಶೋ ಪಡೆದುಕೊಂಡಿತ್ತು. ಇದೀಗ ಮತ್ತೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಎಂಬುದಾಗಿ ತೆರೆಗೆ ಬರಲಿದೆ.
‘ಕಾಮಿಡಿ ಕಿಲಾಡಿಗಳು’ ಹೊಸ ಸೀಸನ್ ಆರಂಭ ಆಗುತ್ತಿದೆ. ಇದು ಐದನೇ ಸೀಸನ್. ಅಕ್ಟೋಬರ್ 25ರಂದು ಶೋ ಆರಂಭ ಆಗಲಿದೆ. ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ಶೋ ಪ್ರಸಾರ ಕಾಣಲಿದೆ. ಈ ಶೋನಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ರಕ್ಷಿತಾ ಅವರು ಜಡ್ಜ್ ಸ್ಥಾನದಲ್ಲಿ ಇದ್ದರು. ಅವರ ಬದಲು ತಾರಾ ಬಂದಿದ್ದಾರೆ. ಆ್ಯಂಕರಿಂಗ್ನಲ್ಲಿ ಮಾಸ್ಟರ್ ಆನಂದ್ ಬದಲು ನಿರಂಜನ್ ಬಂದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?