ಎಚ್ಚರ.. ಅತಿಯಾಗಿ ಬಾದಾಮಿ ಸೇವನೆಯಿಂದ ಅಪಾಯ ಗ್ಯಾರಂಟಿ..!

ಉತ್ತಮ ಆರೋಗ್ಯವನ್ನು ಹೊಂದಲು ಮಿತವಾಗಿ ಒಣ ಬೀಜ ಮತ್ತು ಒಣ ಹಣ್ಣುಗಳನ್ನು ತಿನ್ನಲಾಗುವುದು. ಬಾದಾಮಿಯನ್ನು ಭಾರತೀಯರು ಹೇರಳವಾಗಿ ಬಳಸುತ್ತಾರೆ. ಬಾದಾಮಿ ಹಾಲು, ಬೆಣ್ಣೆ, ಬಾದಾಮಿಯ ಸಿಹಿ ಹೀಗೆ ವಿವಿಧ ಬಗೆಯಲ್ಲಿ ಬಾದಾಮಿಯನ್ನು ಬಳಸುತ್ತಾರೆ. ಆದ್ರೆ ತಜ್ಞರ ಅಭಿಪ್ರಾಯದ ಪ್ರಕಾರ ಒಬ್ಬ ವ್ಯಕ್ತಿ ದಿನಕ್ಕೆ 8-10 ಬಾದಾಮಿಯನ್ನು ಸೆವಿಸಬೇಕು. ಅಧಿಕ ಬಾದಾಮಿಯನ್ನು ಸೇವಿಸಬಾರದು. ಮಿತಿಗಿಂತ ಹೆಚ್ಚು ಬಾದಾಮಿಯನ್ನು ಸೇವಿಸಿದರೆ ಇದು ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಅಷ್ಟಕ್ಕೂ ಬಾದಾಮಿಯನ್ನು ಹೆಚ್ಚು ತಿನ್ನುವುದರಿಂದ ಆಗುವ ಅನನುಕೂಲಗಳೇನು ಎಂಬುದನ್ನು ನಾವು ಇಂದು ತಿಳಿಯೋಣ.
ಅತಿಯಾದ ಬಾದಾಮಿ ಸೇವನೆಯಿಂದ ಅನಾನುಕೂಲ :
ಮಲಬದ್ಧತೆ ಮತ್ತು ಗ್ಯಾಸ್ : ಬಾದಾಮಿಯಲ್ಲಿ ಫೈಬರ್ ಹೇರಳವಾಗಿದ್ದು, ಇದು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಆದರೆ ಹೆಚ್ಚು ಬಾದಾಮಿಗಳನ್ನು ಸೇವಿಸಿದರೆ ಮಲಬದ್ಧತೆ, ಗ್ಯಾಸ್, ಬೇಧಿ ಸಮಸ್ಯೆ ಶುರುವಾಗುತ್ತದೆ. ಏಕೆಂದರೆ ನಮ್ಮ ದೇಹಕ್ಕೆ ಹೆಚ್ಚಿನ ಫೈಬರ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೆಚ್ಚು ಬಾದಾಮಿ ಸೇವನೆ ಮಾಡಿದ್ರೆ ನಾವು ಹೆಚ್ಚು ನೀರು ಕುಡಿಯಬೇಕು. ಅದು ಅಸಾಧ್ಯವೆನ್ನುವವರು ಬಾದಾಮಿಯನ್ನು ಮಿತವಾಗಿ ಸೇವನೆ ಮಾಡುವುದು ಒಳ್ಳೆಯದು.
ದೌರ್ಬಲ್ಯ, ಮಂದ ದೃಷ್ಟಿ : 100 ಗ್ರಾಂ (ಅರ್ಧ ಕಪ್) ಬಾದಾಮಿಯು 25 ಗ್ರಾಂ ವಿಟಮಿನ್ ಇ ಅನ್ನು ಹೊಂದಿರುತ್ತದೆ. ನಮಗೆ ಪ್ರತಿ ದಿನ ಬೇಕಾಗಿರುವ ವಿಟಮಿನ್ ಇ ಕೇವಲ 15 ಗ್ರಾಂ ಮಾತ್ರ. ಅಂತಹ ಪರಿಸ್ಥಿತಿಯಲ್ಲಿ, ನೀವು 1 ಕಪ್ ಬಾದಾಮಿ ಸೇವಿಸಿದರೆ, ದೈನಂದಿನ ಅಗತ್ಯಕ್ಕಿಂತ ವಿಟಮಿನ್ ಇ 3 ಪಟ್ಟು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಸಮಸ್ಯೆ ಶುರುವಾಗುತ್ತದೆ. ದೌರ್ಬಲ್ಯ, ದೃಷ್ಟಿ ಮಂದವಾಗುವ ಸಮಸ್ಯೆ ಕಾಡುತ್ತದೆ.
ಕಡಿಮೆಯಾಗುತ್ತೆ ಔಷಧಿ ಪರಿಣಾಮ : 100 ಗ್ರಾಂ ಬಾದಾಮಿಯು 2.4 ಮಿಲಿಗ್ರಾಂ ಮ್ಯಾಂಗನೀಸ್ ಅನ್ನು ಹೊಂದಿರುತ್ತದೆ. ಪ್ರತಿ ದಿನ ನಮ್ಮ ದೇಹಕ್ಕೆ 2.4 ಮಿಲಿಗ್ರಾಂ ಮ್ಯಾಂಗನೀಸ್ ಸಾಕಾಗುತ್ತದೆ. ಬಾದಾಮಿ ಹೊರತಾಗಿ ಧಾನ್ಯಗಳು, ಚಹಾ, ಹಸಿರು ತರಕಾರಿಗಳಲ್ಲಿಯೂ ಮ್ಯಾಂಗನೀಸ್ ಇರುತ್ತದೆ. ದೇಹದಲ್ಲಿ ಮ್ಯಾಂಗನೀಸ್ ಪ್ರಮಾಣವು ಹೆಚ್ಚಾದರೆ, ರಕ್ತದೊತ್ತಡದ ಔಷಧಿ ಸೇರಿದಂತೆ ಕೆಲ ಔಷಧಿಗಳ ಪರಿಣಾಮವು ನಮ್ಮ ದೇಹದಲ್ಲಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.
ತೂಕ ಹೆಚ್ಚಾಗುವ ಅಪಾಯ : ಬಾದಾಮಿಯಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳು ಅಧಿಕವಾಗಿರುತ್ತವೆ. 100 ಗ್ರಾಂ ಬಾದಾಮಿಯು ಸುಮಾರು 50 ಗ್ರಾಂ ಮೊನೊಸಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದು ನಮ್ಮ ಹೃದಯಕ್ಕೆ ಪ್ರಯೋಜನಕಾರಿಯಾಗಿದೆ. ಅದಕ್ಕೆ ತಕ್ಕಂತೆ ನಾವು ದೈಹಿಕ ಚಟುವಟಿಕೆ ಮಾಡ್ಬೇಕು. ಕುಳಿತು ಕೆಲಸ ಮಾಡುವ ವೇಳೆ ಹೆಚ್ಚು ಬಾದಾಮಿ ಸೇವನೆ ಮಾಡಿದ್ರೆ ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭವಾಗುತ್ತದೆ. ಇದ್ರಿಂದ ತೂಕ ಹೆಚ್ಚಾಗುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






