ಪ್ಯಾನ್ ಕಾರ್ಡ್ ಕಳೆದಿದೆಯೇ..? ಆನ್’ಲೈನ್’ನಲ್ಲಿ ಹೀಗೆ ಡೌನ್ ಲೋಡ್ ಮಾಡಿಕೊಳ್ಳಿ

ಡಿಸೆಂಬರ್ 31, 2024 - 10:07
 0  18
ಪ್ಯಾನ್ ಕಾರ್ಡ್ ಕಳೆದಿದೆಯೇ..? ಆನ್’ಲೈನ್’ನಲ್ಲಿ ಹೀಗೆ ಡೌನ್ ಲೋಡ್ ಮಾಡಿಕೊಳ್ಳಿ

ಇಂದಿನ ಗಡಿಬಿಡಿಯ ದಿನಗಳಲ್ಲಿ ಪ್ಯಾನ್ ಕಾರ್ಡ್ ಕಳೆದುಕೊಳ್ಳುವುದು ಸಾಮಾನ್ಯವಾಗಿದೆ. ಪ್ಯಾನ್ ಕಾರ್ಡ್ ಹೊಂದಿರುವವರು ಒಮ್ಮೆಯಾದರೂ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಾರೆ. ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋದರೆ ಚಿಂತಿಸಬೇಕಾಗಿಲ್ಲ. ಇ-ಪ್ಯಾನ್ ಕಾರ್ಡ್ ಅನ್ನು ಸುಲಭವಾಗಿ ಡೌನ್ಲೋಡ್ ಮಾಡಬಹುದು. ಅಥವಾ ಪ್ಯಾನ್ ಕಾರ್ಡ್ ಅನ್ನು ಮರುಮುದ್ರಣ ಮಾಡಬಹುದು. ಒಂದು ವೇಳೆ ಪಾನ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು? ನಿಮಗೆ ಪಾನ್ ನಂಬರ್ ಗೊತ್ತಿದ್ದರೆ ಸಾಕು ಪಾನ್ ಕಾರ್ಡ್ ಮರಳಿ ಪಡೆಯಬಹುದು. ಆನ್​ಲೈನಲ್ಲೂ ನೀವು ಈ ಕೆಲಸ ಮಾಡಬಹುದು.

ಇದರ ವಿಧಾನಗಳು ಈ ಕೆಳಕಂಡಂತಿವೆ:

  • ಪಾನ್ ನಂಬರ್​ನ ಅಧಿಕೃತ ವೆಬ್​ಸೈಟ್ ಟಿಐಎನ್–ಎನ್​ಎಸ್​ಡಿಎಲ್​ಗೆ ಭೇಟಿ ನೀಡಿ
  • ನಂತರ ಪಾನ್ ಕಾರ್ಡ್ ರೀಪ್ರಿಂಟ್ ಆಪ್ಶನ್ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿ
  • ನಂತರ ಹೆಸರು, ಜನ್ಮದಿನಾಂಕ, ಮೊಬೈಲ್ ನಂಬರ್ ಮೊದಲಾದ ಅಗತ್ಯ ಮಾಹಿತಿ ಭರ್ತಿ ಮಾಡಿ ಸಬ್ಮಿಟ್ ಮಾಡಿ.
  • ಈಗ ಟೋಕನ್ ನಂಬರ್ ಜನರೇಟ್ ಆಗುತ್ತದೆ. ಅರ್ಜಿದಾರರ ನೊಂದಾಯಿತ ಇಮೇಲ್​ಗೆ ಈ ಟೋಕನ್ ನಂಬರ್ ಕಳುಹಿಸಲಾಗುತ್ತದೆ. ಈ ನಂಬರ್ ಅನ್ನು ಅಪ್ಲಿಕೇಶನ್ ಸಲ್ಲಿಕೆಗೆ ಬಳಸಬೇಕಾಗುತ್ತದೆ.
  • ಟೋಕನ್ ನಂಬರ್ ಜನರೇಟ್ ಆದ ಬಳಿಕ ಪೊರ್ಟಲ್​ನಲ್ಲಿ ಪರ್ಸನಲ್ ಡೀಟೇಲ್ಸ್ ಪುಟದಲ್ಲಿರುವ ಇತರ ಮಾಹಿತಿಯನ್ನು ತುಂಬಿಸಿ.
  • ಇದಾದ ಬಳಿಕ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಇರುತ್ತದೆ. ಇದರಲ್ಲೂ ಮೂರು ವಿಧಾನಗಳಿವೆ. ಭೌತಿಕವಾಗಿ ಅರ್ಜಿ ದಾಖಲೆಯನ್ನು ಕಚೇರಿಗೆ ಹೋಗಿ ಸಲ್ಲಿಸುವುದು ಒಂದು ವಿಧಾನವಾದರೆ, ಇ–ಕೆವೈಸಿ ಮೂಲಕ ಡಿಜಿಟಲ್ ಆಗಿ ಅರ್ಜಿ ಸಲ್ಲಿಸಬಹುದು. ಮೂರನೇ ವಿಧಾನವೆಂದರೆ ಇ–ಸಹಿ ಮೂಲಕ ಸಲ್ಲಿಸುವುದು.
  • ಭೌತಿಕವಾಗಿ ಅರ್ಜಿಯನ್ನು ಕಚೇರಿಗೆ ಕಳುಹಿಸುವುದಾದರೆ ಮೊದಲಿಗೆ ಮೇಲೆ ತಿಳಿಸಿದ ಪೋರ್ಟಲ್​ನಲ್ಲಿ ಅಪ್ಲಿಕೇಶನ್ ಪೇಮೆಂಟ್ ಮಾಡಬೇಕು. ನಂತರ ಸ್ವಿಕೃತಿ ಅರ್ಜಿ ತಯಾರಾಗುತ್ತದೆ. ಅದರ ಪ್ರಿಂಟ್ ತೆಗೆದುಕೊಳ್ಳಿ. ನಂತರ ಡ್ರೈವಿಂಗ್ ಲೈಸೆನ್ಸ್, ಆಧಾರ್, ವೋಟರ್ ಐಡಿ, ಜನನ ಪ್ರಮಾಣಪತ್ರ, ಪಾಸ್​ಪೋರ್ಟ್, ಎಸ್ಸೆಸ್ಸೆಲ್ಸಿ ಪ್ರಮಾಣಪತ್ರ ಮತ್ತಿತರ ಯಾವುದಾದರೂ ಅಗತ್ಯ ದಾಖಲೆಗಳನ್ನು ಜೊತೆಯಲ್ಲಿ ಕವರ್​ಗೆ ಸೇರಿಸಬೇಕು. ಎನ್​ವಿಲೋಪ್ ಮೇಲೆ ಸ್ವೀಕೃತಿ ಸಂಖ್ಯೆ ನಮೂದಿಸಿ, ಅಪ್ಲಿಕೇಶನ್ ಫಾರ್ ರೀಪ್ರಿಂಟ್ ಆಫ್ ಪಾನ್ ಎಂದು ಬರೆದಿರಬೇಕು. ಅದನ್ನು ಎನ್​ಎಸ್​ಡಿಎಲ್​ನ ಪಾನ್ ಸರ್ವಿಸ್ ಯೂನಿಟ್​ಗಳಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸಿಕೊಡಬೇಕು.
  • ಆನ್​ಲೈನ್​ನಲ್ಲಿ ಸಲ್ಲಿಸಲು:
  • ಇನ್ನು, ಆನ್​ಲೈನ್ ಮೂಲಕವೇ ನೀವು ಅರ್ಜಿ ಸಲ್ಲಿಸಲು ನಿರ್ಧರಿಸಿದಲ್ಲಿ ಇದಕ್ಕೆ ಆಧಾರ್ ನಂಬರ್ ಬಳಸಬಹುದು. ಆಧಾರ್​ಗೆ ನೀಡಲಾದ ನಿಮ್ಮ ನೊಂದಾಯಿತ ಮೊಬೈಲ್ ನಂಬರ್​ಗೆ ಬರುವ ಒಟಿಪಿ ಮೂಲಕ ಅರ್ಜಿ ವಿವರ ತುಂಬಬಹುದು. ಅರ್ಜಿ ಸಲ್ಲಿಸುವಾಗ ಡಿಜಿಟಲ್ ಸಿಗ್ನೇಚರ್ ಹಾಕಬೇಕಾಗುತ್ತದೆ.
  • ನಂತರ ನಿಮ್ಮ ಪಾಸ್​ಪೋರ್ಟ್ ಗಾತ್ರದ ಫೋಟೋ, ಸಹಿ ಮತ್ತಿತರ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಇಮೇಜ್​ಗಳನ್ನು ಅಪ್​ಲೋಡ್ ಮಾಡಬೇಕು. ಇದಾದ ಬಳಿಕ ಅಪ್ಲಿಕೇಶನ್ ಫಾರ್ಮ್ ಅನ್ನು ದೃಢಪಡಿಸಲು ಮತ್ತೊಮ್ಮೆ ಒಟಿಪಿ ಜನರೇಟ್ ಆಗುತ್ತದೆ.
  • ಇಲ್ಲಿ ನಿಮಗೆ ಎರಡು ರೀತಿಯ ಪಾನ್ ಕಾರ್ಡ್ ಅವಕಾಶ ಇರುತ್ತದೆ. ಒಂದು ಭೌತಿಕ ಪಾನ್ ಕಾರ್ಡ್. ಮತ್ತೊಂದು ಇ ಪಾನ್ ಕಾರ್ಡ್. ಎಲೆಕ್ಟ್ರಾನಿಕ್ ಪಾನ್ ಕಾರ್ಡ್ ಪಡೆಯಲು ಇಮೇಲ್ ವಿಳಾಸ ಕೊಡಬೇಕು. ಭೌತಿಕ ಪಾನ್ ಕಾರ್ಡ್ ಬೇಕೆಂದರೆ ಪಾನ್ ಡೇಟಾಬೇಸ್​ನಲ್ಲಿ ನೀವು ಇತ್ತೀಚೆಗೆ ನೀಡಿರುವ ವಿಳಾಸಕ್ಕೆ ಪಾನ್ ಕಾರ್ಡ್ ಪೋಸ್ಟ್ ಮೂಲಕ ಬರುತ್ತದೆ.
  • ಆಫ್​ಲೈನ್ ವಿಧಾನ:
  • ರಿಕ್ವೆಸ್ಟ್ ಫಾರ್ ನ್ಯೂ ಪಾನ್ ಕಾರ್ಡ್ ಹೆಸರಿನ ಫಾರ್ಮ್ ಅನ್ನು ಆನ್​ಲೈನ್ ಮೂಲಕ ಡೌನ್​ಲೋಡ್ ಮಾಡಿಕೊಂಡು, ಅದನ್ನು ಭರ್ತಿ ಮಾಡಬೇಕು. ಎರಡು ಪಾಸ್​ಪೋರ್ಟ್ ಗಾತ್ರದ ಫೋಟೋ, ಐಡಿ ಪ್ರೂಫ್, ವಿಳಾಸದ ಪ್ರೂಫ್, ಪ್ಯಾನ್ ಪ್ರೂಫ್ ದಾಖಲೆಗಳನ್ನು ಸೇರಿಸಿ ಎನ್​ಎಸ್​ಡಿಎಲ್ ಫೆಸಿಲಿಟೇಶನ್ ಸೆಂಟರ್​ಗೆ ಕಳುಹಿಸಬೇಕು. ಎರಡು ವಾರಗಳಲ್ಲಿ ಪಾನ್ ಕಾರ್ಡ್ ನಿಮ್ಮ ವಿಳಾಸಕ್ಕೆ ಬರುತ್ತದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow