Aadhaar Card: ಆಧಾರ್ ಕಾರ್ಡ್ ಕಳೆದು ಹೋದರೆ ಮರಳಿ ಪಡೆಯಲು ಈ ಕ್ರಮ ಅನುಸರಿಸಿ!

ಡಿಸೆಂಬರ್ 30, 2024 - 09:14
 0  10
Aadhaar Card: ಆಧಾರ್ ಕಾರ್ಡ್ ಕಳೆದು ಹೋದರೆ ಮರಳಿ ಪಡೆಯಲು ಈ ಕ್ರಮ ಅನುಸರಿಸಿ!

ಭಾರತದಲ್ಲಿ ಪ್ರತಿಯೊಬ್ಬ ನಾಗರಿಕ ಆಧಾರ್ ಕಾರ್ಡ್ ಹೊಂದುವುದು ಬಹುಮುಖ್ಯ. ಇಲ್ಲವಾದಲ್ಲಿ ಸರ್ಕಾರದ ಅತ್ಯಮೂಲ್ಯ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಇದೇ ಕಾರಣಕ್ಕೆ ಪ್ರತಿಯೊಬ್ಬರು ಆಧಾರ್ಕಾರ್ಡ್ಗಳನ್ನ ಹೊಂದಿರುತ್ತಾರೆ. 2009ರಲ್ಲಿ ಭಾರತ ವಾಸಿಗಳ ಜಾಗತಿಕ ಗುರುತಿನ ಮನ್ನಣೆಗಾಗಿ ಪ್ರಾರಂಭಿಸಲಾದ ಆಧಾರ್ ಹಾಗೂ ಇದರಲ್ಲಿರುವ 12 ಅಂಕಿಗಳ ಸಂಖ್ಯೆ ಪ್ರತಿಯೊಬ್ಬ ಭಾರತೀಯನ ಗುರುತಾಗಿ ಮಾರ್ಪಟ್ಟಿದೆ. ಆಧಾರ್ ಕಾರ್ಡ್ಬಂದು 14 ವರ್ಷಗಳಾಗಿವೆ. ಇಂದು ಇದರಲ್ಲಿ ಅನೇಕ ಬದಲಾವಣೆ ತರಲಾಗಿದ್ದು ಆನ್ಲೈನ್ ಮೂಲಕವೇ ಹೆಸರು, ವಿಳಾಸವನ್ನು, ಫೋಟೋ  ಕೂಡ ಬದಲಿಸಬಹುದು. ಹೀಗಿರುವಾಗ ಎಲ್ಲಾದರು ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು?, ಇದನ್ನು ಮರಳಿ ಪಡೆಯುವುದು ಹೇಗೆ? ಎಂಬುದು ಅನೇಕರಿಗೆ ತಿಳಿದಿಲ್ಲ. ಕುರಿತ ಮಾಹಿತಿ ಇಲ್ಲಿದೆ.

ಆಧಾರ್ ಕಾರ್ಡ್ ಮರಳಿ ಪಡೆಯೋದು ಹೇಗೆ?
ಕಳೆದು ಹೋದ ಆಧಾರ್ ಕಾರ್ಡ್ ಮರಳಿ ಪಡೆಯಲು ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ 1:  UIDAI ಅಧಿಕೃತ ವೆಬ್ ಸೈಟ್ uidai.gov.in ಭೇಟಿ ನೀಡಿ.
ಹಂತ 2: ಬಳಿಕ ಹೋಮ್ ಪೇಜ್ ನಲ್ಲಿ Aadhaar Services tabಗೆ ಹೋಗಿ ಡ್ರಾಪ್ ಮೆನುವಿನಿಂದ My Aadhaar ಆಯ್ಕೆ ಮಾಡಿ.
ಹಂತ 3:  ನಂತರ 'Retrieve Lost or Forgotten EID/UID'ಆಯ್ಕೆ ಮಾಡಿ.
ಹಂತ 4: ಬಳಿಕ ನೀವು ನಿಮ್ಮ ವೈಯಕ್ತಿಕ ಮಾಹಿತಿಗಳಾದ ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ -ಮೇಲ್ ವಿಳಾಸ ನೀಡಬೇಕು.
ಹಂತ 5: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ (OTP) ಬರುತ್ತದೆ. ವೆಬ್ ಸೈಟ್ ನಲ್ಲಿ ಅದನ್ನು ನಮೂದಿಸಿ
ಹಂತ 6: ನಿಮ್ಮ ಮೊಬೈಲ್ ಗೆ ಈಗ UID/EID ಸಂಖ್ಯೆಯನ್ನು ಕಳುಹಿಸಲಾಗುತ್ತದೆ.
ಹಂತ 7:  UID ಸಂಖ್ಯೆ ಬಳಸಿ ನಿಮ್ಮ ಆಧಾರ್ ಕಾರ್ಡ್ ಅನ್ನು ಆನ್ ಲೈನ್ ನಲ್ಲಿ ಡೌನ್ ಲೋಡ್ ಮಾಡಬಹುದು.

ಆಧಾರ್ ಜೊತೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು
ನೀವು ಆಧಾರ್ ಕಾರ್ಡ್ ಕಳೆದುಕೊಂಡಿದ್ರೆ ಅದನ್ನು ಮರಳಿ ಪಡೆಯಲು ಮೇಲೆ ತಿಳಿಸಿದ ವಿಧಾನ ಅನುಸರಿಸಬೇಕೆಂದ್ರೆ ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಗೆ ಲಿಂಕ್ ಆಗಿರೋದು ಕಡ್ಡಾಯ. ಒಂದು ವೇಳೆ ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಗೆ ಲಿಂಕ್ ಆಗಿಲ್ಲವೆಂದ್ರೆ ತಕ್ಷಣ ಅದನ್ನು ಲಿಂಕ್ ಮಾಡಿಸಿ. ಮೊಬೈಲ್ ಸಂಖ್ಯೆಯನ್ನು ಆಧಾರ್ ಗೆ ಲಿಂಕ್ ಮಾಡಲು ನೀವು ಸಮೀಪದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಪ್ರಕ್ರಿಯೆಗೆ ನೀವು ಯಾವುದೇ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಾದ ಅಗತ್ಯವಿಲ್ಲ. ಪ್ರಕ್ರಿಯೆಗೆ ಆಧಾರ್ ಕೇಂದ್ರದಲ್ಲಿ 50 ರೂ. ಶುಲ್ಕ ವಿಧಿಸುತ್ತಾರೆ. UIDAI ವೆಬ್ ಸೈಟ್ ನಲ್ಲಿ ನೀವು ಆಧಾರ್ ಗೆ ಸಂಬಂಧಿಸಿ ಯಾವುದೇ ಅಪ್ಡೇಟ್ ಅಥವಾ ತಿದ್ದುಪಡಿ ಮಾಡಬೇಕಿದ್ರೂ ಆಧಾರ್ ಗೆ ನಿಮ್ಮ ಮೊಬೈಲ್ ಸಂಖ್ಯೆ ಲಿಂಕ್ ಆಗಿರೋದು ಅಗತ್ಯ. ಏಕೆಂದ್ರೆ OTP ಮೂಲಕ ಮಾತ್ರ ಬದಲಾವಣೆ ಮಾಡಲು ಸಾಧ್ಯ. OTP ಕಳುಹಿಸೋ ಕಾರಣ ಮೊಬೈಲ್ ಆಧಾರ್ ಗೆ ಲಿಂಕ್ ಆಗಿರೋದು ಅಗತ್ಯ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow