BBK11: ಬಿಗ್ ಮನೆಯಲ್ಲಿ ಮಿಸ್ ಆಗಿ ಚಿಕನ್ ತಿಂದ ಧನರಾಜ್! ಬಳಿಕ ಆತನ ಗೋಳು ಹೇಗಿತ್ತು ಗೊತ್ತಾ?

ಡಿಸೆಂಬರ್ 25, 2024 - 20:02
 0  9
BBK11: ಬಿಗ್ ಮನೆಯಲ್ಲಿ ಮಿಸ್ ಆಗಿ ಚಿಕನ್ ತಿಂದ ಧನರಾಜ್! ಬಳಿಕ ಆತನ ಗೋಳು ಹೇಗಿತ್ತು ಗೊತ್ತಾ?

ಬಿಗ್ ಬಾಸ್ ಸೀಸನ್ 11 ಬಹಳ ಕುತೂಹಲಕಾರಿಯಾಗಿ ಮೂಡಿ ಬರುತ್ತಿದೆ. ಕೆಲವೇ ಸ್ಪರ್ಧಿಗಳು ಇರುವ ಬಿಗ್ ಮನೆಯಲ್ಲಿ ಪೈಪೋಟಿ ಹೆಚ್ಚಾಗಿದೆ. ಅದರಂತೆ ಈ ವಾರ ಬಿಗ್ ಮನೆಯಲ್ಲಿ ರೆಸಾರ್ಟ್ ಟಾಸ್ಕ್ ಕೊಡಲಾಗಿದೆ. 

ಇಲ್ಲಿ ಸ್ಪರ್ಧಿಗಳ ಕ್ವಾಟ್ಲೆಗಳು ವೀಕ್ಷಕರಿಗೆ ಸಖತ್ ಮನರಂಜನೆ ಕೊಡುತ್ತಿದೆ. ಇನ್ನೂ ಸ್ಟ್ರಾಂಗ್ ಸ್ಪರ್ಧಿ ಗಳಲ್ಲಿ ಧನರಾಜ್ ಕೂಡ ಒಬ್ಬರು.  ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಅವರು ತಮ್ಮ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ನಾಮಿನೇಷನ್ ಆದಾಗೆಲ್ಲ ಅವರನ್ನು ಅಭಿಮಾನಿಗಳು ಸೇವ್ ಮಾಡುತ್ತಿದ್ದಾರೆ. ಆದರೆ ಈಗ ದೊಡ್ಮನೆ ಒಳಗಡೆ ಧನರಾಜ್ ಆಚಾರ್ ಅವರು ಒಂದು ಎಡವಟ್ಟು ಮಾಡಿಕೊಂಡಿದ್ದಾರೆ.

ಬಿಗ್ ಬಾಸ್​ ಮನೆಯಲ್ಲಿ ಸ್ಪರ್ಧಿಗಳಿಗೆ ರೆಸಾರ್ಟ್ ಟಾಸ್ಕ್ ನೀಡಲಾಗಿದೆ. ಈ ವೇಳೆ ಧನರಾಜ್ ಅವರು ಮಿಸ್ಸಾಗಿ, ಗೊತ್ತಿಲ್ಲದೆ ಚಿಕನ್ ಸೇವಿಸಿದ್ದಾರೆ. ಅದು ಗೊತ್ತಾದ ಬಳಿಕ ಅವರು ಆತಂಕ ಮಾಡಿಕೊಂಡಿದ್ದಾರೆ. ತಾವು ತಿನ್ನುತ್ತಿರುವುದು ಚಿಕನ್ ಎಂಬುದು ಧನರಾಜ್ ಅವರಿಗೆ ತಿಳಿದಿರಲಿಲ್ಲ. ‘ಅದು ಚಿಕನ್’ ಎಂದು ಭವ್ಯಾ ಗೌಡ ಅವರು ಖಚಿತಪಡಿಸಿದರು. ಅದು ತಿಳಿದ ಬಳಿಕ ಧನರಾಜ್ ಅವರ ಟೆನ್ಷನ್ ಜಾಸ್ತಿ ಆಗಿದೆ.

ಅಲ್ಲದೆ ತಾವು ತಿಂದಿದ್ದು ಚಿಕನ್ ಎಂಬುದು ಗೊತ್ತಾದ ಬಳಿಕ ಕೂಡಲೇ ಹೋಗಿ ಬಾಯಿ ತೊಳೆದುಕೊಂಡಿದ್ದಾರೆ. ಬಿಗ್​ ಬಾಸ್ ಮನೆಯೊಳಗೆ ಧನರಾಜ್ ಅವರ ಗಲಿಬಿಲಿ ಕಂಡು ಭವ್ಯಾ ಗೌಡ, ರಜತ್, ಮೋಕ್ಷಿತಾ ಮುಂತಾದವರು ಬಿದ್ದು ಬಿದ್ದು ನಕ್ಕಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow