ವಿದ್ಯಾರ್ಥಿಗೆ ದಂಡಿಸುವ ನೆಪದಲ್ಲಿ ಹಲ್ಲು ಮುರಿದ್ರಾ ಶಿಕ್ಷಕಿ.? ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪೋಷಕರು

ಬೆಂಗಳೂರು: ಶಿಕ್ಷಕರಾದವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ದೀಪವಾಗಬೇಕು. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಬ್ದಾರಿ ಶಿಕ್ಷಕರದ್ದು. ಆದರೆ ಇಲ್ಲೊಬ್ಬಾರಾ ಶಿಕ್ಷಕಿ ನೀರಿನಲ್ಲಿ ಆಟವಾಡಿದ್ದಕ್ಕೆ ವಿದ್ಯಾರ್ಥಿಯ ಹಲ್ಲು ಮುರಿಯುವ ಹಾಗೆ ಹೊಡೆದಿದ್ದಾರೆ.
ಜಯನಗರದ ಹೋಲಿ ಕ್ರಿಸ್ಟ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಅಶ್ವಿನ್ ಎಂಬ ವಿದ್ಯಾರ್ಥಿ ಗುರುವಾರ ಮಧ್ಯಾಹ್ನ ಊಟದ ಸಮಯದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದನು. ಇದರಿಂದ ಕೋಪಗೊಂಡ ಹಿಂದಿ ವಿಷಯ ಶಿಕ್ಷಕಿ ಅಜ್ಮತ್ ವಿದ್ಯಾರ್ಥಿ ಅಶ್ವಿನ್ ಮುಖಕ್ಕೆ ಕಟ್ಟಿಗೆಯಿಂದ ಹೊಡೆದಿದ್ದಾರೆ. ಇದರಿಂದ ವಿದ್ಯಾರ್ಥಿ ಅಶ್ವಿನ್ನ ಹಲ್ಲು ಮುರಿದಿದೆ.
ವಿದ್ಯಾರ್ಥಿ ಅಶ್ವಿನ್ನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕ್ಷಕಿ ಅಜ್ಮತ್ ವಿರುದ್ಧ ವಿದ್ಯಾರ್ಥಿ ಅಶ್ವಿನ್ ತಂದೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿಕ್ಷಕಿ ಅಜ್ಮತ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶಿಕ್ಷಕಿ ಅಜ್ಮತ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಅಶ್ವಿನ್ ಪೋಷಕರು ಶಿಕ್ಷಕಿ ಅಜ್ಮತ್ಗೆ ನೋಟಿಸ್ ನೀಡಿದ್ದಾರೆ.
ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ವಿದ್ಯಾರ್ಥಿಯ ಪೋಷಕರು ಶಾಲೆಗೆ ನುಗ್ಗಿ, ಶಿಕ್ಷಕಿಯ ಜಾತಿ ಯಾವುದು ಅಂತ ಪ್ರಶ್ನೆ ಮಾಡಿದ್ದಾರೆ. ಮಗುವಿಗೆ ಏನಾಗಿದೆ ಅಂತ ಕೇಳದೆ, ನಿಮ್ಮ ಜಾತಿ ಯಾವುದು ಅಂತ ಕೇಳಿ ಗಲಾಟೆ ಮಾಡಿದ್ದಾರೆ ಎಂದು ಶಿಕ್ಷಕಿ ಅಜ್ಮತ್ ಹೇಳಿದರು.
ಪೋಷಕರು ಶಾಲೆಗೆ ಬರುತ್ತಿದ್ದಂತೆ ನೀನು ಯಾವ ಜಾತಿ ಶಿಕಕ್ಷಕಿ ಅಂತ ಕೇಳಿದ್ದಾರೆ. ನೀನು ಹಿಂದೂನಾ ಅಥವಾ ಮುಸ್ಲಿಂ ಶಿಕ್ಷಕಿಯಾ ಅಂತಾ ಪ್ರಶ್ನೆ ಮಾಡಿದ್ದಾರೆ. ನಾನು ಪೋಷಕರ ಕಾಲು ಹಿಡದು ಕೇಳಿಕೊಂಡಿದ್ದೇನೆ. ನನ್ನ ಕಡೆಯಿಂದ ಯಾವುದೇ ತಪ್ಪಿಲ್ಲ. ಹಿಂದೂ ಮಕ್ಕಳಿಗೆ ನಾವು ಯಾವುದೇ ಟಾರ್ಗೇಟ್ ಮಾಡಿಲ್ಲ ಎಂದು ಶಿಕ್ಷಕಿ ಕಣ್ಣೀರು ಹಾಕ್ತೀದರು.
ನಿಮ್ಮ ಪ್ರತಿಕ್ರಿಯೆ ಏನು?






