ಖ್ಯಾತ ನಟನ ಪುತ್ರಿಗೆ ನಗ್ನ ಫೋಟೋ ಕಳಿಸುವಂತೆ ಲೈಂಗಿ*ಕ ಕಿರುಕುಳ! ಮುಂದೇನಾಯ್ತು..?
ಮುಂಬೈ: ಸೈಬರ್ ಜಾಗೃತಿ ಸಪ್ತಾಹ 2025 ಕಾರ್ಯಕ್ರಮವನ್ನು ಉದ್ಘಾಟಿಸಿದ ನಟ ಅಕ್ಷಯ್ ಕುಮಾರ್, ತಮ್ಮ ಕುಟುಂಬದ ಮೇಲೆ ಸಂಭವಿಸಿದ ಆಘಾತಕಾರಿ ಘಟನೆ ಬಗ್ಗೆ ಧೈರ್ಯವಾಗಿ ಮಾತನಾಡಿದರು. ತಮ್ಮ 13 ವರ್ಷದ ಪುತ್ರಿ ನಿತಾರಾ ಸೈಬರ್ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂದು ಅಕ್ಷಯ್ ಕುಮಾರ್ ಬಹಿರಂಗವಾಗಿ ಹೇಳಿದ್ದಾರೆ.
ನನ್ನ 13 ವರ್ಷದ ಪುತ್ರಿ ಆನ್ಲೈನ್ನಲ್ಲಿ ಗೇಮ್ ಆಡುತ್ತಿದ್ದರು. ಆನ್ಲೈನ್ನಲ್ಲಿ ಅನಾಮಿಕನೊಟ್ಟಿಗೆ ಗೇಮ್ ನಡೆದಿತ್ತು. ಆ ಬದಿಯ ವ್ಯಕ್ತಿ ನೀನು ಪುರುಷನೋ ಅಥವಾ ಮಹಿಳೆಯೋ ಎಂದು ಕೇಳಿದ್ದಾನೆ. ನನ್ನ ಪುತ್ರಿ ತಾನು ಯುವತಿ ಎಂದು ಹೇಳಿದ ಕೂಡಲೇ, ಆ ಬದಿಯಲ್ಲಿದ್ದ ವ್ಯಕ್ತಿ ಬೆತ್ತಲೆ ಚಿತ್ರಗಳನ್ನು ಕಳಿಸುವಂತೆ ಕೇಳಿದ್ದಾನೆ. ಇದರಿಂದ ಆತಂಕಕ್ಕೆ ಒಳಗಾದ ನನ್ನ ಪುತ್ರಿ ಕೂಡಲೇ ಹೋಗಿ ನನ್ನ ಪತ್ನಿಯ ಬಳಿ ಅಂದರೆ ಆಕೆಯ ತಾಯಿಯ ಬಳಿ ವಿಷಯ ಹೇಳಿದ್ದಾಳೆ’
ಈ ರೀತಿಯೇ ಆನ್ಲೈನ್ ದೌರ್ಜನ್ಯಗಳು ಶುರುವಾಗುತ್ತವೆ. ನನ್ನ ಮಗಳು ತಾಯಿಯ ಬಳಿ ಹೇಳಿಕೊಂಡಿದ್ದಕ್ಕೆ ಅನಾಹುತ ಆಗಲಿಲ್ಲ. ಆದರೆ ಎಲ್ಲರೊಟ್ಟಿಗೂ ಹೀಗೆ ಆಗುವುದಿಲ್ಲ. ಕೆಲವು ಮಕ್ಕಳು ಮೈಮರೆತು, ದೂರದೃಷ್ಟಿ ಇಲ್ಲದೆ ಚಿತ್ರಗಳನ್ನು, ವಿಡಿಯೋಗಳನ್ನು ಕಳಿಸಿದ್ದಿದೆ.
ಅದೇ ವಿಡಿಯೋ, ಚಿತ್ರಗಳನ್ನು ಇರಿಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಾರೆ. ಹಣ ದೋಚುತ್ತಾರೆ. ಕೆಲವು ಪ್ರಕರಣಗಳಲ್ಲಿ ಸಂತ್ರಸ್ತ ಯುವತಿಯರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳೂ ಸಹ ಇವೆ’ ಎಂದಿದ್ದಾರೆ ಪೋಷಕರು ಹಾಗೂ ಮಕ್ಕಳು ಸಹ ಸೈಬರ್ ಕಿರುಕುಳದ ಬಗ್ಗೆ ಧೈರ್ಯವಾಗಿ ಮಾತನಾಡಿ, ತಕ್ಷಣ ದೂರು ನೀಡುವಂತೆ ಅಕ್ಷಯ್ ಕುಮಾರ್ ಕರೆ ನೀಡಿದರು.
ನಿಮ್ಮ ಪ್ರತಿಕ್ರಿಯೆ ಏನು?