ಹೋಟೆಲ್’ನಲ್ಲಿ ಶವವಾಗಿ ಪತ್ತೆಯಾದ ಮಲಯಾಳಂ ಖ್ಯಾತ ನಟ ದಿಲೀಪ್ ಶಂಕರ್!

ಡಿಸೆಂಬರ್ 29, 2024 - 21:03
 0  9
ಹೋಟೆಲ್’ನಲ್ಲಿ ಶವವಾಗಿ ಪತ್ತೆಯಾದ ಮಲಯಾಳಂ ಖ್ಯಾತ ನಟ ದಿಲೀಪ್ ಶಂಕರ್!

ಕೇರಳ: ಮಲಯಾಳಂ ಕಿರುತೆರೆ ನಟ ಶವವಾಗಿ ಪತ್ತೆಯಾಗಿರುವ ಘಟನೆ  ತಿರುವನಂತಪುರ ಹೋಟೆಲ್ ಕೊಠಡಿಯಲ್ಲಿ ನಡೆದಿದೆ. ನಟ ದಿಲೀಪ್ ಶಂಕರ್ ಶವವಾಗಿ ಪತ್ತೆಯಾದ ನಟನಾಗಿದ್ದು, ನಟ ದಿಲೀಪ್ ಹೋಟೆಲ್ ಕೊಠಡಿಯಲ್ಲಿ 4 ದಿನಗಳ ಹಿಂದೆ ಚೆಕ್ ಇನ್ ಆಗಿದ್ದರು. ಹೋಟೆಲ್ ಸಿಬ್ಬಂದಿ ಪ್ರಕಾರ, ಕಳೆದ 2 ದಿನಗಳಿಂದ ದಿಲೀಪ್ ರೂಮ್ನಿಂದ ಹೊರಗೆ ಬಂದಿರಲಿಲ್ಲ.

ಡಿ.29ರಂದು ರೂಮ್ನಿಂದ ದುರ್ವಾಸನೆ ಬಂದ ಹಿನ್ನೆಲೆ ಪರಿಶೀಲನೆ ನಡೆಸಿದಾಗ ದಿಲೀಪ್ ಶವವಾಗಿ ಪತ್ತೆಯಾಗಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ನಿಖರವಾದ ಕಾರಣ ಪತ್ತೆಯಾಗಲಿದೆ. ದಿಲೀಪ್ ಅವರ ಸಹ ನಟರು ಅವರಿಗೆ ಫೋನ್ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಳವಳಗೊಂಡು ಅವರನ್ನು ಪರೀಕ್ಷಿಸಲು ಹೋಟೆಲ್ಗೆ ಭೇಟಿ ನೀಡಿದ್ದಾರೆ. ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿವೆ. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow