WhatsAppನಲ್ಲೇ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡಬಹುದು..! ಹೇಗೆ ಗೊತ್ತಾ..?

ವಾಟ್ಸಾಪ್ ಭಾರತದಲ್ಲಿರುವ ಅತ್ಯಂತ ಜನಪ್ರಿಯ ಮೆಸೆಂಜರ್ ಅಪ್ಲಿಕೇಶನ್ ಆಗಿದೆ. ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇದನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದಾಗಿದೆ. ಈ ಆ್ಯಪ್ ಮೂಲಕ ಯಾರಿಗೆ ಬೇಕಾದರು ಕ್ಷಣಮಾತ್ರದಲ್ಲಿ ಯಾವುದೇ ಮಾಹಿತಿಯನ್ನು ಮೆಸೇಜ್ ಮೂಲಕ ಶೇರ್ ಮಾಡಿಕೊಳ್ಳಬಹುದು.
ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್‌ನಂತಹ ದಾಖಲೆಗಳನ್ನು ಈಗ ಸ್ಮಾರ್ಟ್‌ಫೋನ್‌ನಲ್ಲಿಯೇ ಡೌನ್‌ಲೋಡ್ ಮಾಡಬಹುದು ಮತ್ತು ಎಲ್ಲಿ ಬೇಕಾದರೂ ಬಳಸಬಹುದು. ಈ ಡಾಕ್ಯುಮೆಂಟ್ಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಈಗ ತುಂಬಾ ಸುಲಭ. ಅದಕ್ಕೆ ಜಸ್ಟ್ ವಾಟ್ಸಾಪ್ ಸಾಕು. ಈ ಎಲ್ಲಾ ದಾಖಲೆಗಳನ್ನು ನಿಮ್ಮ WhatsApp ನಲ್ಲಿ ಡೌನ್ಲೋಡ್ ಮಾಡಬಹುದು.
MyGov ಹೆಲ್ಪ್‌ಡೆಸ್ಕ್ ವಾಟ್ಸ್ಆ್ಯಪ್ಗೆಂದು ಸಹಾಯವಾಣಿ ನಂಬರ್ ಒಂದನ್ನು ನೀಡಿದ್ದು ಇದರ ಸಹಾಯದಿಂದ ಡಿಜಿಲಾಕರ್ ಖಾತೆಗೆ ಸೈನ್ ಅಪ್ ಆಗುವ ಮೂಲಕ ದಾಖಲೆಗಳನ್ನು ನೀವು ವಾಟ್ಸ್ಆ್ಯಪ್ನಲ್ಲೇ ಪಡೆಯಬಹುದು. ನೀವು ಈಗಾಗಲೇ ಡಿಜಿಲಾಕರ್ ಅಕೌಂಟ್ ಅನ್ನು ಹೊಂದಿದ್ದರೆ, ದಾಖಲೆಗಳನ್ನು ಪಡೆಯುವುದು ಮತ್ತಷ್ಟು ಸುಲಭವಾಗುತ್ತದೆ.
ವಾಟ್ಸ್ಆ್ಯಪ್ ಮೂಲಕ ಆಧಾರ್–ಪಾನ್ ಡೌನ್ಲೋಡ್ ಹೇಗೆ?:
• ಮೊದಲು +91-9013151515 ಈ ನಂಬರ್ ಅನ್ನು MyGov HelpDesk ಎಂದು ನಿಮ್ಮ ಫೋನ್ನಲ್ಲಿ ಸೇವ್ ಮಾಡಿ.
• ನಂತರ ವಾಟ್ಸ್ಆ್ಯಪ್ ತೆರೆದು MyGov HelpDesk ಚಾಟ್‌ಬಾಟ್ನಲ್ಲಿ ‘ನಮಸ್ತೆ‘, ‘ಹಾಯ್‘ ಎಂದು ಟೈಪ್ ಮಾಡಿ ಕಳುಹಿಸಿ.
• ಆಗ ಡಿಜಿಲಾಕರ್ ಅಥವಾ ಕೋವಿನ್ ಸೇವೆ ಎಂಬ ಎರಡು ಆಯ್ಕೆ ಕಾಣಿಸುತ್ತದೆ. ಇಲ್ಲಿ ‘ಡಿಜಿಲಾಕರ್ ಸೇವೆಗಳು‘ ಆಯ್ಕೆಮಾಡಿ.
• ಈಗ ನೀವು ಡಿಜಿಲಾಕರ್ ಖಾತೆಯನ್ನು ಹೊಂದಿದ್ದೀರಾ ಎಂದು ಚಾಟ್‌ಬಾಟ್ ಕೇಳಿದಾಗ ‘ಹೌದು‘ ಟ್ಯಾಪ್ ಮಾಡಿ.
• ನೀವು ಖಾತೆ ಹೊಂದಿಲ್ಲದಿದ್ದರೆ ಅಧಿಕೃತ ವೆಬ್‌ಸೈಟ್ ಅಥವಾ ಡಿಜಿಲಾಕರ್ ಅಪ್ಲಿಕೇಶನ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಖಾತೆಯನ್ನು ರಚಿಸಿ.
• ಚಾಟ್‌ಬಾಟ್ ಈಗ ನಿಮ್ಮ ಡಿಜಿಲಾಕರ್ ಖಾತೆಯನ್ನು ಲಿಂಕ್ ಮಾಡಲು ಮತ್ತು ದೃಢೀಕರಿಸಲು ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ಕೇಳುತ್ತದೆ. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕಳುಹಿಸಿ.
• ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTP ಅನ್ನು ಸ್ವೀಕರಿಸುತ್ತೀರಿ. ಅದನ್ನು ಚಾಟ್‌ಬಾಟ್ ನಲ್ಲಿ ನಮೂದಿಸಿ.
• ಈಗ ಚಾಟ್‌ಬಾಟ್ ಪಟ್ಟಿಗಳು ನಿಮ್ಮ ಡಿಜಿಲಾಕರ್ ಖಾತೆಯೊಂದಿಗೆ ಲಿಂಕ್ ಮಾಡಲಾದ ಎಲ್ಲಾ ದಾಖಲೆಗಳನ್ನು ನಿಮಗೆ ತೋರಿಸುತ್ತದೆ.
• ಡೌನ್‌ಲೋಡ್ ಮಾಡಲು, ಕಳುಹಿಸಲಾದ ಡಾಕ್ಯುಮೆಂಟ್ ಸಂಖ್ಯೆಯನ್ನು ಟೈಪ್ ಮಾಡಿ ಮತ್ತು ಕಳುಹಿಸಿ.
• ಆಗ ನಿಮ್ಮ ಡಾಕ್ಯುಮೆಂಟ್ PDF ರೂಪದಲ್ಲಿ ಚಾಟ್ ಬಾಕ್ಸ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿರುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






