ಆಧಾರ್ ಕಾರ್ಡ್‌ನಲ್ಲಿ ಹೆಸರು, ಡೇಟ್ ಆಫ್ ಬರ್ತ್ ಅನ್ನು ಎಷ್ಟು ಬಾರಿ ಬದಲಿಸಬಹುದು..?

ಆಧಾರ್ ಕಾರ್ಡ್‌ನ ಸಹಾಯದಿಂದ ಅನೇಕ ಕೆಲಸಗಳು ಸುಲಭವಾಗಬಹುದು. ಇತ್ತೀಚಿನ ದಿನಗಳಲ್ಲಿ ಅನೇಕ ಸರ್ಕಾರಿ ಕೆಲಸಗಳಿಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಅನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದರೆ ಯುಐಡಿಎಐ ಮೂಲಕ ನೀಡಲಾಗುತ್ತದೆ. ನಿಮ್ಮ ಆಧಾರ್ನಲ್ಲಿ ನಿಖರ ಮಾಹಿತಿ ಇರುವುದು ಅತ್ಯಗತ್ಯ. ಹೆಸರು, ಜನ್ಮ ದಿನಾಂಕ, ವಿಳಾಸ ಮಾಹಿತಿ ತಪ್ಪಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದರ ಜೊತೆಗೆ ನೀವು ಆಧಾರ್ನಲ್ಲಿರುವ ಮಾಹಿತಿಯನ್ನು ಹೆಚ್ಚು ಬಾರಿ ಬದಲಾಯಿಸಲೂ ಸಾಧ್ಯವಿಲ್ಲ. ಹೀಗಾಗಿ, ಆಧಾರ್ ಅಪ್ಡೇಟ್ ಮಾಡುವ ಮುನ್ನ ಎಚ್ಚರ ವಹಿಸಿ. ಆಧಾರ್ ಕಾರ್ಡ್ನಲ್ಲಿರುವ ವ್ಯಕ್ತಿಯ ಹೆಸರು, ದಿನಾಂಕ, ಲಿಂಗ ಸ್ಥಾನಮಾನ, ವಿಳಾಸ ಇವುಗಳನ್ನು ಎಷ್ಟು ಬಾರಿ ಅಪ್ಡೇಟ್ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.
ಎಷ್ಟು ಬಾರಿ ಅಪ್ಡೇಟ್ ಮಾಡಬಹುದು?
• ಆಧಾರ್ ಕಾರ್ಡ್ನಲ್ಲಿರುವ ವ್ಯಕ್ತಿಯ ಹೆಸರನ್ನು ಎರಡು ಬಾರಿ ಮಾತ್ರ ಅಪ್ಡೇಟ್ ಮಾಡಬಹುದು ಎಂದು ಯುಐಡಿಎಐ ಸ್ಪಷ್ಟಪಡಿಸಿದೆ. ಅಂದರೆ ಆಧಾರ್ ಮಾಡಿಸುವಾಗ ನಮೂದಾಗಿದ್ದ ಮಾಹಿತಿಯನ್ನು ಒಮ್ಮೆ ಮಾತ್ರ ಬದಲಿಸಬಹುದು.
• ಆಧಾರ್ನಲ್ಲಿರುವ ವ್ಯಕ್ತಿಯ ಜನ್ಮದಿನಾಂಕದ ವಿವರವನ್ನೂ ಎರಡು ಬಾರಿ ಮಾತ್ರ ಅಪ್ಡೇಟ್ ಮಾಡಬಹುದು. ಅದೂ ವಿಶೇಷ ಸಂದರ್ಭದಲ್ಲಿ ಮಾತ್ರ.
• ಆಧಾರ್ನಲ್ಲಿ ವ್ಯಕ್ತಿಯ ಲಿಂಗ ವಿವರವನ್ನು ಒಮ್ಮೆ ಮಾತ್ರ ಅವಕಾಶ ಇದೆ. ಎರಡನೇ ಬಾರಿ ಬದಲಾಯಿಸಬೇಕೆಂದರೆ ಯುಐಡಿಎಐನ ಪ್ರಾದೇಶಕ ಕಚೇರಿಯ ಅನುಮತಿ ಪಡೆಯಬೇಕಾಗುತ್ತದೆ.
• ಆಧಾರ್ನಲ್ಲಿರುವ ವ್ಯಕ್ತಿಯ ಹೆಸರನ್ನು ಒಮ್ಮೆ ಮಾತ್ರ ಬದಲಾಯಿಸಲು ಸಾಧ್ಯ.
ಸಾಮಾನ್ಯವಾಗಿ ನೀವು ನೊಂದಾಯಿಸುವಾಗ ನೀಡಿದ್ದ ಜನ್ಮದಿನಾಂಕವನ್ನು ಬದಲಾಯಿಸಲು ಆಗುವುದಿಲ್ಲ. ಒಂದು ವೇಳೆ ನೊಂದಣಿ ವೇಳೆ ತಪ್ಪಾದ ಮಾಹಿತಿ ಇದ್ದರೆ, ಅಂದರೆ ಡೇಟಾ ಎಂಟ್ರಿ ವೇಳೆ ದೋಷವಾಗಿ ಹೆಸರು ತಪ್ಪಾಗಿ ಹೋಗಿದ್ದರೆ ಮಾತ್ರ ಜನ್ಮದಿನಾಂಕದ ವಿವರ ಬದಲಾಯಿಸಲು ಅವಕಾಶ ಇರುತ್ತದೆ. ಅದಕ್ಕಾಗಿ ಸೂಕ್ತ ದಾಖಲೆಗಳನ್ನು ನೀಡಬೇಕು.
ಇನ್ನು ನಿಮ್ಮ ಖಾಯಂ ವಿಳಾಸವನ್ನೇ ಆಧಾರ್ನಲ್ಲಿರುವ ವಿಳಾಸವಾಗಿ ಇಟ್ಟುಕೊಳ್ಳುವುದು ಉತ್ತಮ. ಬಾಡಿಗೆ ಮನೆ ಬದಲಾಯಿಸಿದಾಗೆಲ್ಲಾ ಆಧಾರ್ನಲ್ಲಿ ವಿಳಾಸ ಅಪ್ಡೇಟ್ ಮಾಡಲು ಆಗುವುದಿಲ್ಲ.
ನಿಮಗೆ ಆಧಾರ್ನಲ್ಲಿರುವ ಮಾಹಿತಿಯನ್ನು ಅಪ್ಡೇಟ್ ಮಾಡುವ ಮಿತಿ ದಾಟಿ ಹೋಗಿದ್ದ ಸಂದರ್ಭದಲ್ಲಿ ನಿಮಗೆ ಏನಾದರೂ ಆಧಾರ್ನಲ್ಲಿ ವಿವರ ಬದಲಾವಣೆ ಬೇಕೆನಿಸಿದಲ್ಲಿ ಬದಲಾಯಿಸುವುದು ಅಗತ್ಯ ಎನಿಸಿದಲ್ಲಿ ಯುಐಡಿಎಐನ ಪ್ರಾದೇಶಿಕ ಕಚೇರಿಗೆ ಹೋಗಿ ಮನವಿ ಮಾಡಿಕೊಳ್ಳಬಹುದು.
ಆದರೆ ಕಚೇರಿಗೆ ಹೋಗುವ ಮುನ್ನ help @uidai.gov.in ಈ ವಿಳಾಸಕ್ಕೆ ಇಮೇಲ್ ಕಳುಹಿಸಿ ಮನವಿ ಮಾಡಬೇಕು. ಯುಆರ್ಎನ್ ಸ್ಲಿಪ್, ಆಧಾರ್ ವಿವರ ಮತ್ತು ಸೂಕ್ತ ದಾಖಲೆಯನ್ನೂ ಇಮೇಲ್ ವೇಳೆ ಲಗತ್ತಿಸಬೇಕು. ಇದಾದಾಗ ಬಳಿಕ ಪ್ರಾದೇಶಿಕ ಕಚೇರಿಯು ನಿಮ್ಮ ಮನವಿಯನ್ನು ಪರಿಶೀಲಿಸಿ ತನಿಖೆಯನ್ನೂ ಕೈಗೊಳ್ಳುತ್ತದೆ. ನಿಮ್ಮ ಮನವಿ ಸರಿ ಎನಿಸಿದಲ್ಲಿ ಪ್ರಾದೇಶಿಕ ಕಚೇರಿಗೆ ಬರುವಂತೆ ಸೂಚಿಸುತ್ತದೆ.
ಆಧಾರ್ ವಿವರಗಳ ತಿದ್ದುಪಡಿಗೆ ಬೇಕಾದ ದಾಖಲೆಗಳು
• ಪಾಸ್ಪೋರ್ಟ್
• ಬ್ಯಾಂಕ್ ಸ್ಟೇಟ್ಮೆಂಟ್
• ಅಂಚೆ ಕಚೇರಿಯ ಪಾಸ್ಬುಕ್
• ರೇಷನ್ ಕಾರ್ಡ್
• ಡ್ರೈವಿಂಗ್ ಲೈಸೆನ್ಸ್
• ಸರ್ಕಾರದ ಫೋಟೋ ಐಡಿ
• ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದ ಸರ್ವಿಸ್ ಫೋಟೋ ಐಡಿ
• 3 ತಿಂಗಳ ಎಲೆಕ್ಟ್ರಿಸಿಟಿ ಬಿಲ್ ಮತ್ತು ನೀರಿನ ಬಿಲ್
• ಮೂರು ತಿಂಗಳ ಟೆಲಿಫೋನ್ ಲ್ಯಾಂಡ್ಲೈನ್ ಬಿಲ್
• ಒಂದು ವರ್ಷದ ಈಚಿನ ಪ್ರಾಪರ್ಟಿ ಟ್ಯಾಕ್ಸ್ ರಸೀತಿ
ನಿಮ್ಮ ಪ್ರತಿಕ್ರಿಯೆ ಏನು?






