ಮನೆಯಲ್ಲಿ ತುಳಸಿ ಗಿಡ ಇದ್ದರಷ್ಟೇ ಸಾಲದು; ಈ ಅಂಶಗಳು ನೆನಪಿನಲ್ಲಿರಬೇಕು - ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಅಕ್ಟೋಬರ್ 31, 2025 - 07:01
 0  12
ಮನೆಯಲ್ಲಿ ತುಳಸಿ ಗಿಡ ಇದ್ದರಷ್ಟೇ ಸಾಲದು; ಈ ಅಂಶಗಳು ನೆನಪಿನಲ್ಲಿರಬೇಕು - ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ
ನಾವು ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುವಂತೆ ತುಳಸಿಯನ್ನೂ ಪೂಜಿಸುತ್ತೇವೆ. ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ತುಳಸಿ ಪೂಜೆಯನ್ನು ಮಾಡುವುದರಿಂದ ನಮಗೆ ಉತ್ತಮ ಫಲಗಳು ಪ್ರಾಪ್ತವಾಗುತ್ತದೆ. ಧನಾಗಮನವಾಗುತ್ತದೆ. ಅದೃಷ್ಟ ನಮ್ಮೊಂದಿಗೆ ನಿಲ್ಲುತ್ತದೆ ಎನ್ನುವ ನಂಬಿಕೆಯಿದೆ. ತುಳಸಿ ಗಿಡ ಕೇವಲ ಧಾರ್ಮಿಕ ಮಹತ್ವವನ್ನು ಮಾತ್ರವಲ್ಲದೆ, ವೈಜ್ಞಾನಿಕ ಮಹತ್ವವನ್ನು ಕೂಡ ಪಡೆದುಕೊಂಡಿರುವ ಗಿಡವಾಗಿದೆ. ತುಳಸಿ ಗಿಡ ನಮಗೆ ಶುಭ ಮತ್ತು ಅಶುಭ ಘಟನೆಗಳ ಸೂಚನೆಯನ್ನು ಮೊದಲೇ ನೀಡುತ್ತದೆ ಎನ್ನುವ ನಂಬಿಕೆಯಿದೆ
 
ತುಳಸಿಯನ್ನು ಹಿಂದೂ ಧರ್ಮದಲ್ಲಿ  ತುಂಬಾ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಪ್ರತಿನಿತ್ಯ ಪೂಜಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯು ಹರಡುತ್ತದೆ. ಇದರೊಂದಿಗೆ ಮನೆಯಲ್ಲಿ ಸುಖ-ಶಾಂತಿ ನೆಲೆಯೂರುತ್ತದೆತಿನಿತ್ಯ ಪೂಜಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯು  ಹರಡುತ್ತದೆ. ಇದರೊಂದಿಗೆ ಮನೆಯಲ್ಲಿ ಸುಖ-ಶಾಂತಿ ನೆಲೆಯೂರುತ್ತದೆ. ತುಳಸಿ ಲಕ್ಷ್ಮಿ ಸ್ವರೂಪ ಎಂಬ ನಂಬಿಕೆ ಇದೆ. ಇಂತಹ ತುಳಸಿಯ ಎಲೆಗಳನ್ನು ಮುಟ್ಟುವ ವಿಚಾರದಲ್ಲಿ ಕೆಲವು ನಿಯಮಗಳಿವೆ.
 
ತುಳಸಿಯನ್ನು ಕೀಳಬಾರದು; ಪೂಜನೀಯ ಸ್ಥಾನವನ್ನು ಹೊಂದಿರುವ ತುಳಸಿಯನ್ನು ಸುಖಾ ಸುಮ್ಮನೆ ಕೀಳಬಾರದು. ಅದರಲ್ಲೂ ವಿಶೇಷವಾಗಿ ಏಕಾದಶಿ, ಸೂರ್ಯಾಸ್ತ ಬಳಿಕ ಗ್ರಹಣ ಸಮಯದಲ್ಲಿ ತುಳಸಿ ಎಲೆ ಕೀಳುವುದು ಅಶುಭ ಎಂದು ಪರಿಗಣಿಸಲಾಗಿದೆ.
 
ತಪ್ಪದೇ ದೀಪ ಹಚ್ಚಬೇಕು: ತುಳಸಿ ಎಲೆಗಳನ್ನು ಕೈ ನಿಂದ ಚಿವುಟಿದರೆ ಅದು ದುರದೃಷ್ಟಕ್ಕೆ ಕಾರಣವಾಗುತ್ತದೆ. ತುಳಸಿಯನ್ನು ದೈವ ಸ್ವರೂಪಿ ಎಂದು ಪರಿಗಣಿಸಿದ ಹಿನ್ನಲೆ ಸಂಜೆ ಸಮಯದಲ್ಲಿ ತುಳಸಿ ಮುಂದೆ ದೀಪ ಹಚ್ಚಿಡಬೇಕು.
 
ಕೀಳಬಾರದು: ತುಳಸಿ ದೈವಿಕ ಮತ್ತು ಔಷಧಾತ್ಮಕ ಗುಣ ಹೊಂದಿರುವ ಸಸ್ಯವಾಗಿದೆ. ತುಳಸಿ ಎಲೆಯನ್ನು ಅಶುಚಿ ಕೈಯಲ್ಲಿ ಮುಟ್ಟಬಾರದು. ಇದರ ಎಲೆಗಳನ್ನು ನೀರಿನಲ್ಲಿ ಅಥವಾ ಚಹಾದಲ್ಲಿ ಕುಡಿಯುವುದರಿಂದ ಇದರಿಂದ ಆರೋಗ್ಯ ವೃದ್ಧಿ. ಇಂತಹ ತುಳಸಿ ಗಿಡವನ್ನು ಸುಖಾ ಸುಮ್ಮನೆ ಕಿತ್ತರೆ ನಷ್ಟ
 
ತುಳಸಿ ಒಣಗಿದ್ರೆ ಈ ರೀತಿ ಮಾಡಿ: ತುಳಸಿ ಎಲೆಗಳು ಒಣಗಿ ಬಿದ್ದರೆ ಅವುಗಳನ್ನು ಎಸೆಯದೇ ಅದರ ಬುಡಕ್ಕೆ ಹಾಕಬೇಕು. ಒಂದು ವೇಳೆ ಗಿಡಬೇ ಒಣಗಿದರೆ ಅದನ್ನು ಎಲ್ಲೆಂದರಲ್ಲಿ ಎಸೆಯಬಾರದು. ನದಿ, ಬಾವಿ ಅಥವಾ ಸರೋವರಕ್ಕೆ ಹಾಕಬೇಕು
 
ಕುಂಡದಲ್ಲಿ ನೆಡಬೇಕು; ತುಳಸಿ ಗಿಡವನ್ನು ಯಾವಾಗಲೂ ಕುಂಡದಲ್ಲಿ ಹಾಕಬೇಕು. ಅದನ್ನು ನೆಲದ ಮೇಲೆ ಹಾಕಬಾರದು. ಜೊತೆಗೆ ತುಳಸಿ ಗಿಡದ ಸುತ್ತಮುತ್ತ ಶುಚಿತ್ವ ಕಾಪಾಡಿದರೆ, ಮನೆಯವರಿಗೆ ಆರ್ಥಿಕ ಮತ್ತು ಆರೋಗ್ಯಕರ ಲಾಭ ಲಭ್ಯವಾಗುತ್ತದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow