IPL ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಹೊಸ ವೇಳಾಪಟ್ಟಿ ಬಿಡುಗಡೆ - ಬಿಗ್ ಅಪ್ ಡೇಟ್ ಇಲ್ಲಿದೆ

ಮೇ 13, 2025 - 22:06
 0  11
IPL ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಹೊಸ ವೇಳಾಪಟ್ಟಿ ಬಿಡುಗಡೆ - ಬಿಗ್ ಅಪ್ ಡೇಟ್ ಇಲ್ಲಿದೆ

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಬಿಸಿಸಿಐ ಮೇ 9 ರಂದು ಐಪಿಎಲ್ ಅನ್ನು ಒಂದು ವಾರ ಸ್ಥಗಿತಗೊಳಿಸಿತ್ತು ಎಂದು ತಿಳಿದಿದೆ. ಇದಕ್ಕೂ ಮೊದಲು, ಮೇ 8 ರಂದು, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಆದಾಗ್ಯೂ, ಈಗ ಎರಡೂ ದೇಶಗಳ ನಡುವಿನ ಕದನ ವಿರಾಮದ ನಂತರ, ಬಿಸಿಸಿಐ ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಇದೇ ಮೇ 17ರಿಂದ ಐಪಿಎಲ್ 2025 ಮತ್ತೆ ಆರಂಭಿಸಲು ಬಿಸಿಸಿಐ ನಿರ್ಧಾರ ಮಾಡಿದೆ.ಇದೇ ಮೇ 17ರಿಂದ ಐಪಿಎಲ್‌ ಹಣಾಹಣಿ ಮತ್ತೆ ಆರಂಭವಾಗುತ್ತಾ ಇದ್ರೆ ಜೂನ್ 03ಕ್ಕೆ ಐಪಿಎಲ್ ಮೆಗಾ ಫೈನಲ್ ನಡೆಸಲು ತೀರ್ಮಾನ ಮಾಡಲಾಗಿದೆ.

ಈ ಬಾರಿಯ ಐಪಿಎಲ್‌ ಅನ್ನು ಬಿಸಿಸಿಐ ಒಂದು ವಾರದ ಕಾಲ ಅಮಾನತುಗೊಳಿಸಲಾಗಿತ್ತು. ಇದೀಗ ಐಪಿಎಲ್ 2025ರ ನೂತನ ವೇಳಾಪಟ್ಟಿ ಪ್ರಕಟವಾಗಿದೆ. ಬಿಸಿಸಿಐ ಅಧಿಕೃತ ಮಾಹಿತಿಯಂತೆ ಉಳಿದ ಪಂದ್ಯಗಳನ್ನು ಬೆಂಗಳೂರು, ಜೈಪುರ, ದೆಹಲಿ, ಲಕ್ನೋ, ಅಹ್ಮದಾಬಾದ್ ಮತ್ತು ಮುಂಬೈ ಸ್ಟೇಡಿಯಂನಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಐಪಿಎಲ್ ಹೊಸ ವೇಳಾಪಟ್ಟಿಯಂತೆ ಮೇ 17ರಂದು ನಮ್ಮ ಬೆಂಗಳೂರಿನಲ್ಲೇ ಆರ್‌ಸಿಬಿ ಹಾಗೂ ಕೊಲ್ಕತ್ತಾ ನೈಟ್ ರೈಟರ್ಸ್ ಪಂದ್ಯ ನಡೆಯುತ್ತಿದೆ. ಉಳಿದಂತೆ 6 ಕ್ರೀಡಾಂಗಣದಲ್ಲಿ ತಲಾ 2 ಪಂದ್ಯದಂತೆ ಒಟ್ಟು 12 ಲೀಗ್ ಪಂದ್ಯಗಳಿಗೆ ಸ್ಥಳ ನಿಗಧಿಯಾಗಿದೆ. ಪ್ಲೇ ಆಫ್, ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಕ್ಕೆ ಮುಂದಿನ ದಿನಗಳಲ್ಲಿ ಜಾಗ ಪ್ರಕಟಿಸಲಾಗುತ್ತಿದೆ.

ಪ್ಲೇಆಫ್‌ಗಳನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

  • ಕ್ವಾಲಿಫೈಯರ್ 1 – ಮೇ 29
  • ಎಲಿಮಿನೇಟರ್ - ಮೇ 30
  • ಕ್ವಾಲಿಫೈಯರ್ 2 – ಜೂನ್ 1
  • ಅಂತಿಮ - ಜೂನ್ 3

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow