ಈ ವರ್ಷ ಸಂಭವಿಸಲಿದೆ ಈ ಮಹಾ ದುರಂತ: ಬಾಬಾ ವಂಗಾ ಭವಿಷ್ಯ ಏನು ಗೊತ್ತಾ..?

ವಿಶ್ವವಿಖ್ಯಾತ ಬಾಬಾ ವಂಗಾ ಅವರ 2025 ರ ಭವಿಷ್ಯವಾಣಿಯು ಚರ್ಚೆಯ ವಿಷಯವಾಗಿದೆ. ಅವರ ಭವಿಷ್ಯವಾಣಿಗಳ ಪ್ರಕಾರ, 2025 ರಲ್ಲಿ ಅನ್ಯಗ್ರಹ ಜೀವಿಗಳ ಸಂಪರ್ಕ, ವಿನಾಶಕಾರಿ ಘಟನೆಗಳು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಸಂಭವಿಸುವ ಸಾಧ್ಯತೆಯಿದೆ. 2025 ಕ್ಯಾನ್ಸರ್ಗೆ ಅಭೂತಪೂರ್ವ ವರ್ಷವಾಗಲಿದೆ ಎಂದು ಅವರು ಗಮನಿಸಿದರು. ಆಕೆಯ ಭವಿಷ್ಯವಾಣಿಗಳು ನಿಜವಾಗುತ್ತವೆಯೇ ಎಂಬುದು ಇನ್ನೂ ಚರ್ಚೆಯಲ್ಲಿದೆ.
ಹೌದು 2025 ವಿನಾಶದ ವರ್ಷವಾಗಿರುತ್ತದೆ. 2024ರಿಂದಲೇ ವಿಶ್ವಾದ್ಯಂತ ವಿನಾಶದ ಆರಂಭವಾಗಿದೆ. ಮುಂಬರುವ ವರ್ಷ ಯುರೋಪ್ನಲ್ಲಿ ಭೀಕರ ಯುದ್ಧ ಸಂಭವಿಸಲಿದ್ದು, ಅಪಾರ ಹಾನಿ ಮತ್ತು ಪ್ರಾಣಹಾನಿ ಉಂಟಾಗುತ್ತದೆ. ಎರಡು ದೇಶಗಳ ನಡುವೆ ಮತ್ತೆ ಯುದ್ಧ ಪ್ರಾರಂಭವಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಇದನ್ನು ನಾವು ಈಗಾಗಲೇ ನೋಡುತ್ತಿದ್ದೇವೆ. ರಷ್ಯಾ- ಉಕ್ರೇನ್, ಇಸ್ರೇಲ್- ಇರಾನ್ ಯುದ್ಧಗಳು ನಡೆಯುತ್ತಿವೆ. ಸಿರಿಯಾದಲ್ಲಿ ಮತ್ತೊಂದು ದಂಗೆ ಶುರುವಾಗಿದೆ. ಬಾಬಾ ವಂಗಾ ನುಡಿದ ಭವಿಷ್ಯದ ಪ್ರಕಾರ, ರಷ್ಯಾ-ಉಕ್ರೇನ್ ಯುದ್ಧದ ಹೊರತಾಗಿ ಹೊಸದಾಗಿ 2 ರಾಷ್ಟ್ರಗಳ ನಡುವೆ ಯುದ್ಧ ಸಂಭವಿಸಲಿದೆ. ಇದು ಅಪಾರ ಪ್ರಮಾಣದ ಹಾನಿ ಹಾಗೂ ಮನುಷ್ಯರು ಸಾವನ್ನಪ್ಪಲಿದ್ದಾರೆ ಎಂದಿದ್ದಾರೆ ಎನ್ನಲಾಗಿದೆ.
ಈ ರೀತಿ ವಿನಾಶ ಆರಂಭಗೊಂಡ ಮೂರು ವರ್ಷದ ಬಳಿಕ ಅಂದರೆ 2028ರಲ್ಲಿ ಸಂಪನ್ಮೂಲಗಳಿಗಾಗಿ ನಾವು ಶುಕ್ರ ಗ್ರಹದತ್ತ ಮುಖ ಮಾಡಬೇಕಾಗುತ್ತದೆಯಂತೆ. ಹಾಗೆ 2033ರಲ್ಲಿ ಹವಾಮಾನ ಬದಲಾವಣೆಯ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ. ಮಂಜುಗಡ್ಡೆ ಕರಗುವಿಕೆ ಹೆಚ್ಚಾಗಿ ಸಮುದ್ರ ಮಟ್ಟದಲ್ಲಿ ದಿಢೀರ್ ಏರಿಕೆಯು ಉಂಟಾಗುತ್ತದೆ ಎಂದಿದ್ದಾಳೆ.
2076ರ ಹೊತ್ತಿಗೆ ಜಗತ್ತಿನಾದ್ಯಂತ ಕಮ್ಯುನಿಸಂ ಹರಡುತ್ತದೆ. ಜಾಗತಿಕ ನಾಯಕರು ಮರೆಯಾಗುತ್ತಾರೆ. ಶೋಷಣೆಗಳು ಅಂತ್ಯವಾಗುತ್ತದೆ ಎಂದಿದ್ದಾಳೆ. ಹಾಗೆ 2130ರಲ್ಲಿ ಮೊಟ್ಟ ಮೊದಲ ಬಾರಿಗೆ ಅನ್ಯಗ್ರಹ ಜೀವಿಗಳ ಜೊತೆಗೆ ಮಾನವ ಸಂಪರ್ಕ ಏರ್ಪಡಲಿದೆಯಂತೆ. ಹಾಗೆ 2170 ರಲ್ಲಿ ಭೂಮಿಯ ಮೇಲೆ ಹವಾಮಾನ ಬದಲಾವಣೆಯ ಕಾರಣದಿಂದಾಗಿ ಜಾಗತಿಕ ಬರ ನೋಡಬಹುದಂತೆ, ಈ ವೇಳೆ ಆಹಾರ ಕೊರತೆ, ಯುದ್ಧಗಳು ನಡೆಯಲಿವೆ ಎಂದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






