ಬಿಜೆಪಿ ಶಾಸಕ ಯತ್ನಾಳ್ ಕೊಲೆಗೆ ಸಂಚು ನಡೆಯುತ್ತಿದ್ಯಾ!? ಮುಸ್ಲಿಂ ಯುವಕನ ಆಡಿಯೋ ವೈರಲ್!
ವಿಜಯಪುರ:- ಸದಾ ಮುಸ್ಲಿಂರನ್ನು ಬಹಿರಂಗವಾಗಿಯೇ ತೆಗಳುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹತ್ಯೆಗೆ ಸಂಚು ರೂಪಿಸಲಾಗಿದ್ಯಂತೆ. ಈ ಭಯಾನಕ ವಿಚಾರವನ್ನು ಮಾತನಾಡುತ್ತಿರುವ ಮುಸ್ಲಿಂ ಯುವಕನ ಆಡಿಯೋ ಇದೀಗ ಫುಲ್ ವೈರಲ್ ಆಗಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ಅವಹೇಳನ ಕಾರಿ ಹೇಳಿಕೆ ನೀಡಿದ ಹಿನ್ನೆಲೆ, ಶಾಸಕನ ಹತ್ಯೆಗೆ ಸಂಚು ನಡೆದಿತ್ತು ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಯುವಕನ ಆಡಿಯೋದಲ್ಲಿ ನಡೆದ ಸಂಭಾಷಣೆ ಪುಷ್ಟಿ ನೀಡಿದೆ.
ಹೌದು. ಏ.7 ರಂದು ಹುಬ್ಬಳ್ಳಿಯ ಬಾಣಿ ಓಣಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ್ ಮಾತನಾಡುತ್ತಾ ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಲು ಒಟ್ಟಾಗಿ ಎಂದು ಕರೆ ನೀಡಿರುವ ಮುಸ್ಲಿಂ ಯುವಕನ ಸ್ಫೋಟಕ ಆಡಿಯೋ ವೈರಲ್ ಆಗಿದೆ. ಇದು ವಿಜಯಪುರದಲ್ಲಿ ಭಾರೀ ಆತಂಕ ಸೃಷ್ಟಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?