ರಮ್ಯಾ ಬೆನ್ನಿಗೆ ನಿಂತ ಹ್ಯಾಟ್ರಿಕ್ ಹೀರೋ: ದರ್ಶನ್ ಫ್ಯಾನ್ಸ್’ಗಳಿಗೆ ಶಿವಣ್ಣ ಕೊಟ್ಟ ಎಚ್ಚರಿಕೆ ಏನು..?

ನಟ ದರ್ಶನ್ ಪ್ರಕರಣ ಕುರಿತು ನಟಿ ರಮ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನೀಡಿದ್ದ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳಿಂದ ಅವಾಚ್ಯ ಕಾಮೆಂಟ್ಗಳಿಗೆ ಒಳಗಾಗಿದ್ದ ರಮ್ಯಾಗೆ ಇದೀಗ ನಟ ಶಿವರಾಜ್ ಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಮ್ಯಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಳಸಲಾಗಿರುವ ಭಾಷೆ ಖಂಡನೀಯವೆಂದು ಹೇಳಿದ್ದಾರೆ. "ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮುಖ್ಯವಾಗಿ ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ಅತ್ಯಂತ ಅವಶ್ಯಕ" ಎಂದು ಶಿವರಾಜ್ ಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದ ಬಳಕೆ ಕುರಿತು ಎಚ್ಚರಿಕೆ ನೀಡಿದ ಅವರು, ಸೋಷಿಯಲ್ ಮೀಡಿಯಾ ಒಂದು ಬಲಿಷ್ಠ ಅಸ್ತ್ರ. ಅದನ್ನು ತನ್ನ ವ್ಯಕ್ತಿತ್ವದ ಏಳಿಗೆಗಾಗಿ ಬಳಸಬೇಕು. ಆದರೆ ದ್ವೇಷ, ಅಸೂಯೆ, ನಿಂದನೆಗಾಗಿ ಬಳಸಬಾರದು. ನಾವು ಸದಾ ರಮ್ಯಾ ಜೊತೆ ನಿಂತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






