Street Dog Attack: ಬೀದಿ ನಾಯಿಗಳ ದಾಳಿಗೆ ಸ್ಥಳದಲ್ಲೇ ಪ್ರಾಣಬಿಟ್ಟ ವೃದ್ಧ!

ಬೆಂಗಳೂರು: ನಗರದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದೆ. ಪ್ರತಿ ಬಡಾವಣೆಯಲ್ಲಿಯೂ ನಾಯಿಗಳು ಬೈಕ್ ಸವಾರರು ಸೇರಿದಂತೆ ಸಂಚರಿಸುವವರಿಗೆ ಸಮಸ್ಯೆೆಯಾಗಿ ಪರಿಣಮಿಸಿವೆ. ಹಲವು ಭಾಗಗಳಲ್ಲಿ ಬೀದಿ ನಾಯಿಗಳು ಗುಂಪುಗಳಲ್ಲಿ ಕಂಡು ಬರುತ್ತಿರುವುದರಿಂದ ಸಾರ್ವಜನಿಕರು ಸಂಚರಿಸಲು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ.
ಇದೀಗ ವಾಕಿಂಗ್ಗೆ ಹೋಗುತ್ತಿದ್ದ ವ್ಯಕ್ತಿ ಮೇಲೆ ಬೀದಿನಾಯಿಗಳು ದಾಳಿಯಿಂದ ವ್ಯಕ್ತಿ ಬಲಿಯಾಗಿರುವ ಘಟನೆ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
68 ವರ್ಷದ ಸೀತಪ್ಪ ಮೃತ ದುರ್ಧೈವಿಯಾಗಿದ್ದು, ಸೀತಪ್ಪ ಅವರು ಸೋಮವಾರ ಬೆಳಗ್ಗೆ ವಾಕಿಂಗ್ಗೆ ಹೋಗುತ್ತಿದ್ದಾಗ 8 ರಿಂದ 9 ಬೀದಿನಾಯಿಗಳು ದಾಳಿ ಮಾಡಿದ್ದು, ಕೈ, ಕಾಲಿನ ಅರ್ಧ ಮಾಂಸವನ್ನೇ ಕಚ್ಚಿ ತಿಂದಿವೆ. ಅಷ್ಟೇ ಅಲ್ಲದೆ ಮುಖಕ್ಕೂ ಕಚ್ಚಿವೆ.
ನಾಯಿಗಳ ದಾಳಿಗೆ ವೃದ್ಧ ಸೀನಪ್ಪ ಕೊನೆಯುಸಿರೆಳೆದಿದ್ದಾರೆ.ಇನ್ನೂ ರಾಮಯ್ಯ ಆಸ್ಪತ್ರೆಯಲ್ಲಿ ಸೀತಪ್ಪನ ಮೃತದೇಹ ಪೊಸ್ಟ್ ಮಾಟರ್ಮ್ ಮಾಡಿದ್ದು, ಈ ಸಂಬಂಧ ಕೊಡಿಗೇಹಳ್ಳಿಯಲ್ಲಿ ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ಕೊಟ್ಟಿದ್ದು, ಪೊಲೀಸರು ಯುಡಿಏರ್ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






