ದರ್ಶನ್‌ ಕುದುರೆಗಳನ್ನು ಮಾರಾಟಕ್ಕಿಟ್ರಾ ಪತ್ನಿ ವಿಜಯಲಕ್ಷ್ಮಿ!? ಅಸಲಿ ಸತ್ಯ ರಿವೀಲ್

ಅಕ್ಟೋಬರ್ 13, 2025 - 21:18
 0  15
ದರ್ಶನ್‌ ಕುದುರೆಗಳನ್ನು ಮಾರಾಟಕ್ಕಿಟ್ರಾ ಪತ್ನಿ ವಿಜಯಲಕ್ಷ್ಮಿ!? ಅಸಲಿ ಸತ್ಯ ರಿವೀಲ್

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧನದಲ್ಲಿರುವ ನಟ ದರ್ಶನ್ ಅವರು ಸದ್ಯ ಜೈಲಿನಲ್ಲಿದ್ದಾರೆ. ಅವರ ಬಂಧನದಿಂದ ಆಪ್ತ ವಲಯದಲ್ಲಿ ಬೇಸರ ಮೂಡಿದೆ. ಇದೇ ವೇಳೆಯಲ್ಲಿ ದರ್ಶನ್ ಅವರ ಫಾರ್ಮ್‌ಹೌಸ್ ಹಾಗೂ ಅಲ್ಲಿ ಸಾಕಿರುವ ಕುದುರೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸುದ್ದಿ ಹರಿದಾಡುತ್ತಿವೆ.

ದರ್ಶನ್ ಅವರ ಆಪ್ತ ಹಾಗೂ ಫಾರ್ಮ್‌ಹೌಸ್ ನೋಡಿಕೊಳ್ಳುತ್ತಿರುವ ಸುನೀಲ್ ಅವರು, ದರ್ಶನ್ ಕುದುರೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ.

ಫಾರ್ಮ್‌ಹೌಸ್‌ ಬಳಿ ‘ಕುದುರೆ ಮಾರಾಟಕ್ಕಿದೆ’ ಎಂಬ ಬೋರ್ಡ್ ಇದೆ. ಆದರೆ ಅದು ವಾಸ್ತವ ಅರ್ಥದಲ್ಲಿ ಕುದುರೆ ಮಾರಾಟದ ಉದ್ದೇಶದಿಂದ ಅಲ್ಲ. ಕುದುರೆ ಖರೀದಿಸಲು ಆಸಕ್ತಿ ಇರುವವರಿಗೆ ಮಾಹಿತಿ ನೀಡುವ ಉದ್ದೇಶದಿಂದ ಮಾತ್ರ ಬೋರ್ಡ್ ಇಡಲಾಗಿದೆ ಎಂದು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸುನೀಲ್ ಹೇಳಿದ್ದಾರೆ,

ಅನೇಕರಿಗೆ ಕುದುರೆಗಳ ಬಗ್ಗೆ ತಿಳಿವಳಿಕೆ ಕಡಿಮೆ. ಎಲ್ಲಿ ಖರೀದಿ ಮಾಡಬೇಕು ಎಂದು ಗೊತ್ತಿಲ್ಲ. ಅಂಥವರು ಬಂದು ವಿಚಾರಿಸಲು ಇದು ಸಹಾಯಕವಾಗುತ್ತದೆ. ದರ್ಶನ್ ಅವರ ಕುದುರೆಗಳನ್ನು ಮಾರಾಟ ಮಾಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೀಗ ದರ್ಶನ್ ಜೈಲಿನಲ್ಲಿದ್ದಾರೆ ಮತ್ತು ಅಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಕಷ್ಟ ಅನುಭವಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಅವರ ಹೊಸ ಸಿನಿಮಾ ‘ಡೆವಿಲ್’ ಡಿಸೆಂಬರ್ 12ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವುದು ಗಮನಾರ್ಹ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow