'ಸಿಕಂದರ್' ಬಗ್ಗೆ ವ್ಯಾಪಕ ಟೀಕೆ: ರಶ್ಮಿಕಾ ಮಗಳ ಜೊತೆಗೂ ಸಿನಿಮಾ ಮಾಡ್ತೀನಿ ನಿಮ್ಗೇನು ಎಂದ ಸಲ್ಲೂ!

ಸಲ್ಮಾನ್ ಖಾನ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ತೆರೆಗೆ ಬರಲು ಸಿಕಂದರ್ ಸಿನಿಮಾ ಸಜ್ಜಾಗಿದೆ. ಆದರೆ ಸಿನಿಮಾ ರಿಲೀಸ್ಗೂ ಮುನ್ನವೇ ರಶ್ಮಿಕಾ ನಟನೆಯ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.
ಸಲ್ಮಾನ್ ಖಾನ್ ಅವರಿಗಿಂತ ರಶ್ಮಿಕಾ 31 ವರ್ಷ ಚಿಕ್ಕವರು ಎಂದು ಹೇಳಿ ಟ್ರೋಲ್ ಮಾಡಲಾಗಿತ್ತು. ಅಲ್ಲದೇ ಸಲ್ಮಾನ್ ಖಾನ್ ಜೊತೆಗೆ ರೊಮ್ಯಾನ್ಸ್ ವಿಚಾರಕ್ಕೂ ಟೀಕೆಗಳು ವ್ಯಕ್ತವಾಗಿದ್ದವು.
ಕಾರ್ಯಕ್ರಮಮೊಂದರಲ್ಲಿ ಮಾತಾಡಿದ ಸಲ್ಲು ಭಾಯ್, ರಶ್ಮಿಕಾಗೆ ವಯಸ್ಸಿನ ಅಂತರದ ಬಗ್ಗೆ ಯಾವುದೇ ತೊಂದರೆ ಇಲ್ಲ. ಅವರ ತಂದೆಗೂ ಯಾವುದೇ ತೊಂದರೆ ಇಲ್ಲ. ಅವರಿಗಿಲ್ಲದ ಸಮಸ್ಯೆ ನಿಮಗೇಕೆ ಎಂದು ನಗು ನಗುತ್ತಲೇ ಟಾಂಗ್ ಕೊಟ್ಟಿದ್ದಾರೆ. ಮತ್ತೆ ಮಾತನ್ನು ಮುಂದುವರೆಸಿದ ಅವರು, ರಶ್ಮಿಕಾ ಮದುವೆಯಾದರೂ ನಾನು ಅವರ ಜೊತೆ ನಟನೆ ಮಾಡೋದಕ್ಕೆ ಸಿದ್ಧ. ಮುಂದೊಂದು ದಿನ ರಶ್ಮಿಕಾಗೆ ಮಗಳಾದರೆ ಆಕೆ ಜೊತೆಗೂ ಸಿನಿಮಾ ಮಾಡುತ್ತೇನೆ ಹೇಳಿದ್ದಾರೆ.
ತಮಿಳಿನ ಎಆರ್ ಮುರುಗದಾಸ್ ನಿರ್ದೇಶನದಲ್ಲಿ ಸಿಕಂದರ್ ಸಿನಿಮಾ ಮೂಡಿ ಬರುತ್ತಿದೆ. ಇದೇ ಸಿನಿಮಾದಲ್ಲಿ ನಟಿ ಕಾಜಲ್ ಅಗರ್ವಾಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಸತ್ಯರಾಜ್ ಇದರಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






