Greater Bengaluru: ಬಿಬಿಎಂಪಿ ಇನ್ಮುಂದೆ “ಗ್ರೇಟರ್ ಬೆಂಗಳೂರು”: ನಾಳೆಯೇ ಜಾರಿ, ಸರ್ಕಾರದಿಂದ ಅಧಿಸೂಚನೆ

ಮೇ 14, 2025 - 14:10
 0  11
Greater Bengaluru: ಬಿಬಿಎಂಪಿ ಇನ್ಮುಂದೆ “ಗ್ರೇಟರ್ ಬೆಂಗಳೂರು”: ನಾಳೆಯೇ ಜಾರಿ, ಸರ್ಕಾರದಿಂದ ಅಧಿಸೂಚನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇನ್ನು ಮುಂದೆ ಗ್ರೇಟರ್ ಬೆಂಗಳೂರು ಅಗಲಿದೆ. ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿರುವ ಬೆಂಗಳೂರಿಗೆ ಹೊಸ ರೂಪ, ಹೊಸ ಆಡಳಿತ ನೀಡಲು ಸರ್ಕಾರ ತೀರ್ಮಾನಿಸಿದೆ. ಇದುವರೆಗೆ ಇದ್ದ ಬಿಬಿಎಂಪಿ ಎಂಬ ಹೆಸರಿನ ಬದಲು ‘ಗ್ರೇಟರ್ ಬೆಂಗಳೂರು ಅಥಾರಿಟಿ’ ಅಸ್ತಿತ್ವಕ್ಕೆ ಬರಲಿದೆ.

ಗ್ರೇಟರ್ ಬೆಂಗಳೂರಿಗೆ ರಾಜ್ಯಪಾಲರ ಗ್ರೀನ್ ಸಿಗ್ನಲ್​​ ನೀಡಿದ್ದಾರೆ. ಈ ಬೆನ್ನಲ್ಲೇ ಅಲರ್ಟ್ ಆದ ಸರ್ಕಾರ ನಾಳೆ (ಮೇ 15)ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ತಯಾರಿ ನಡೆಸಿತ್ತು. ಹಾಗಾಗಿ ನಾಳೆಯಿಂದ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ಥಿತ್ವಕ್ಕೆ ಬರುತ್ತಿದೆ. ಆ ಮೂಲಕ ರಾಜಧಾನಿ ಬೆಂಗಳೂರಿನ ಆಡಳಿತದ ಚಿತ್ರಣವೇ ಬದಲಾಗಲಿದೆ. ಬೆಂಗಳೂರಿನ ಪ್ರಾದೇಶಿಕತೆ-ಭೌಗೋಳಿಕತೆಯ ವ್ಯಾಪ್ತಿ-ವಿಸ್ತೀರ್ಣ ಕೂಡ ಹೆಚ್ಚಾಗಲಿದೆ.

ಬೆಂಗಳೂರಿನ ಆಡಳಿತ ನೋಡಿಕೊಳ್ಳುತ್ತಿದ್ದ ಬಿಬಿಎಂಪಿ ಇನ್ಮುಂದೆ ನೆನಪಾಗಿ ಉಳಿಯಲಿದೆ. ಬೆಂಗಳೂರನ್ನ ವಿಭಾಗ ಮಾಡಿ ಆಡಳಿತ ನಡೆಸುವ ಸರ್ಕಾರದ ಗ್ರೇಟರ್ ಬೆಂಗಳೂರು ಕನಸಿಗೆ ಇತ್ತೀಚೆಗಷ್ಟೇ ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇದೀಗ ಸರ್ಕಾರ ಈ ವಿಧೆಯಕ ಜಾರಿ ಮಾಡಿ ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿ ಮಾಡಿದೆ. ಹಾಗಾಗಿ ನಾಳೆ ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬರಲಿದೆ.

ಇನ್ನು ಬಿಬಿಎಂಪಿ ನಾಳೆಯಿಂದ ತನ್ನ ಅಸ್ತಿತ್ವ ಕಳೆದುಕೊಳ್ಳಲಿದ್ದು, ಹೆಸರು-ಸ್ವರೂಪದಲ್ಲಿ ಭಾರೀ ರೂಪಾಂತರಗೊಂಡು ಬಿಬಿಎಂಪಿ ಅನ್ನೋ ಹೆಸರು ಇತಿಹಾಸದ ಪುಟ ಸೇರಲಿದೆ. ಮೇ15 ರ ನಂತರ ಬಿಬಿಎಂಪಿ ಬದಲು ಅಂದಿನಿಂದಲೇ ಜಿಬಿಎ ಅಸ್ಥಿತ್ವಕ್ಕೆ ಬರಲಿದ್ದು, ಬೆಂಗಳೂರು ಆಡಳಿತ ಕಾಯ್ದೆ-2024 ಜಾರಿಯಾಗಲಿದೆ. ಈಗಿರುವ ಬಿಬಿಎಂಪಿಯನ್ನ ಮೂರು ಪಾಲಿಕೆಗಳನ್ನಾಗಿ ಮಾಡುವ ಸಾಧ್ಯತೆಗಳಿವೆ. ಈ ಮೂರು ಪಾಲಿಕೆಗಳ ವ್ಯಾಪ್ತಿ ಗ್ರೇಟರ್ ಬೆಂಗಳೂರಿಗೆ ಬರುವುದರಿಂದ ಜಿಬಿಎಗೆ ಆಡಳಿತಾಧಿಕಾರಿಗಳನ್ನ ನೇಮಕ ಮಾಡಲಾಗುತ್ತೆ. 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow