ಸಿಖ್ ವಿರೋಧಿ ದಂಗೆ ಪ್ರಕರಣ: ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್‌ʼಗೆ ಜೀವಾವಧಿ ಶಿಕ್ಷೆ

ಫೆಬ್ರವರಿ 25, 2025 - 16:02
 0  11
ಸಿಖ್ ವಿರೋಧಿ ದಂಗೆ ಪ್ರಕರಣ: ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್‌ʼಗೆ ಜೀವಾವಧಿ ಶಿಕ್ಷೆ

ನವದೆಹಲಿ: 1984 ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್ ಅವರಿಗೆ ಇಂದು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಹಿಂಸಾಚಾರ ಮತ್ತು ಅದರ ಪರಿಣಾಮಗಳ ತನಿಖೆಗಾಗಿ ರಚಿಸಲಾದ ನಾನಾವತಿ ಆಯೋಗದ ವರದಿಯ ಪ್ರಕಾರ,

ದೆಹಲಿಯಲ್ಲಿ 2,733 ಜನರ ಸಾವಿಗೆ ಕಾರಣವಾದ ಗಲಭೆಗೆ ಸಂಬಂಧಿಸಿದಂತೆ 587 ಎಫ್ಐಆರ್ಗಳು ದಾಖಲಾಗಿವೆ. ಒಟ್ಟು 240 ಎಫ್ಐಆರ್ಗಳನ್ನು ಪೊಲೀಸರು "ಪತ್ತೆಯಾಗದ" ಪ್ರಕರಣಗಳೆಂದು ಮುಚ್ಚಿಹಾಕಿದ್ದಾರೆ ಮತ್ತು 250 ಪ್ರಕರಣಗಳು ಖುಲಾಸೆಯಾಗಿವೆ.

ದೆಹಲಿಯ ರೋಸ್ ಅವೆನ್ಯೂ ರಸ್ತೆಯಲ್ಲಿರುವ ವಿಶೇಷ ನ್ಯಾಯಾಲಯ ಈಗಾಗಲೇ ಸಜ್ಜನ್ಕುಮಾರ್​​ ಅಪರಾಧಿ ಎಂದು ತೀರ್ಪು ನೀಡಿತ್ತು. 1984ರಲ್ಲಿ ಸಿಖ್ ವಿರೋಧಿ ದಂಗೆ ವೇಳೆ ಇಬ್ಬರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ.

ದೆಹಲಿಯ ಸರಸ್ವತಿ ವಿಹಾರ್ ಪ್ರದೇಶದಲ್ಲಿ ನಡೆದಿದ್ದ ಘಟನೆಯಲ್ಲಿ 1984 ನವೆಂಬರ್ 1ರಂದು ತಂದೆ, ಮಗನ ಕೊಲೆ ಆಗಿತ್ತು. ತಂದೆ ಜಸ್ವಂತ್ ಸಿಂಗ್, ಮಗ ತರುಣ್ದೀಪ್ ಸಿಂಗ್ ಕೊಲೆ ನಡೆದಿತ್ತು. ಸಜ್ಜನ್ ಕುಮಾರ್​​ ನೇತೃತ್ವದ ಗುಂಪಿನ ವಿರುದ್ಧ ಕೇಸ್ ದಾಖಲಾಗಿತ್ತು. ಪಂಜಾಬಿ ಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow