ಸಿದ್ದರಾಮಯ್ಯ ಮಂಡಿಸಿರುವುದು ಜನತಾ ಬಜೆಟ್, ಇಡೀ ದೇಶಕ್ಕೆ ಮಾದರಿ - DCM ಡಿಕೆಶಿ

ಬೆಂಗಳೂರು:- ಕರ್ನಾಟಕ ಬಜೆಟ್ ದೇಶಕ್ಕೆ ಮಾದರಿಯಾಗಿದೆ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಈ ಬಾರಿಯ ಬಜೆಟ್ ದೇಶಕ್ಕೆ ಮಾದರಿ. ನಮ್ಮ ಬಜೆಟ್ ಅನ್ನು ಬೇರೆಬೇರೆ ರಾಜ್ಯಗಳು ಗಮನಿಸುತ್ತಾರೆ. ಇದು ಉತ್ತಮವಾದ ಬಜೆಟ್. ಕರ್ನಾಟಕದ ಜನತೆಗೆ ಅನುಕೂಲ ಆಗಲಿದೆ.
ಟನಲ್ ಆಗೇ ಆಗುತ್ತೆ. ಹೊಸ ಮೆಟ್ರೋ ಏನೇ ಮಾಡಿದರೂ ಅದರ ಜೊತೆಗೆ ಎಲಿವೇಟೇಡ್ ಕಾರಿಡಾರ್ ಕೂಡ ನಾವು ಮಾಡುತ್ತೇವೆ. 50% ಕಾರ್ಪೋರೇಷನ್, 50% ಬಿಎಂಆರ್‌ಸಿಎಲ್ ಕೊಡುತ್ತದೆ. ನಾವು ಕಾರಿಡಾರ್ ಮಾಡುತ್ತೇವೆ ಎಂದರು
ನಾವು ಹೇಳಿದಂತೆ 300 ಕಿಮೀ ರಸ್ತೆ ನಿರ್ಮಾಣ ಮಡುತ್ತೇವೆ. ಕಾಲುವೆ ಪಕ್ಕದಲ್ಲಿ 50 ಅಡಿ ಬಿಟ್ಟು ರಸ್ತೆ ನಿರ್ಮಾಣ ಮಾಡುತ್ತೇವೆ. ಅದರ ಬದಲಾಗಿ ಅವರಿಗೆ ಟಿಡಿಆರ್ ಕೊಟ್ಟು ಅಲ್ಲಿ ರೋಡ್ ಮಾಡುತ್ತೇವೆ. ಹೀಗಾಗಿ 3000 ಕೋಟಿ ವೆಚ್ಚದಲ್ಲಿ 300 ಕಿ.ಮೀ ರಸ್ತೆ ನಿರ್ಮಾಣ ಆಗಲಿದೆ ಎಂದು ತಿಳಿಸಿದರು.
ಬಿಜೆಪಿ ಹಲಾಲ್ ಬಜೆಟ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಏನು ಬೇಕಾದರೂ ಮಾತಾಡಲಿ. ಪಾಪ ಅವರು ಇನ್ನೇನು ಮಾಡುತ್ತಾರೆ? ಇನ್ನೇನು ಹೇಳೋಕೆ ಸಾಧ್ಯ? ಸತ್ಯನಾ ಮುಚ್ಚಿಡೋಕೆ ಆಗುತ್ತಾ? ಬಿಜೆಪಿಯವರು ಬಜೆಟ್‌ನ ಕಣ್ಣಲ್ಲಿ ಓದಿದ್ದಾರೆ, ಕಿವಿಯಲ್ಲಿ ಕೇಳಿಸಿಕೊಡಿದ್ದಾರೆ. ಬಾಯಲ್ಲಿ ಇನ್ನೇನು ಮಾತಾಡಬಹುದು. ಬಾಯಲ್ಲಿ ಸುಳ್ಳು ಹೇಳಬಹುದು ಅಲ್ವಾ, ಹಾಗಾಗಿ ಅದನ್ನ ಮಾಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.
ನಿಮ್ಮ ಪ್ರತಿಕ್ರಿಯೆ ಏನು?






