ತತ್ಕಾಲ್ ಟಿಕೆಟ್ ಬುಕ್ಕಿಂಗ್ಗೆ ಇನ್ಮುಂದೆ ಆಧಾರ್ ಕಡ್ಡಾಯ: ಸಚಿವ ಅಶ್ವಿನಿ ವೈಷ್ಣವ್

ನವದೆಹಲಿ: ಇ-ಆಧಾರ್ ಪರಿಶೀಲನೆ ಹೊಂದಿರುವ ಬಳಕೆದಾರರು ಮಾತ್ರ ಇನ್ನು ಮುಂದೆ ತತ್ಕಾಲ್ ಟಿಕೆಟ್ಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇ-ಆಧಾರ್ ಪರಿಶೀಲನಾ ವ್ಯವಸ್ಥೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ನಿಜವಾದ ಬಳಕೆದಾರರು ಮಾತ್ರ ದೃಢೀಕೃತ ಟಿಕೆಟ್ಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು.
ಹೌದು ತಮ್ಮ ಖಾತೆಗಳನ್ನು ಆಧಾರ್ನೊಂದಿಗೆ ಲಿಂಕ್ ಮಾಡುವ ಖಾತೆದಾರರಿಗೆ ತತ್ಕಾಲ್ ಟಿಕೆಟ್ ಮಾರಾಟದ ಮೊದಲ 10 ನಿಮಿಷಗಳಲ್ಲಿ ಆದ್ಯತೆಯ ಬುಕಿಂಗ್ ಸಿಗುತ್ತದೆ. ಅಧಿಕೃತ ಐಆರ್ಸಿಟಿಸಿ ಏಜೆಂಟ್ಗಳಿಗೂ ಸಹ ತತ್ಕಾಲ್ ವಿಂಡೋ ತೆರೆದ ಮೊದಲ 10 ನಿಮಿಷಗಳಲ್ಲಿ ಟಿಕೆಟ್ಗಳನ್ನು ಬುಕ್ ಮಾಡಲು ಅವಕಾಶವಿಲ್ಲ ಎಂದರು.
ಆಧಾರ್ನೊಂದಿಗೆ ದೃಢೀಕರಿಸದ ಎಲ್ಲಾ ಖಾತೆಗಳಿಗೆ ವಿಶೇಷ ಪರಿಶೀಲನೆ ನಡೆಸಲು ಐಆರ್ಸಿಟಿಸಿ ನಿರ್ಧರಿಸಿದೆ. ಅನುಮಾನಾಸ್ಪದವೆಂದು ಕಂಡುಬಂದ ಖಾತೆಗಳನ್ನು ಮುಚ್ಚಲಾಗುತ್ತದೆ ಎಂದರು. ಅಧಿಕೃತ ಅಂಕಿಅಂಶಗಳ ಪ್ರಕಾರ, ಆನ್ಲೈನ್ ಪ್ಲಾಟ್ಫಾರ್ಮ್ ಮೂಲಕ ಪ್ರತಿದಿನ ಸುಮಾರು 2,25,000 ಪ್ರಯಾಣಿಕರು ತತ್ಕಾಲ್ ಟಿಕೆಟ್ಗಳನ್ನು ಬುಕ್ ಮಾಡುತ್ತಾರೆ.
ಮೇ 24 ರಿಂದ ಜೂನ್ 2 ರವರೆಗೆ ನಡೆಸಿದ ತತ್ಕಾಲ್ ಟಿಕೆಟ್ ಬುಕಿಂಗ್ ಮಾದರಿಗವಿಶ್ಲೇಷಣೆಯಲ್ಲಿ, ಬುಕಿಂಗ್ ವಿಂಡೋ ತೆರೆದ ನಂತರದ ಮೊದಲ ನಿಮಿಷದಲ್ಲಿ ಸರಾಸರಿ 1,08,000 ಎಸಿ ಕ್ಲಾಸ್ ಟಿಕೆಟ್ಗಳಲ್ಲಿ 5,615 ಟಿಕೆಟ್ಗಳನ್ನು ಮಾತ್ರ ಬುಕ್ ಮಾಡಲಾಗಿದೆ.
ಎರಡನೇ ನಿಮಿಷದಲ್ಲಿ 22,827 ಟಿಕೆಟ್ಗಳನ್ನು ಬುಕ್ ಮಾಡಲಾಗಿದೆ. ಎಸಿ ಕ್ಲಾಸ್ನಲ್ಲಿ, ವಿಂಡೋ ತೆರೆದ ಮೊದಲ 10 ನಿಮಿಷಗಳಲ್ಲಿ ಸರಾಸರಿ 67,159 ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಬುಕ್ ಮಾಡಲಾಗಿದೆ. ಇದು ಆನ್ಲೈನ್ನಲ್ಲಿ ಬುಕ್ ಮಾಡಲಾದ ಎಲ್ಲಾ ಟಿಕೆಟ್ಗಳಲ್ಲಿ ಶೇಕಡಾ 62.5ನ್ನು ಪ್ರತಿನಿಧಿಸುತ್ತದೆ ಎಂದರು.
ನಿಮ್ಮ ಪ್ರತಿಕ್ರಿಯೆ ಏನು?






