Champions Trophy 2025: ಚಾಂಪಿಯನ್ಸ್​ ಟ್ರೋಫಿಯಿಂದಲೇ ಹೊರ ನಡೆಯುತ್ತಾ ಪಾಕಿಸ್ತಾನ್!?

ಡಿಸೆಂಬರ್ 1, 2024 - 12:22
 0  13
Champions Trophy 2025: ಚಾಂಪಿಯನ್ಸ್​ ಟ್ರೋಫಿಯಿಂದಲೇ ಹೊರ ನಡೆಯುತ್ತಾ ಪಾಕಿಸ್ತಾನ್!?

ಚಾಂಪಿಯನ್ಸ್​ ಟ್ರೋಫಿಯಿಂದಲೇ ಪಾಕಿಸ್ತಾನವನ್ನು ಕಿಕ್ ಔಟ್ ಮಾಡಲು ICC ಮುಂದಾಗಿದೆ. 

ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವುದು ಸೂಕ್ತ ಎಂದು ಐಸಿಸಿ ಅಭಿಪ್ರಾಯಟ್ಟಿದೆ. ಆದರೆ ಎರಡು ದೇಶಗಳಲ್ಲಿ ಟೂರ್ನಿಯನ್ನು ಆಯೋಜಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಸಿದ್ಧವಿಲ್ಲ. 

ಚಾಂಪಿಯನ್ಸ್ ಟ್ರೋಫಿ 2025 ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವಂತೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​​ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸೂಚಿಸಿದೆ. 

ಅತ್ತ ಉಳಿದೆಲ್ಲಾ ಕ್ರಿಕೆಟ್ ಮಂಡಳಿಗಳು ಹೈಬ್ರಿಡ್ ಮಾದರಿಗೆ ಸಮ್ಮತಿ ಸೂಚಿಸಿದರೂ, ಪಿಸಿಬಿ ಮಾತ್ರ ತನ್ನ ನಿಲುವನ್ನು ಬದಲಿಸಿಲ್ಲ. ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಈ ಹಠಮಾರಿ ನಿರ್ಧಾರದಿಂದ ಇದೀಗ ಐಸಿಸಿ ಇಕ್ಕಟ್ಟಿಗೆ ಸಿಲುಕಿದೆ. ಹೀಗಾಗಿಯೇ ಇದೀಗ ಪಾಕಿಸ್ತಾನ್ ತಂಡವನ್ನೇ ಟೂರ್ನಿಯಿಂದ ಹೊರಗಿಟ್ಟು ಸೌತ್ ಆಫ್ರಿಕಾ ಅಥವಾ ಭಾರತದಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸುವ ಬಗ್ಗೆ ಕೂಡ ಚಿಂತಿಸಲಾಗಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದಲ್ಲೇ ಸಂಪೂರ್ಣ ಟೂರ್ನಿ ಆಯೋಜಿಸುವುದಾಗಿ ಪಟ್ಟು ಹಿಡಿದು ಕುಳಿತಿರುವ ಪಾಕಿಸ್ತಾನ್ ತಂತ್ರಕ್ಕೆ ಇದೀಗ ಐಸಿಸಿ ಪ್ರತಿತಂತ್ರ ಹೆಣೆದಿರುವುದು ಇದೀಗ ಪಿಸಿಬಿ ಚಿಂತೆಯನ್ನು ಹೆಚ್ಚಿಸಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow