ಹಾಸನದಲ್ಲಿ ಏನಾಗ್ತಿದೆ..? ಹೃದಯಾಘಾತಕ್ಕೆ ಮತ್ತೊಂದು ಸಾವು..! ಒಂದು ತಿಂಗಳ ಅಂತರದಲ್ಲಿ 18 ಮಂದಿ ಬಲಿ

ಹಾಸನ: ಕಾಕತಾಳಿಯವೋ, ಅಥವಾ ನಿಜಕ್ಕೂ ಏನಾದ್ರೂ ಅಪಾಯದ ಮುನ್ಸೂಚನೆಯೋ ಗೊತ್ತಿಲ್ಲ. ಹಾಸನದಲ್ಲಿ ಹೃದಯಾಘಾತ ಅನ್ನೋ ಹೆಮ್ಮಾರಿ ರಣಕೇಕೆ ಹಾಕ್ತಿದೆ. ಮಕ್ಕಳು ಮರಿ ಅಂತಾ ನೋಡ್ತಿಲ್ಲ. ದೊಡ್ಡವರು, ಚಿಕ್ಕವ್ರೂ ಉಳೀತಿಲ್ಲ. ಹೃದಯಾಘಾತದ ರೂಪದಲ್ಲಿ ಬರೋ ಯಮರಾಯ ಸಾವಿನ ಕೇಕೆ ಹಾಕ್ತಿದ್ದಾನೆ. ಇದೀಗ ಹೃದಯಾಘಾತಕ್ಕೆ ಹಾಸನದಲ್ಲಿ ಮತ್ತೊಂದು ಬಲಿಯಾಗಿದೆ.
ಹಾಸನ ತಾಲೂಕು,ಕಟ್ಟಾಯ ಹೋಬಳಿ ಹ್ಯಾರಾನೆ ಗ್ರಾಮದ ಗಿರೀಶ್(41), ಮೃತ ವ್ಯಕ್ತಿಯಾಗಿದ್ದು, ಜೋಳದ ಹೊಲಕ್ಕೆ ಗೊಬ್ಬರ ಹಾಕಿ ಮಧ್ಯಾಹ್ನ ಮನೆಗೆ ಬಂದಿದ್ದ ಗಿರೀಶ್ ಮನೆಯಲ್ಲೆ ಕುಸಿದು ಬಿದ್ದಿದ್ದಾರೆ. ತಕ್ಷಣ ಹಾಸನಕ್ಕೆ ಚಿಕಿತ್ಸೆಗಾಗಿ ಕರೆ ತರುವ ವೇಳೆಗೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.
ಇಂದು ಬೆಳಗ್ಗೆ ಗೋವಿಂದ್ ಸಾವನ್ನಪ್ಪಿದ್ದರು. ಇಂದು ಒಂದೇ ದಿನ ಹೃದಯಾಘಾತಕ್ಕೆ ಎರಡನೇ ಬಲಿಯಾಗಿದೆ. ಒಂದು ತಿಂಗಳ ಅವಧಿಯಲ್ಲಿ ಹೃದಯಾಘಾತಕ್ಕೆ 18 ಜನ ಸಾವನ್ನಪ್ಪಿರುವುದು ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ. ಹಾಸನ ಜಿಲ್ಲೆಯಲ್ಲಿ ನಿಜಕ್ಕೂ ಹೃದಯಾಘಾತ ಅನ್ನೋ ಮಾರಿ ಒಕ್ಕರಿಸಿದಂತೆ ಕಾಣ್ತಿದೆ. ಒಂದೇ ಒಂದು ತಿಂಗಳಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ವೈದ್ಯರು ಕೂಡಾ ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






