ರಾಜ್ಯದ ಈ ಜಿಲ್ಲೆಗಳಿಗೆ ಜುಲೈ 3ರವರೆಗೆ ಗುಡುಗು ಸಹಿತ ಭಾರೀ ಮಳೆ..! ರೆಡ್ ಅಲರ್ಟ್ ಘೋಷಣೆ

ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ. ನದಿಗಳು ಉಕ್ಕಿ ಹರಿದಿದ್ದು ಜನಸಂಚಾರಕ್ಕೆ ತೊಂದರೆಯಾಗಿದೆ. ನದಿ ಪಾತ್ರಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಲೆನಾಡಲ್ಲಿ ಭೂಕುಸಿತ ಸಂಭವಿಸುತ್ತಿದೆ. ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಮುಂದುವರಿಸಲಾಗಿದೆ. ಹೌದು ಕರ್ನಾಟಕದಾದ್ಯಂತ ಭಾರಿ ಮಳೆಯಾಗುತ್ತಿದೆ. ಕೊಡಗು ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಲಬುರಗಿ, ಬೀದರ್, ಬೆಳಗಾವಿ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಸಾಧಾರಣ ಮಳೆಯಾಗಲಿದೆ.
ವಿರಾಜಪೇಟೆ, ಕೊಟ್ಟಿಗೆಹಾರ, ಶೃಂಗೇರಿ, ಹುಂಚದಕಟ್ಟೆ, ಬೆಳ್ತಂಗಡಿ, ಯಲ್ಲಾಪುರ, ಕ್ಯಾಸಲ್ರಾಕ್, ಖಾನಾಪುರ, ಕೊಪ್ಪ, ಸೋಮವಾರಪೇಟೆ, ಪೊನ್ನಂಪೇಟೆ, ಸಿದ್ದಾಫುರ, ಕದ್ರಾ, ಬನವಾಸಿಯಲ್ಲಿ ಭಾರಿ ಮಳೆಯಾಗಿದೆ.
ಲೋಂಡಾ, ಜಯಪುರ, ಕಾರ್ಕಳ, ಬಂಟವಾಳ, ಸುಳ್ಯ, ಗೇರುಸೊಪ್ಪ, ಹೊನ್ನಾವರ, ಮಾಣಿ, ಶಕ್ತಿನಗರ, ಕುಂದಾಪುರ, ಮೂಡುಬಿದಿರೆ, ಅಂಕೋಲಾ, ಬೆಳಗಾವಿ, ಆನವಟ್ಟಿ, ಸರಗೂರು, ಅಫ್ಝಲ್ಪುರ, ಮಂಕಿ, ಹಳಿಯಾಳ, ಮುಂಡಗೋಡು, ಪುತ್ತೂರು, ಉಡುಪಿ, ಗೋಕರ್ಣ, ಶಿರಾಲಿ, ಮಂಗಳೂರು, ಕೋಟಾ, ಬೀದರ್, ಕಿತ್ತೂರು, ಹಾವೇರಿ, ಚಿಂಚೋಳಿ, ಧಾರವಾಡ, ಹುಬ್ಬಳ್ಳಿ, ಹಿರೆಕೆರೂರು, ಕಲಬುರಗಿ, ಗುಬ್ಬಿ, ಜಗಳೂರು, ಭದ್ರಾವತಿ, ಕೋಣನೂರಿನಲ್ಲಿ ಮಳೆಯಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






