Kitchen Hacks: ಅಕ್ಕಿ-ಬೇಳೆಕಾಳು ಡಬ್ಬಗಳಲ್ಲಿ ಹುಳ ಆಗಿದ್ಯಾ..? ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ ಸಾಕು

ಎಪ್ರಿಲ್ 5, 2025 - 06:57
 0  16
Kitchen Hacks: ಅಕ್ಕಿ-ಬೇಳೆಕಾಳು ಡಬ್ಬಗಳಲ್ಲಿ ಹುಳ ಆಗಿದ್ಯಾ..? ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ ಸಾಕು

 

ಅಕ್ಕಿ ನಮ್ಮ ದೈನಂದಿನ ಆಹಾರದ ಭಾಗವಾಗಿದೆ. ಇಂತಹ ಅಕ್ಕಿಯನ್ನು ಹಲವಾರು ದಿನಗಳವರೆಗೆ ಸಂಗ್ರಹಿಸಿದರೆ ಅದರಲ್ಲಿ ಹುಳುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಅಕ್ಕಿಯನ್ನು ಬಳಸಲು ಅನೇಕರು ಹಿಂದೇಟು ಹಾಕುತ್ತಾರೆ. ಕೋಳಿ ಸಾಕುವವರಿದ್ದರೆ ಅಂತಹ ಅಕ್ಕಿಯನ್ನು ಕೋಳಿಗಳಿಗೆ ಹಾಕಿ ಮುಗಿಸುತ್ತಾರೆ.

ಅದಾಗ್ಯೂ ನೀವು ಅಕ್ಕಿಯಿಂದ ಹುಳುಗಳನ್ನು ತೆಗೆದು ಮತ್ತೆ ಬಳಕೆ ಮಾಡುವುದು ತುಂಬಾ ಸುಲಭ. ಹಾಗಿದ್ದರೆ ಅಕ್ಕಿಯಿಂದ ಹುಳುಗಳನ್ನು ಹೇಗೆ ತೆಗೆದುಹಾಕಬಹುದು ಮತ್ತು ಅಕ್ಕಿಯಲ್ಲಿ ಹಾಗೂ ಬೇಳೆಗಳಲ್ಲಿ ಹುಳುಗಳು ಆಗದಂತೆ ದೀರ್ಘಕಾಲದವರೆಗೆ ಸಂಗ್ರಹಿಸಬಹುದು ಹೇಗೆ ಎಂಬುದನ್ನು ತಿಳಿಯೋಣ.

ಬೆಂಕಿ ಪೊಟ್ಟಣ:ಕೀಟಗಳಿಂದ ಅಕ್ಕಿಯನ್ನು ರಕ್ಷಿಸಲು, ಅಕ್ಕಿ ಪೆಟ್ಟಿಗೆಯ ಅಥವಾ ಪಾತ್ರೆಗಳ ಬಳಿ ಬೆಂಕಿ ಕಡ್ಡಿ ತುಂಬಿದ ಬೆಂಕಿ ಪೊಟ್ಟಣ ಇರಿಸಿ. ಬೆಂಕಿ ಕಡ್ಡಿ ಸಲ್ಫರ್ ಅನ್ನು ಹೊಂದಿರುತ್ತದೆ, ಇದು ಕೀಟಗಳಿಂದ ಅಕ್ಕಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಅಕ್ಕಿಗೆ ಮಾತ್ರವಲ್ಲ, ಇತರ ರೀತಿಯ ಧಾನ್ಯಗಳನ್ನು ಕೀಟಗಳಿಂದ ರಕ್ಷಿಸಲೂ ನೀವು ಈ ವಿಧಾನ ಅಳವಡಿಸಿಕೊಳ್ಳಬಹುದು.

ಲವಂಗ:ಕೀಟಗಳಿಂದ ಅಕ್ಕಿಯನ್ನು ರಕ್ಷಿಸಲು, ನೀವು ಲವಂಗ ಬಳಸಬಹುದು. ಇದಕ್ಕಾಗಿ, 10-15 ಲವಂಗವನ್ನು ಅಕ್ಕಿ ಪಾತ್ರೆಗೆ ಹಾಕಿ. ಲವಂಗ ಎರಡು ಪ್ರಯೋಜನಗಳನ್ನು ಹೊಂದಿರುತ್ತದೆ, ಅಕ್ಕಿಯಲ್ಲಿ ಕೀಟಗಳು ಕಂಡುಬಂದರೆ, ಲವಂಗ ಕೀಟಗಳನ್ನು ಓಡಿಸುತ್ತದೆ, ಮತ್ತು ಅಕ್ಕಿಯಲ್ಲಿ ಯಾವುದೇ ಹುಳುಗಳು ಇಲ್ಲದಿದ್ದರೆ, ಕೀಟಗಳು ಅಕ್ಕಿಗೆ ಬರದಂತೆ ಸಹ ನೋಡಿಕೊಳ್ಳುತ್ತದೆ ಹಾಗೂ ಕೀಟಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಬೇವಿನ ಎಲೆಗಳು:ಅಕ್ಕಿಯನ್ನು ಕೀಟಗಳಿಂದ ರಕ್ಷಿಸಲು, ಅಕ್ಕಿ ಬಾಕ್ಸ್‌ನಲ್ಲಿ 10-15 ಬೇವಿನ ಎಲೆಗಳನ್ನು ಹಾಕಿ ಅಥವಾ ನೀವು ಕೊಲ್ಲಿ ಎಲೆಗಳನ್ನು ಹಾಕಬಹುದು. ಕೊಲ್ಲಿ ಎಲೆಗಳು ಹಲವು ಅರೋಗ್ಯಕರ ಗುಣಗಳನ್ನು ಹೊಂದಿದೆ. ನೀವು ಬೇವಿನ ಎಲೆಗಳನ್ನು ಅಕ್ಕಿ ಹೊರತಾಗಿ ಧಾನ್ಯಗಳನ್ನು ರಕ್ಷಿಸಲು ಬಳಸಬಹುದು. ಕೊಲ್ಲಿ ಎಲೆಗಳು ಹಾಗೂ ಬೇವಿನ ಎಲೆಗಳು ಎರಡೂ ಕೀಟಗಳು ಅಕ್ಕಿಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಅಕ್ಕಿಯನ್ನು ಗಾಳಿಯಾಡದ ಕಂಟೇನರ್‌ನಲ್ಲಿ ಸಂಗ್ರಹಿಸಿ.

ಮೆಣಸಿನಕಾಯಿ: ನಾವು ನಮ್ಮ ದೈನಂದಿನ ಅಡುಗೆಯಲ್ಲಿ ಮೆಣಸಿನಕಾಯಿಯನ್ನು ಬಳಸುತ್ತೇವೆ. ಆದರೆ ಒಂದು ಹಿಡಿ ಮೆಣಸಿನಕಾಯಿಯನ್ನು ಅಕ್ಕಿ ಹಾಗೂ ಬೇಳೆಕಾಳುಗಳ ಡಬ್ಬದಲ್ಲಿಟ್ಟರೆ, ಇದರ ವಾಸನೆಯಿಂದ ಹುಳು ಸೇರಿವುದಿಲ್ಲ. ಏಕೆಂದರೆ ಹುಳುಗಳಿಗೆ ಇದರ ವಾಸನೆ ಅಂದರೆ ಇಷ್ಟವಾಗುವುದಿಲ್ಲ. ಸಾಮಾನ್ಯವಾಗಿ ಮೆಣಸಿನಕಾಯಿ ವಾಸನೆ ನಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ ಎಂದರೆ ಇನ್ನೂ ಕೀಟಗಳು ಉಳಿಸುತ್ತವೆಯೇ ಎಂದು ಯೋಚಿಸಿ.

ಪಲಾವ್ ಎಲೆ: ನಮ್ಮ ಅಡುಗೆಗೆ ಸುವಾಸನೆ ಮತ್ತು ಪರಿಮಳವನ್ನು ಸೇರಿಸಲು ನಾವು ಪಲಾವ್ ಎಲೆಗಳನ್ನು ಬಳಸುತ್ತೇವೆ. ಪಲಾವ್ ಎಲೆಗಳು ಮಾಂಸಾಹಾರಿ ಅಡುಗೆ, ಬಿರಿಯಾನಿ ಮತ್ತು ಮಸಾಲಾ ಆಹಾರಗಳನ್ನು ತಯಾರಿಸಲು ನಿಯಮಿತವಾಗಿ ಬಳಸುತ್ತೇವೆ. ಇದರ ಪರಿಮಳ ನಮಗೂ ಇಷ್ಟವಾಗುತ್ತದೆ. ಆದರೆ ಕೀಟಗಳಿಗೆ ಪಲಾವ್ ಎಲೆ ವಾಸನೆ ಇಷ್ಟವಾಗುವುದಿಲ್ಲ. ಹಾಗಾಗಿ ಮನೆಯಲ್ಲಿ ಅಕ್ಕಿ, ಬೇಳೆಕಾಳು ಇತ್ಯಾದಿಗಳನ್ನು ಸಂಗ್ರಹಿಸಿಡುವ ಪಾತ್ರೆಗಳಲ್ಲಿ 4-5 ಪಲಾವ್ ಎಲೆಗಳನ್ನು ಹಾಕಿದರೆ ಕ್ರಿಮಿ, ಹುಳುಗಳು ಬರದಂತೆ ತಡೆಯಬಹುದು. 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow