Narendra Modi: 3 ವಂದೇ ಭಾರತ್​ ಎಕ್ಸ್​ ಪ್ರೆಸ್ʼ​​ಗೆ ಪ್ರಧಾನಿ ಮೋದಿ ಚಾಲನೆ..!

ಆಗಸ್ಟ್ 10, 2025 - 12:35
 0  12
Narendra Modi: 3 ವಂದೇ ಭಾರತ್​ ಎಕ್ಸ್​ ಪ್ರೆಸ್ʼ​​ಗೆ ಪ್ರಧಾನಿ ಮೋದಿ ಚಾಲನೆ..!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಮತ್ತು ಬೆಳಗಾವಿ ನಡುವಿನ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಟ್ರೈನ್ಗೆ ಹಸಿರು ನಿಶಾನೆ ತೋರಿದ ಮೋದಿ, ಇನ್ಮುಂದೆ ಮಾರ್ಗದಲ್ಲಿ ಸೂಪರ್ಫಾಸ್ಟ್ ರೈಲು ಸಂಚರಿಸಲು ದಾರಿ ಮಾಡಿಕೊಟ್ಟರು.

ವಂದೇ ಭಾರತ್ ರೈಲು ಉತ್ತರ ಕರ್ನಾಟಕದ ಮಂದಿಯ ಬಹುದಿನಗಳ ಕನಸಾಗಿದ್ದು, ಇದು ಕರ್ನಾಟಕದ 11ನೇ ವಂದೇ ಭಾರತ್ ರೈಲು ಎನ್ನುವ ಖ್ಯಾತಿ ಪಡೆದಿದೆ. ರೈಲು ಒಟ್ಟು 8 ಜಿಲ್ಲೆಗಳ ಮೂಲಕ ಸಂಚರಿಸಲಿದ್ದು, ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳ ಕಾಲ ಸೇವೆ ಲಭ್ಯವಿರಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow