ಶ್ರಮಜೀವಿ ವಿಜಯ್ ಸೇತುಪತಿ ಆರಂಭಿಕ ಜೀವನ ಹೇಗಿತ್ತು!? ಸಿನಿಮಾದಲ್ಲಿ ಯಶಸ್ಸು ಕಂಡಿದ್ದೇಗೆ!?

ಸಿನಿಮಾದಲ್ಲಿ ಏನಾದರೂ ಸಾಧಿಸಬೇಕು ಅಂತ ಬಂದು, ಆರಂಭದಲ್ಲಿ ಕಷ್ಟದ ಜೀವನ ಮಾಡಿ ನಂತರ ಯಶಸ್ಸು ಕಂಡವರು ವಿಜಯ್ ಸೇತುಪತಿ. ಆರಂಭದಲ್ಲಿ ಪುದುಪೇಟೈ, ಎಂ.ಕುಮಾರನ್ ಸನ್ ಆಫ್ ಮಹಾಲಕ್ಷ್ಮಿ ಹೀಗೆ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ವಿಜಯ್ ಸೇತುಪತಿಗೆ ದೊಡ್ಡ ಬ್ರೇಕ್ ಸಿಕ್ಕಿದ್ದು 'ತೆನ್ಮೇರ್ಕು ಪರುವಕ್ಕಾಟ್ರು' ಚಿತ್ರದಿಂದ. ಸೀನು ರಾಮಸಾಮಿ ನಿರ್ದೇಶನದ ಈ ಚಿತ್ರದ ಮೂಲಕ ನಾಯಕ ನಟನಾಗಿ ಪರಿಚಿತರಾದರು. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು.
ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್‍ಗೆ ಖಳನಾಯಕನಾಗಿ ವಿಜಯ್ ಸೇತುಪತಿ ನಟಿಸಿದ 'ಜವಾನ್' ಚಿತ್ರ ಬಾಕ್ಸ್ ಆಫೀಸ್‍ನಲ್ಲಿ 1000 ಕೋಟಿಗೂ ಹೆಚ್ಚು ಗಳಿಸಿ ಸೂಪರ್ ಹಿಟ್ ಆಯಿತು. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ವಿಜಯ್ ಸೇತುಪತಿ ಇತ್ತೀಚೆಗೆ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾಗಿಯೂ ಕಾಣಿಸಿಕೊಂಡರು. ಕಮಲ್ ಹಾಸನ್ 7 ಸೀಸನ್‍ಗಳನ್ನು ನಿರೂಪಿಸಿದ್ದರೆ, 8ನೇ ಸೀಸನ್‍ನಲ್ಲಿ ವಿಜಯ್ ಸೇತುಪತಿ ನಿರೂಪಕರಾಗಿ ಬಂದಿದ್ದರು.
ಸಿನಿಮಾ ರಂಗಕ್ಕೆ ಬರುವುದಕ್ಕೂ ಮೊದಲು ವಿಜಯ್ ಕಷ್ಟದ ಜೀವನ ನಡೆಸಿದ್ದರು. ಈಗ ಅವರಿಗೆ ಯಶಸ್ಸು ಸಿಕ್ಕ ಬಳಿಕವೂ ಸಿಂಪಲ್ ಜೀವನ ನಡೆಸುತ್ತಾ ಇದ್ದಾರೆ.
ವಿಜಯ್ ಸೇತುಪತಿ ಅವರು ದುಬೈನಲ್ಲಿ ಅಕೌಂಟಂಟ್ ಆಗಿದ್ದರು. ನಂತರ ಥಿಯೇಟರ್ ಕಂಪನಿ ಒಂದಕ್ಕೆ ಅಕೌಂಟಂಟ್ ಆಗಿ ಸೇರಿಕೊಂಡರು. ‘ಅಕೌಂಟಂಟ್ ಆಗಿ ಕೆಲಸ ಮಾಡುವುದರಿಂದ ನಾನು ಪ್ರತಿದಿನ ನಟರನ್ನು ನೋಡಬಹುದು, ಅವರೊಂದಿಗೆ ಇರಬಹುದು, ಅವರೊಂದಿಗೆ ಮಾತನಾಡಬಹುದು ಮತ್ತು ನಟನೆಯ ಕಲೆಯನ್ನು ಅರ್ಥಮಾಡಿಕೊಳ್ಳಬಹುದು ಎಂದು ನಾನು ಭಾವಿಸಿದೆ. ಪ್ರತಿ ಕ್ಷಣ, ಊಟದ ಸಮಯವೂ ನನಗೆ ಕಲಿಕೆಯ ಅನುಭವವಾಗಿತ್ತು. ನಟರ ಸುತ್ತಲೂ ಇರುವುದು ನಿರಂತರ ತರಗತಿಗೆ ಹಾಜರಾದಂತೆ’ ಎಂದಿದ್ದರು ಸೇತುಪತಿ.
ಜೂನಿಯರ್ ಆರ್ಟಿಸ್ಟ್‌ನಿಂದ ಹೀರೋ ತಮ್ಮ ಪ್ರಯಾಣವನ್ನು ಅವರು ನೆನಪಿಸಿಕೊಂಡಿದ್ದರು. ಅವರು ಒಮ್ಮೆ ಹಣಕ್ಕಾಗಿ ಹೆಚ್ಚು ಹೊತ್ತು ಕೆಲಸ ಮಾಡಿದ ಜಾಗದಲ್ಲೇ ತಮ್ಮ ಮೊದಲ ಚಿತ್ರದ ದೃಶ್ಯವನ್ನು ಶೂಟ್ ಮಾಡಿದ್ದರಂತೆ. ‘ಇದೊಂದು ವೃತ್ತ. ಆದರೆ, ಈ ವೃತ್ತ ಈ ರೀತಿ ಪೂರ್ಣಗೊಳ್ಳುತ್ತದೆ ಎಂದುಕೊಂಡಿರಲಿಲ್ಲ. ಈ ರೀತಿಯ ಅನೇಕ ವೃತ್ತಗಳಿವೆ’ ಎಂದಿದ್ದಾರೆ.
2013ರಲ್ಲಿ ಬಂದ ‘ಪಿಜ್ಜಾ’ ಸಿನಿಮಾ ಮೂಲಕ ಹಿರೋ ಆದರು ವಿಜಯ್ ಸೇತುಪತಿ. ಈ ಚಿತ್ರವನ್ನು ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಅಂದಿನ ಕಾಲಕ್ಕೆ ದೊಡ್ಡ ಮಟ್ಟದ ಹಿಟ್ ಆಯಿತು.
‘ನಾನು ಸಿನಿಮಾ ಶೂಟ್ ಮಾಡಲು ಹೋದಾಗ ಏನಾದರೂ ವಿಶೇಷ ದೃಶ್ಯ ಇದ್ದರೆ, ಆಸಕ್ತಿಕರ ದೃಶ್ಯ ಇದ್ದರೆ ಅದನ್ನು ಮಕ್ಕಳ ಜೊತೆ ಹಂಚಿಕೊಳ್ಳುತ್ತೇನೆ’ ಎಂದಿದ್ದಾರೆ. ನಾನು ತಂದೆಯಾಗಿ ಈ ವಿಚಾರವನ್ನು ಪ್ರೆಸೆಂಟ್ ಮಾಡುವುದಿಲ್ಲ, ನಾನು ಕೂಡ ಮಗು ಆಗುತ್ತೇನೆ’ ಎಂದಿದ್ದಾರೆ
ನಿಮ್ಮ ಪ್ರತಿಕ್ರಿಯೆ ಏನು?






