BBK11: ಬಿಗ್ ಬಾಸ್ ಮನೆಯಿಂದ ಹೊರ ಬಂದ ಎರಡನೇ ಸ್ಪರ್ಧಿ ಇವರೇ..! ಮನೆಮಂದಿಗೆ ಶಾಕ್

ಬಿಗ್ ಬಾಸ್ ಸೀಸನ್ 11 ಫಿನಾಲೆಗೆ ಇನ್ನು ಒಂದೇ ವಾರ ಬಾಕಿ ಇರುವಂತೆ ನಾಮಿನೇಷನ್ ಟೆನ್ಷನ್ ಹೊಸ ಟ್ವಿಸ್ಟ್ ಕೊಟ್ಟಿದೆ. ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳಲ್ಲಿ ಇದೀಗ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ಉಳಿದಿರೋದು ಸ್ಪರ್ಧಿಗಳು ಮಾತ್ರ. ಈ ವಾರದ ಟಾಸ್ಕ್ನಲ್ಲಿ ಅಂತಿಮವಾಗಿ ಗೌತಮಿ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದು, ಮಂಜು, ರಜತ್, ಭವ್ಯಾ ಹಾಗೂ ಧನರಾಜ್ ಅವರು ಬಚಾವ್ ಆಗಿದ್ದಾರೆ.
ಇದೀಗ ಶನಿವಾರದ ಎಪಿಸೋಡ್ನಲ್ಲಿ ಒಬ್ಬರು ಮತ್ತು ಭಾನುವಾರದ ಎಪಿಸೋಡ್ನಲ್ಲಿ ಒಬ್ಬರು ಮನೆಯಿಂದ ಆಚೆ ಬಂದಿದ್ದಾರೆ. ಶನಿವಾರ ಗೌತಮಿ ಜಾಧವ್ ಎಲಿಮಿನೇಟ್ ಆಗಿದ್ದಾರೆ. ಭಾನುವಾರ ಧನರಾಜ್ ಆಚಾರ್ ಹೊರಬಂದಿದ್ದಾರೆ ಎನ್ನಲಾಗಿದೆ. ಹನುಮಂತನ ವೈಲ್ಡ್ ಕಾರ್ಡ್ ಎಂಟ್ರಿ ಬಳಿಕ ಸ್ಟ್ರಾಂಗ್ ಕಂಟೆಸ್ಟಂಟ್ ಆಗಿ ಬದಲಾಗಿದ್ದ ಧನರಾಜ್ ಆಚಾರ್ ಇದೀಗ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.
ಫಿನಾಲೆ ವೀಕ್ಗೆ ಒಂದು ಹೆಜ್ಜೆ ಬಾಕಿ ಇರುವಾಗಲೇ ಎಡವಿದ್ದು ನೆಗೆಟಿವ್ ಪಾಯಿಂಟ್ ಆಗಿರಬಹುದು ಎಂಬುದು ವೀಕ್ಷಕರ ಅಭಿಪ್ರಾಯ. ಕಳೆದ ವಾರ ಟಾಸ್ಕ್ನಲ್ಲಿ ಧನರಾಜ್ ಆಚಾರ್ ಮಾಡಿಕೊಂಡ ಸಣ್ಣ ಎಡವಟ್ಟು ಇಂದು ಅವರ ಎಲಿಮಿನೇಷನ್ಗೆ ಕಾರಣವಾಗಿರಬಹುದು ಎಂಬುದು ಬಿಗ್ ಬಾಸ್ ವೀಕ್ಷಕರ ಮಾತಾಗಿದೆ. ಧನರಾಜ್ ಆಚಾರ್ ಎಲಿಮಿನೇಟ್ ಆದ ಬೆನ್ನಲ್ಲೇ ಅವರ ಸಂಭಾವನೆ ಬಗ್ಗೆಯೂ ಚರ್ಚೆ ಶುರುವಾಗಿದೆ. ಯೂಟ್ಯೂಬರ್ ಹಾಗೂ ಕಾಮಿಡಿಯನ್ ಧನರಾಜ್ ಬಿಗ್ ಬಾಸ್ ಕನ್ನಡ ಸೀಸನ್11 ರಲ್ಲಿ ಅತಿ ಕಡಿಮೆ ಸಂಭಾವನೆ ಪಡೆದ ಸ್ಪರ್ಧಿ ಎನ್ನಲಾಗ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






