Pavithra Gowda: ದರ್ಶನ್ ಹೆಸರಲ್ಲಿ ವಿಶೇಷ ಪೂಜೆ ಮಾಡಿಸಿದ ನಟಿ ಪವಿತ್ರಾ ಗೌಡ!

ಬೆಂಗಳೂರು: ನಟಿ ಪವಿತ್ರಾ ಗೌಡ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಎ1 ಆರೋಪಿ ಆಗಿದ್ದಾರೆ. ಅವರಿಗೆ ಇತ್ತೀಚೆಗೆ ಕೋರ್ಟ್ ಜಾಮೀನು ನೀಡಿದೆ. ಜಾಮೀನು ಸಿಕ್ಕ ಮೂರು ದಿನಗಳ ಬಳಿಕ ಅವರು ಜೈಲಿನಿಂದ ಹೊರ ಬಂದಿದ್ದಾರೆ. ಈ ಬೆನ್ನಲ್ಲೇ ತಲಘಟ್ಟಪುಪುರದ ವಜ್ರ ಮುನೇಶ್ವರ ದೇವಸ್ಥಾನಕ್ಕೆ ತಾಯಿ ಜೊತೆ ನಟಿ ಭೇಟಿ ನೀಡಿದ್ದಾರೆ. ಈ ವೇಳೆ, ದರ್ಶನ್ ಹೆಸರಲ್ಲಿ ಪವಿತ್ರಾ ತಾಯಿ ಅರ್ಚನೆ ಮಾಡಿಸಿದ್ದಾರೆ.
6 ತಿಂಗಳ ಬಳಿಕ ಜೈಲಿನಿಂದ ರಿಲೀಸ್ ಆಗ್ತಿದ್ದಂತೆ ಮನೆ ದೇವರ ಸನ್ನಿಧಿಗೆ ಪವಿತ್ರಾ ಕುಟುಂಬ ಭೇಟಿ ನೀಡಿದೆ. ಪೂಜೆ ಸಲ್ಲಿಸುವ ವೇಳೆ ಪವಿತ್ರಾರ ಸನ್ನೆ ಬಳಿಕ ದರ್ಶನ್ ಹೆಸರಲ್ಲಿ ತಾಯಿ ಭಾಗ್ಯ ಅರ್ಚನೆ ಮಾಡಿಸಿದ್ದಾರೆ. ಈ ವೇಳೆ, ದೇಗುಲದಲ್ಲಿ ನಟಿ ಕಣ್ಣೀರಿಟ್ಟಿದ್ದಾರೆ. ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಇದೀಗ ಆರ್ಆರ್ ನಗರದ ನಿವಾಸದತ್ತ ಪವಿತ್ರಾ ಕುಟುಂಬ ತೆರಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






