Rajath- Vinay: ವಿನಯ್ ಹಾಗೂ ರಜತ್ ಸ್ನೇಹ ಹಾಳಾಯ್ತಾ? ಅವನು ಏನು ಚಿಕ್ಕ ಹುಡುಗ ಅಲ್ಲ ಎಂದ ಬುಜ್ಜಿ!

ಎಪ್ರಿಲ್ 12, 2025 - 17:59
ಎಪ್ರಿಲ್ 12, 2025 - 18:00
 0  20
Rajath- Vinay: ವಿನಯ್ ಹಾಗೂ ರಜತ್ ಸ್ನೇಹ ಹಾಳಾಯ್ತಾ? ಅವನು ಏನು ಚಿಕ್ಕ ಹುಡುಗ ಅಲ್ಲ ಎಂದ ಬುಜ್ಜಿ!

ಇನ್​ಸ್ಟಾಗ್ರಾಮ್​ನಲ್ಲಿ ರಜತ್​ ಕಿಶನ್​ ಮಚ್ಚು ಹಿಡಿದುಕೊಂಡು ರೀಲ್ಸ್​ ಮಾಡಿ ಪೋಸ್ಟ್​ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಗೌಡ ಹಾಗೂ ರಜತ್​ ಕಿಶನ್​ನನ್ನು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

ವಿನಯ್ ಹಾಗೂ ರಜತ್ ಬಹಳ ಹಳೆಯ ಗೆಳೆಯರು. ರಜತ್, ಬಿಗ್​ಬಾಸ್ ಮನೆಯಲ್ಲಿದ್ದಾಗ ಅವರನ್ನು ಕಾಣಲು ವಿನಯ್ ಸಹ ಬಿಗ್​ಬಾಸ್ ಗೆ ಬಂದಿದ್ದರು. ವಿನಯ್, ಬಿಗ್​ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ, ರಜತ್, ಬಿಗ್​ಬಾಸ್ 11ರ ಸ್ಪರ್ಧಿಯಾಗಿದ್ದರು. ಇಬ್ಬರೂ ಸಹ ಫಿನಾಲೆ ವರೆಗೆ ಬಂದಿದ್ದರು ಆದರೆ ವಿಜೇತರಾಗಲಿಲ್ಲ.

ಆದ್ರೆ ಇದೀಗ ರಜತ್ ಹಾಗೂ ವಿನಯ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಮಾಹಿತಿ ಹೊರ ಬಂದಿದೆ.

ಹೌದು ರೀಲ್ಸ್ ವಿವಾದದ ಬಗ್ಗೆ ಮಾತನಾಡಿದ ರಜತ್‌, ನಮಗೆ ಅವತ್ತು ಅಕ್ಷಯ್ ಸ್ಟೋಡಿಯೋ ಲ್ಲಿ ಕಾರ್ಯಕ್ರಮ ಇತ್ತು,ಕಾರ್ಯಕ್ರಮ ಮುಗಿದ ಮೇಲೆ ನಾನೇ ಮೊದಲಿಗೆ ರೀಲ್ಸ್ ಮಾಡೋಣ ಅಂದೆ,ವಿನಯ್ ಮತ್ತು ನಾನು ಒಟ್ಟಿಗೆ ರಿಲ್ಸ್ ಮಾಡಿದ್ವಿ,ಅದು ಇಷ್ಟು ದೊಡ್ಡ ವಿಚಾರ ಆಗುತ್ತೆ ಅಂತಾ ಗೊತ್ತಿರಲಿಲ್ಲ,ಅದು ಫೈಬರ್ ಮಚ್ಚು, ನಾವು ಆಸಲಿ ಮಚ್ಚು ಬಳಸಿ ರೀಲ್ಸ್ ಮಾಡಿಲ್ಲ,ಅವತ್ತು ನಾವು ಜನರಲ್ ಆಗಿ ರೀಲ್ಸ್ ಮಾಡಿದ್ದು ಅಷ್ಟೇ ಎಂದಿದ್ದಾರೆ ರಜತ್.

ಮಾತು ಮುಂದುವರೆಸಿ, ‘ನಂದು ವಿನಯ್ ದು ಹನ್ನೊಂದು ವರ್ಷದ ಫ್ರೆಂಡ್ಶಿಪ್,ರೀಲ್ಸ್ ಮಾಡಿ ವಿನಯ್ ಗೆ ತೊಂದರೆ ಮಾಡಬೇಕು ಅನ್ನೊದು ನಂಗೆ ಇರಲಿಲ್ಲ,ಮತ್ತೆ ಅವನು ಏನು ಚಿಕ್ಕ ಹುಡುಗ ಕೂಡ ಅಲ್ಲ,ಈಗ ನಾನೇ ಮಾಡಿಸಿದ್ದು, ರೀತಿಯಲ್ಲಿ ಮಾತಾಡ್ತಿದ್ದಾನೆ‌.

ನಾನು ಯಾರಿಗೂ ನನ್ನ ಜೊತೆಗೆ ರೀಲ್ಸ್ ಮಾಡಿ ಅಂತಾ ಒತ್ತಾಯ ಕೂಡ ಮಾಡಲ್ಲ,ಕಳೆದ ಒಂದು ವಾರದಿಂದ ನಾನು ನೋಡ್ತಾ ಇದೀನಿ, ಸೋಷಿಯಲ್ ಮೀಡಿಯಾದಲ್ಲಿ ರಜತ್ ಜೊತೆಗೆ ಫ್ರೆಡ್ಶಿಪ್ ಕಟ್ ಮಾಡು ಅಂತಾ ಕೆಲವರು ಮಸೇಜ್ ಮಾಡ್ತಾ ಇದಾರೆ ಅದಕೆ ವಿನಯ್ ಲೈಕ್ ಮಾಡ್ತ ಇದಾನೆ,ಅವನಿಗೆ ನನ್ನ ಫ್ರೆಂಡ್ ಶೀಪ್ ಬೇಡ ಅಂದ್ರೆ ನೇರವಾಗಿ ಹೇಳಿಬಿಡಲಿ’ ಎಂದಿದ್ದಾರೆ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow