ಜೋರಾಯ್ತು IPL ಪ್ಲೇ ಆಫ್ ಲೆಕ್ಕಾಚಾರ.. ಸೀಸನ್ 18 ರಲ್ಲಿ ಟ್ರೋಫಿ ಎತ್ತಿ ಹಿಡಿಯುತ್ತಾ RCB?

ಇಂಡಿಯನ್ ಪ್ರಿಮೀಯರ್ ಲೀಗ್ ಪ್ಲೇ ಆಫ್ ರೇಸ್ ಜೋರಾಗಿ ನಡೀತಿದೆ. ಅಂಕಪಟ್ಟಿಯಲ್ಲಿರುವ ಟಾಪ್-5 ಟೀಮ್ಗಳಲ್ಲಿ ಯಾರಿಗೆ ಯಾವ ಸ್ಥಾನ ಅನ್ನೋದು ಮಾತ್ರವೇ ಫೈನಲ್ ಆಗಬೇಕಿದೆ. 12ರ ಪೈಕಿ 8 ಮ್ಯಾಚ್ ಗೆದ್ದಿರುವ ಆರ್ಸಿಬಿಯ ಪ್ಲೇ ಆಫ್ ಸ್ಥಾನವೂ ಫಿಕ್ಸಾಗಿದೆ. ಆದ್ರೂ, ಕೊಲ್ಕತ್ತಾ ನೈಟ್ ರೈಡರ್ಸ್ ಎದುರಿನ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆತಂಕ ಹುಟ್ಟು ಹಾಕಿದೆ.,
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯದ ಓಟ, ಆಟಗಾರರ ಫಾರ್ಮ್ ಎಲ್ಲಾ ಸಾಲಿಡ್ ಆಗಿದೆ. ಹೀಗಾಗಿ ಆರ್ಸಿಬಿ ಕಪ್ ಗೆಲ್ಲೋ ಹಾಟ್ ಫೇವರಿಟ್ ಅನಿಸಿಕೊಂಡಿದೆ. ಆರ್ಸಿಬಿ ಆಟಗಾರರ ಆಟ ನೋಡಿದ ಅಭಿಮಾನಿಗಳ ಖುಷಿಗಂತೂ ಪಾರವೇ ಇಲ್ಲದಂತಾಗಿದೆ. ಆದ್ರೀಗ, ಕೊಲ್ಕತ್ತಾ ವಿರುದ್ಧದ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿರೋದು ಹೊಸ ಟೆನ್ಶನ್ ತಂದಿಟ್ಟಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಕೊಲ್ಕತ್ತಾ ಎದುರಿನ ಪಂದ್ಯ ಮಳೆಗಾಹುತಿಯಾಗಿದೆ. ಪಂದ್ಯ ರದ್ದಾಗಿ ಒಂದು ಪಾಯಿಂಟ್ ಸಿಕ್ಕು ಸದ್ಯ ಆರ್ಸಿಬಿ ಸೇಫ್ ಆಗಿದೆ. ಹಾಗಿದ್ರೂ, 2021ರ ಐಪಿಎಲ್ ಕರಾಳ ನೆನಪು ಅಭಿಮಾನಿಗಳನ್ನ ಕಾಡಲಾರಂಭಿಸಿದೆ.,
ಈ ಟೂರ್ನಿಯಲ್ಲಿ ಆರ್ಸಿಬಿ, ಸತತ 4 ಗೆಲುವುಗಳೊಂದಿಗೆ ಅದ್ಭುತ ಆರಂಭ ಪಡೆದಿತ್ತು. 7 ಪಂದ್ಯಗಳ ಪೈಕಿ 5ರಲ್ಲಿ ಗೆದ್ದಿದ್ದ ಆರ್ಸಿಬಿ, ಟೇಬಲ್ ಟಾಪರ್ ಆಗಿ ಮೆರೆದಾಡಿತ್ತು. ಆದ್ರೆ, ಹೆಮ್ಮಾರಿ ಕೋವಿಡ್ನಿಂದಾಗಿ ಟೂರ್ನಿ ಮುಂದೂಡಿಕೆಯಾಯ್ತು. ಆ ಬಳಿಕ ಟೂರ್ನಿ ಯುಎಇನಲ್ಲಿ ನಡೀತು. ಆದ್ರೆ, ಮೂಮೆಂಟಮ್ ಕಳೆದುಕೊಂಡ ಆರ್ಸಿಬಿ, ಲೀಗ್ ಹಂತದ 14 ಪಂದ್ಯಗಳ ಪೈಕಿ 9 ಪಂದ್ಯಗಳನ್ನ ಮಾತ್ರ ಗೆಲ್ತು.
ಇಷ್ಟೇ ಪಂದ್ಯಗಳನ್ನು ಗೆದ್ದಿದ್ದ ಚೆನ್ನೈ, ರನ್ರೇಟ್ ಆಧಾರದಲ್ಲಿ 2ನೇ ಸ್ಥಾನಕ್ಕೇರಿತು. 2ನೇ ಸ್ಥಾನದಲ್ಲಿದ್ದ ಆರ್ಸಿಬಿ, 3ನೇ ಸ್ಥಾನಕ್ಕೆ ಕುಸಿದಿತ್ತು. ಇದರೊಂದಿಗೆ ಮೊದಲ ಕ್ವಾಲಿಫೈಯರ್ನಲ್ಲಿ ಆಡುವ ಕನಸಿನಲ್ಲಿದ್ದ ಆರ್ಸಿಬಿ, ಎಲಿಮಿನೇಟರ್ನಲ್ಲಿ ಸೆಣಸಾಡಬೇಕಾಯ್ತು. ಬಳಿಕ ಎಲಿಮಿನೇಟರ್ನಲ್ಲೇ ಸೋಲುಂಡು ಆರ್ಸಿಬಿ ಹೊರಬಿದ್ದಿತ್ತು.
2021ರ ಐಪಿಎಲ್ನಲ್ಲಾದ ಘಟನೆ ಮತ್ತೆ ಮರುಕಳಿಸಿದ್ರೆ ಏನ್ ಗತಿ ಅನ್ನೋದು ಸದ್ಯ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






