RCB ಕಾಲ್ತುಳಿತಕ್ಕೆ ವಿರಾಟ್ ಕೊಹ್ಲಿನೇ ಕಾರಣನಾ!? CID ತನಿಖೆಯಿಂದ ಸ್ಫೋಟಕ ಮಾಹಿತಿ ಬಹಿರಂಗ

ಜುಲೈ 8, 2025 - 18:34
 0  5
RCB ಕಾಲ್ತುಳಿತಕ್ಕೆ ವಿರಾಟ್ ಕೊಹ್ಲಿನೇ ಕಾರಣನಾ!? CID ತನಿಖೆಯಿಂದ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆ ವೇಳೆ ಜೂನ್ 4ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಸಂಭವಿಸಿದ ಕಾಲ್ತುಳಿತದ ಪ್ರಕರಣದ ಕುರಿತು ಸಿಐಡಿ ನಡೆಸಿದ ತನಿಖೆಯಲ್ಲಿ ಹಲವು ಪ್ರಮುಖ ಅಂಶಗಳು ಹೊರಬಿದ್ದಿವೆ. ವರದಿಯ ಪ್ರಕಾರ, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯ ಭಾಗಿqhತೆಯ ಹಿನ್ನೆಲೆ ಕಾರ್ಯಕ್ರಮವನ್ನು ತುರ್ತುವಾಗಿ ಆಯೋಜಿಸಿದ್ದೇ ಅಘಾತಕಾರಿ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಸಿಐಡಿಯ ಪ್ರಾಥಮಿಕ ತನಿಖಾ ವರದಿಯಂತೆ, ಆರ್ಸಿಬಿಯ ಸಿಇಓ ರಾಜೇಶ್ ಮೆನನ್ ಹಾಗೂ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಅವರು ಕಾರ್ಯಕ್ರಮವನ್ನು ತುರ್ತಾಗಿ ಜೂನ್ 4ರಂದು ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯ (KSCA) ಮೇಲೆ ಒತ್ತಡ ಹೇರಿದ್ದರು. ಸೋಸಲೆ ಅವರುಕಾರ್ಯಕ್ರಮ ತಡಮಾಡಿದರೆ ವಿರಾಟ್ ಕೊಹ್ಲಿ ಬರಲ್ಲ. ಅವರು ಬ್ರಿಟನ್ಗೆ ಪ್ರಯಾಣಿಸುತ್ತಿದ್ದಾರೆಎಂದು ಉಲ್ಲೇಖಿಸಿ ಒತ್ತಡ ಹೆಚ್ಚಿಸಿದ್ದರು ಎಂಬ ಮಾಹಿತಿಯನ್ನು ಸಿಐಡಿ ಕಲೆಹಾಕಿದೆ.

ನಡುವೆ, ಕರ್ನಾಟಕ ಪೊಲೀಸ್ ಇಲಾಖೆ ಹಾಗೂ ಕೆಎಸ್ಸಿಎ ಮುಂದೂಡಿಕೆ ಸಲಹೆ ನೀಡಿದ್ದರೂ ಅದನ್ನು ಮೀರಿಸಿ ತಕ್ಷಣ ಕಾರ್ಯಕ್ರಮ ನಡೆಸಲಾಗಿದೆ. ಇದು ನಿರ್ವಹಣಾ ವೈಫಲ್ಯಕ್ಕೆ ದಾರಿ ಮಾಡಿಕೊಟ್ಟಿತು ಎಂದು ತನಿಖಾ ವರದಿ ಸೂಚಿಸುತ್ತದೆ. ಉಚಿತ ಪ್ರವೇಶ ಟಿಕೆಟ್ ಘೋಷಣೆಯು ಜನಪ್ರವಾಹಕ್ಕೆ ಕಾರಣವಾಗಿದ್ದು, ಅದನ್ನು ನಿರ್ವಹಿಸಲು ಬೇಕಾದ ಪೊಲೀಸ್ ಬಂದೋಬಸ್ತ್ ಸಮರ್ಪಕವಾಗಿರಲಿಲ್ಲ ಎನ್ನಲಾಗಿದೆ.

ಸಿಐಡಿ ಪರಿಶೀಲನೆಯು ಸಾವಿರಾರು ಸಿಸಿಟಿವಿ ದೃಶ್ಯಗಳು, ವಿಡಿಯೋ ಕ್ಲಿಪ್ಗಳು ಮತ್ತು ಬಂಧಿತ ವ್ಯಕ್ತಿಗಳ ಮಾಹಿತಿ ಆಧಾರವಾಗಿ ನಡೆದಿದ್ದು, ವರದಿಯಲ್ಲಿ ಕೆಳಗಿನ ಪ್ರಮುಖ ಅಂಶಗಳು ದಾಖಲಾಗಿವೆ:

ಉಚಿತ ಟಿಕೆಟ್ ಘೋಷಣೆ ಜನರ ಗೊಂದಲಕ್ಕೆ ಕಾರಣವಾಯಿತು.

ಕಾಲ್ತುಳಿತದ ಸಮಯದಲ್ಲಿ ಗೇಟ್ಗಳ ಬಳಿ ಪೊಲೀಸರು ಇರಲಿಲ್ಲ.

ಪೊಲೀಸ್ ಬಂದೋಬಸ್ತ್ ಹಾಗೂ Role Call ವ್ಯವಸ್ಥೆಯಿಲ್ಲದಿದ್ದವು.

ವಿಧಾನಸೌದದ ಕಾರ್ಯಕ್ರಮದ ಭದ್ರತೆಗಾಗಿ ಹೆಚ್ಚಿನ ಪಡೆ ನಿಯೋಜನೆ ಮಾಡಲಾಗಿತ್ತು.

ಕೆಎಸ್ಆರ್ಪಿ ಸಿಬ್ಬಂದಿಗೆ ಸೂಕ್ತ ಮಾಹಿತಿ ನೀಡಲಾಗಿರಲಿಲ್ಲ.

 ಐಪಿಎಲ್ ಪಂದ್ಯಗಳಿಗೆ ಇರುತ್ತದೆಂಬ ರೀತಿಯ ಬಂದೋಬಸ್ತ್ ನೀಡಲಾಗಿತ್ತು, ಆದರೆ ಉಚಿತ ಪ್ರವೇಶದ ಘೋಷಣೆಯಿಂದ ಜನಸಂದಣಿ ಅತಿಯಾದ ಮಟ್ಟಕ್ಕೆ ತಲುಪಿತ್ತು.

ತನಿಖಾ ವರದಿಯು ನ್ಯಾಯಾಲಯದ ವಿಚಾರಣೆಯ ದಿಕ್ಕನ್ನು ತಿರುವು ಮಾಡಬಹುದಾದಷ್ಟು ಗಂಭೀರ ಅಂಶಗಳನ್ನು ಒಳಗೊಂಡಿದೆ. ಕಾರ್ಯಕ್ರಮದ ತುರ್ತು ನಿರ್ಧಾರಗಳು, ಭದ್ರತಾ ವ್ಯೂಹದ ವ್ಯತಿರಿಕ್ತತೆಗಳು ಹಾಗೂ ನಿರ್ವಹಣಾ ದೋಷಗಳು ಒಂದು ದುರ್ಘಟನೆಯನ್ನು ರೂಪಿಸಿಕೊಂಡ ರೀತಿಯಲ್ಲಿವೆ. ಈಗ ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳು ಹೇಗಿರುತ್ತವೆ ಎಂಬುದರ ಕಡೆಗೆ ಸಾರ್ವಜನಿಕರ ಕಣ್ಣುಗಳು ನೆಟ್ಟಿವೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow