LET ಉಗ್ರ ಟಿ. ನಾಸೀರ್’ಗೆ ಬೆಂಬಲ: ಮೂವರು ಶಂಕಿತ ಉಗ್ರರು ಬಂಧನ! ಜೈಲಿನ ವೈದ್ಯ ಮತ್ತು ASIಗೆ NIA ಶಾಕ್
ಬೆಂಗಳೂರು: ಎಲ್ಇಟಿ ಭಯೋತ್ಪಾದಕ ಟಿ. ನಾಸೀರ್ಗೆ ಬೆಂಬಲ ನೀಡಿದ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಮೂರವರು ಶಂಕಿತ ಉಗ್ರರನ್ನು ಮಂಗಳವಾರ ಬಂಧಿಸಿದ್ದಾರೆ. ಬೆಂಗಳೂರು ಮತ್ತು ಕೋಲಾರದಲ್ಲಿ ಒಂದೇಸಮಯದಲ್ಲಿ ಐದು ಸ್ಥಳಗಳಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಭಾರಿ ಪ್ರಮಾಣದ ಮಾಹಿತಿ ಪಡೆಯಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ 4–5 ವರ್ಷಗಳಿಂದ ಮನೋವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ವೈದ್ಯ ನಾಗರಾಜ್, ಇದೀಗ ಜೈಲಿನೊಳಗೆ ಮೊಬೈಲ್ ಫೋನ್ಗಳ ಕಳ್ಳ ಸಾಗಣೆ ನಡೆಸುತ್ತಿದ್ದ ಆರೋಪ ಕೇಳಿ ಬಂದಿದೆ. ತನಿಖೆಯಲ್ಲಿ ತನ್ನ ಸಹಾಯಕಿ ಪವಿತ್ರಾ ಮೂಲಕ ಉಗ್ರ ಟಿ. ನಾಸೀರ್ ಸೇರಿದಂತೆ ಹಲವು ಕೈದಿಗಳಿಗೆ ಮೊಬೈಲ್ಗಳನ್ನು ಪೂರೈಸುತ್ತಿದ್ದ ಮಾಹಿತಿ ಬಹಿರಂಗವಾಗಿದೆ.
ಆತನ ಮೊಬೈಲ್ ವಹಿವಾಟು ಕ್ರಮವೇ ಬಹಳ ಗಂಭೀರವಾಗಿದ್ದು, ₹10,000 ಮೊಬೈಲ್ಗಳನ್ನು ₹50,000 ರೂಪಾಯಿಗೆ ಮಾರಾಟ ಮಾಡುತ್ತಿದ್ದನೆಂಬ ಮಾಹಿತಿ NIA ಅಧಿಕಾರಿಗಳ ತನಿಖೆಯಲ್ಲಿ ದೃಢವಾಗಿದೆ. ಈ ಮೊಬೈಲ್ಗಳು ಉಗ್ರರು, ಡ್ರಗ್ ಪೆಡ್ಲರ್ಗಳು ಮತ್ತು ರೌಡಿಶೀಟರ್ಗಳ ಬಳಿಗೆ ಪೂರೈಕೆ ಆಗಿದ್ದವು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈಲಿನ ASI ಚಾನ್ ಪಾಷಾ ಕೂಡಾ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾಗಿದೆ. 2022ರಲ್ಲಿಯೇ ಟಿ. ನಾಸೀರ್ ಪರ ಕೆಲಸ ಮಾಡುತ್ತಿದ್ದ ಆರೋಪ ಪಾಷಾ ಮೇಲೆ ಇದ್ದು, ನಾಸೀರ್ನ್ನು ಯಾವ್ಯಾವ ಕೋರ್ಟ್ಗೆ ಕರೆದೊಯ್ಯಲಾಗುತ್ತಿದೆ ಎಂಬ ಮಾಹಿತಿಯನ್ನು ಭಯೋತ್ಪಾದಕ ಸಂಘಟನೆಗೆ ರವಾನೆ ಮಾಡುತ್ತಿದ್ದನೆಂಬ ಮಾಹಿತಿ ಕೂಡಾ ಲಭ್ಯವಾಗಿದೆ.
ಇದೇ ಅಲ್ಲ, ಭದ್ರಪ್ಪ ಲೇಔಟ್ ಹಾಗೂ ಸುಲ್ತಾನ್ ಪಾಳ್ಯ ಪ್ರದೇಶದಲ್ಲಿ ಶಂಕಿತ ಉಗ್ರ ಸಲ್ಮಾನ್ ಮನೆ ಮೇಲೆ ನಡೆದ ಸಿಸಿಬಿ ದಾಳಿಯ ವೇಳೆ, ಸಲ್ಮಾನ್ ಪರಾರಿಯಾಗಲು ಸಹಾಯ ಮಾಡಿದ ವ್ಯಕ್ತಿಯೂ ASI ಚಾನ್ ಪಾಷಾ ಆಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಗ್ರೆನೇಡ್ ಕೇಸ್ ಸಂಬಂಧಿತ ಸಲ್ಮಾನ್ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ, ಪಾಷಾ ಮತ್ತು ನಾಗರಾಜ್ ಇಬ್ಬರನ್ನೂ NIA ಬಂಧಿಸಿದ್ದು, ಈ ಪ್ರಕರಣದಲ್ಲಿ ಮತ್ತಷ್ಟು ಭೀಕರ ಸತ್ಯಗಳು ಬಯಲಾಗುವ ನಿರೀಕ್ಷೆಯಿದೆ.
ನಿಮ್ಮ ಪ್ರತಿಕ್ರಿಯೆ ಏನು?