ಭೀಕರ ಕಾರು ಅಪಘಾತ: ಬಹುಭಾಷಾ ನಟ ಶೈನ್ ಟಾಮ್ ಚಾಕೊ ತಂದೆ ವಿಧಿವಶ!

ಕೊಯಮತ್ತೂರು:- ಭೀಕರ ಕಾರು ಭೀಕರ ಅಪಘಾತದಲ್ಲಿ ಬಹುಭಾಷಾ ನಟ ಶೈನ್ ಟಾಮ್ ಚಾಕೊ ತಂದೆ ವಿಧಿವಶರಾಗಿದ್ದಾರೆ.
ಕೇರಳ ರಾಜ್ಯದ ತ್ರಿಶೂರ್‌ನ 41 ವರ್ಷದ ನಟ ಶೈನ್ ಟಾಮ್ ಚಾಕೊ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆ ಕೂಡಲೇ ನಟ ಶೈನ್ ಟಾಮ್ ಚಾಕೊ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಇದೇ ಅಪಘಾತದಲ್ಲಿ ನಟನ ತಂದೆ ನಿಧನರಾಗಿದ್ದಾರೆ.
ನಟ ಶೈನ್ ತಮ್ಮ ಕುಟುಂಬಸ್ಥರ ಜೊತೆಗೆ ತಂದೆಯ ವೈದ್ಯಕೀಯ ತಪಾಸಣೆಗಾಗಿ ಕಾರಿನಲ್ಲಿ ತ್ರಿಶೂರ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಆದ್ರೆ ಇದೇ ವೇಳೆ ಧರ್ಮಪುರಿ ಜಿಲ್ಲೆಯ ಪಾಲಕೋಡ್‌ನ ಪರೈಯೂರ್ ಬಳಿ ಚಾಲಕ ಅನಿಸ್ (42) ಅವರ ನಿಯಂತ್ರಣ ತಪ್ಪಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಸದ್ಯ ಧರ್ಮಪುರಿ ಸರ್ಕಾರಿ ಆಸ್ಪತ್ರೆಯಲ್ಲಿ ಶೈನ್ ಟಾಮ್ ಚಾಲೋ ಹಾಗೂ ತಾಯಿಗೆ ಚಿಕಿತ್ಸೆ ಮುಂದುವರೆದಿದೆ.
ನಿಮ್ಮ ಪ್ರತಿಕ್ರಿಯೆ ಏನು?






