Dhruva Sarja: ಕೆಜಿಎಫ್ ಖ್ಯಾತಿಯ ಹರೀಶ್ ರಾಯ್ ಸಹಾಯಕ್ಕೆ ನಿಂತ ಧ್ರುವ ಸರ್ಜಾ!

ಆಗಸ್ಟ್ 29, 2025 - 18:00
 0  15
Dhruva Sarja: ಕೆಜಿಎಫ್ ಖ್ಯಾತಿಯ ಹರೀಶ್ ರಾಯ್ ಸಹಾಯಕ್ಕೆ ನಿಂತ ಧ್ರುವ ಸರ್ಜಾ!
‘ಕೆಜಿಎಫ್’ ಸಿನಿಮಾದಲ್ಲಿ ಚಾಚಾ ಹೆಸರಿನ ಪಾತ್ರ ಮಾಡಿದ್ದ ಹರೀಶ್ ರಾಯ್ ಈಗ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಅವರು ಎಲ್ಲರ ಸಹಾಯ ಕೇಳುತ್ತಿದ್ದಾರೆ. ಈ ವಿಡಿಯೋ ವೈರಲ್ ಆ ಬೆನ್ನಲ್ಲೇ ನಟ ಧ್ರುವ ಸರ್ಜಾ (Dhruva Sarja) ನಟ ಹರೀಶ್ ರಾಯ್ ಸಹಾಯಕ್ಕೆ ನಿಂತಿದ್ದಾರೆ. ಹರೀಶ್ ರಾಯ್ ಅವರಿಗೆ ಫೋನ್ ಮಾಡಿ ಸಹಾಯ ಹಸ್ತಚಾಚಿದ್ದಾರೆ. ಅದನ್ನ ಸ್ವತಃ ಹರೀಶ್ ರಾಯ್ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

ನಮಗೆ ಒಬ್ಬ ಡಾಕ್ಟರ್ ಗೊತ್ತಿದ್ದಾರೆ. ಆ ಒಂದು ಆಸ್ಪತ್ರೆಗೆ ನೀವು ನಾಳೆ ಹೋಗಿ. ಅಲ್ಲಿ ಆಗುವ ಖರ್ಚಿನ ಬಗ್ಗೆ ಯೋಚನೆ ಮಾಡ್ಬೇಡಿ. ಅದನ್ನ ನಾನು ನೋಡಿಕೊಳ್ಳುತ್ತೇನೆ. ನೀವು ಮೊದಲು ಅಲ್ಲಿ ಹೋಗಿ ಅಂತಲೇ ಧ್ರುವ ಸರ್ಜಾ ಹೇಳಿದ್ದಾರೆ.

ಅದನ್ನ ಕೇಳಿದ ಹರೀಶ್ ರಾಯ್ ತುಂಬಾನೆ ಖುಷಿಪಟ್ಟಿದ್ದಾರೆ. ಹಾಗಲ್ಲ..ಈಗಾಗಲೇ ನನ್ನ ಟ್ರೀಟ್‌ಮೆಂಟ್ ಶುರು ಆಗಿದೆ. ಇನ್ನೇನು ಕೆಲವು ದಿನಗಳಲ್ಲಿ ಇಂಜೆಕ್ಷನ್ ತೆಗೆದುಕೊಳ್ಳೇಕಿದೆ ಅಂತಲೇ ಹೇಳ್ತಾರೆ.

ಓಕೆ ಹಾಗಾದ್ರೆ, ನೀವು ಯಾವ ಡಾಕ್ಟರ್ ಹತ್ತಿರ ತೋರಿಸ್ತಿದ್ದಿರೋ ಅಲ್ಲಿಯೇ ತೋರಿಸಿ, ಅದರದ್ದು ಏನಿದಿಯೋ ನಾನು ನೋಡಿಕೊಳ್ಳುತ್ತೇನೆ ಅಂತಲೇ ಹೇಳಿದ್ದಾರೆ. ಹಾಗೆ ಧ್ರುವ ಸರ್ಜಾ ಅವರ ಈ ಒಂದು ಸಹಾಯ ಹಸ್ತಚಾಚಿರೋದನ್ನ ಹರೀಶ್ ರಾಯ್ ವಿಡಿಯೋ ಮೂಲಕವೇ ಹೇಳಿಕೊಂಡಿದ್ದಾರೆ.

ಹರೀಶ್ ರಾಯ್ ತಮಗೆ ಸಹಾಯ ಹಸ್ತಚಾಚಿದ ನಟ ಧ್ರುವ ಸರ್ಜಾ ಅವರಿಗೆ ಧನ್ಯವಾದ ಹೇಳಿದ್ದಾರೆ. ಆದರೆ, ಈ ವಿಷಯವನ್ನ ಯಾರಿಗೂ ಹೇಳ್ಬೇಡಿ ಅಂತಲೇ ಧ್ರುವ ಸರ್ಜಾ ಹೇಳಿದ್ದರು. ಆದರೂ, ಈ ಒಂದು ಒಳ್ಳೆಯ ಕೆಲಸವನ್ನ ಎಲ್ಲರಿಗೂ ತಿಳಿಯಲಿ, ಅದನ್ನ ಯಾಕೆ ಗುಟ್ಟು ಮಾಡಿ ಇಟ್ಟುಕೊಳ್ಳುವುದು ಅಂತಲೇ ವಿಡಿಯೊ ಮಾಡಿದ್ದಾರೆ.

ಹರೀಶ್ ರಾಯ್ ಅವರಿಗೆ ನೀಡಬೇಕಾದ ಚಿಕಿತ್ಸೆ ದುಬಾರಿಯಾಗಿದ್ದು, ಒಂದೊಂದು ಇಂಜೆಕ್ಷನ್ ಬೆಲೆ ಮೂರುವರೆ ಲಕ್ಷ ರೂಪಾಯಿಗಳದ್ದು ಎಂದು ಹೇಳಿಕೊಂಡಿದ್ದರು. ಜೊತೆಗೆ ಹರೀಶ್ ರಾಯ್ ಅವರಿಗೆ ತುರ್ತಾಗಿ ಚಿಕಿತ್ಸೆ ಕೂಡಾ ಪ್ರಾರಂಭಿಸಬೇಕಿದೆ ಎಂದು ವೈದ್ಯರು ಸಲಹೆಯನ್ನ ನೀಡಿದ್ದಾರಂತೆ. ಹೀಗಾಗಿ ಚಿತ್ರರಂಗದವರ ನೆರವನ್ನ ಕೇಳಿದ್ದರು ಹರೀಶ್ ರಾಯ್

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow