Yogesh Gowda Murder Case: ವಿನಯ್ ಕುಲಕರ್ಣಿ CBI ವಶಕ್ಕೆ! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಲಾಯರ್

ಜೂನ್ 13, 2025 - 16:05
 0  9
Yogesh Gowda Murder Case: ವಿನಯ್ ಕುಲಕರ್ಣಿ CBI ವಶಕ್ಕೆ!  ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಲಾಯರ್

ಬೆಂಗಳೂರುಶಾಸಕ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೋರ್ಟ್ ಸೂಚನೆಯ ಮೇರೆಗೆ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವಿಚಾರಣೆ ಮುಗಿದ ಬಳಿಕ ಪರಪ್ಪನ ಅಗ್ರಹಾರಕ್ಕೆ ವಿನಯ್ ಕುಲಕರ್ಣಿ ಮರಳಲಿದ್ದಾರೆ.

ಒಂಬತ್ತು ವರ್ಷಗಳ ಹಿಂದೆ ಅಂದರೆ 2016ರಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರಿಗೆ ಜಾಮೀನು ರದ್ದಾಗಿದೆ.

  ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಶರಣಾಗಲು ಬಂದಿದ್ದರು. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಶರಣಾಗುತ್ತಿದ್ದಂತೆಯೇ ಸಿಬಿಐ ಅವರನ್ನು ವಶಕ್ಕೆ ಪಡೆದಿದೆ.

ಇನ್ನು ಬಗ್ಗೆ ಎಸ್ಪಿಪಿ ಗಂಗಾಧರ ಶೆಟ್ಟಿ ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ನಲ್ಲಿ ಅವರ ಜಾಮೀನು ಅರ್ಜಿ ವಜಾ ಆಗಿತ್ತು. ಒಂದು ವಾರದ ಒಳಗೆ ನ್ಯಾಯಲಯಕ್ಕೆ ಹಾಜರಾಗಲು ಆದೇಶ ನೀಡಲಾಗಿತ್ತು. ಇಂದು ನ್ಯಾಯಾಲಯಕ್ಕೆ ಹಾಜರಾದ ಮೇಲೆ ಅವರನ್ನ ಜೈಲಿಗೆ ಕಳಿಸಲಾಗಿದೆ. ಇತ್ತೀಚೆಗೆ ಹೈ ಕೋರ್ಟ್ ನಲ್ಲಿ ಚಂದ್ರಶೇಖರ ಎಂಬ ಆರೋಪಿ ಜಾಮೀನು ಅರ್ಜಿಯನ್ನೂ ಹೈ ಕೋರ್ಟ್ ವಜಾ ಮಾಡಿತ್ತು. ಇದು ಸಮಾಜಕ್ಕೆ ಒಂದು ಒಳ್ಳೆ ಸಂದೇಶ. ಯಾರೇ ಆಗಿದ್ರು ತಪ್ಪು ಮಾಡಿದ್ರೆ ಅಂತವರ ವಿರುದ್ಧ ಕ್ರಮ ಆಗುತ್ತೆ ಎಂದು ಹೇಳಿದರು.

.ನ್ಯಾಯಲಯದಲ್ಲಿಯೇ ಪ್ರತ್ಯಕ್ಷ, ಪರೋಕ್ಷವಾಗಿ ಸಾಕ್ಷಿಧಾರರಿಗೆ ಬೆದರಿಕೆ ಹಾಕುವ ಕೆಲಸಗಳು ಆಗುತ್ತಿದೆ. ಅಂತವರ ಬಗ್ಗೆ ನ್ಯಾಯಲಯ ಕ್ರಮ ಕೈಗೊಳ್ಳುತ್ತೆ. 9 ಆರೋಪಿ ಅಶ್ವಥ್ ಎಂಬಾತ ಮಹಿಳಾ ಸಾಕ್ಷಿಯೊಬ್ಬರಿಗೆ ಬೆದರಿಕೆ ಹಾಕಿದ್ದ. ಸಾಕ್ಷಿಧಾರರಿಗೆ ರಕ್ಷಣೆ ನೀಡಲು ಮನವಿ ಮಾಡಿದ್ವಿ. ಕೇಂದ್ರ ತನಿಖಾ ಸಂಸ್ಥೆಯಿಂದ ಮಹಿಳಾ ಸಾಕ್ಷಿಗೆ ರಕ್ಷಣೆ ಆದೇಶ ಆಗಿದೆ. ಅಶ್ವಥ್ ಜಾಮೀನು ರದ್ದು ಮಾಡಲು ಮನವಿ ಮಾಡಲಾಗಿದೆ ಎಂದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow