ಟೀಂ ಇಂಡಿಯಾದ ಮಾಜಿ ನಾಯಕನ ವಿರುದ್ಧ ಕೋಟಿ-ಕೋಟಿ ಅವ್ಯವಹಾರ ಆರೋಪ: ಇಡಿ ದಾಳಿ!

ಅಕ್ಟೋಬರ್ 8, 2024 - 16:03
 0  13
ಟೀಂ ಇಂಡಿಯಾದ ಮಾಜಿ ನಾಯಕನ ವಿರುದ್ಧ ಕೋಟಿ-ಕೋಟಿ ಅವ್ಯವಹಾರ ಆರೋಪ: ಇಡಿ ದಾಳಿ!

ಮಾಜಿ ಕ್ರಿಕೆಟಿಗನ ವಿರುದ್ಧ ಕೋಟ್ಯಾಂತರ ಅವ್ಯವಹಾರ ಆರೋಪ ಕೇಳಿ ಬಂದಿದ್ದು, ED ಅಧಿಕಾರಿಗಳು ಬಿಗ್ ಶಾಕ್ ಕೊಟ್ಟಿದ್ದಾರೆ. 

ಟೀಂ ಇಂಡಿಯಾದ ಮಾಜಿ ನಾಯಕ, ಕಾಂಗ್ರೆಸ್​ ಲೀಡರ್ ಮೊಹಮ್ಮದ್ ಅಜರುದ್ದೀನ್​​ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ಅಧಿಕಾರಿಗಳು ಸಮನ್ಸ್ ನೀಡಿರುವ ಹಿನ್ನೆಲೆಯಲ್ಲಿ ಇಂದು ಇ.ಡಿ ಕಚೇರಿಗೆ ವಿಚಾರಣೆಗೆ ಹಾಜರಾಗಲು ಹೋಗಿದ್ದರು.

ಈ ಹಿಂದೆ ಅಜರುದ್ದೀನ್ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್​ ಅಧ್ಯಕ್ಷರಾಗಿದ್ದರು. ಈ ವೇಳೆ ಉಪ್ಪಲ್ ಕ್ರೀಡಾಂಗಣಕ್ಕಾಗಿ  ಕ್ರಿಕೆಟ್ ಬಾಲ್ಸ್​, ಜಿಮ್ ಉಪಕರಣಗಳು, ಅಗ್ನಿಶಾಮಕ ಕಿಟ್‌ಗಳು ಮತ್ತು ಇತರೆ ಸಲಕರಣೆಗಳ ಖರೀದಿ ಮಾಡಲಾಗಿತ್ತು. 2020-23ರ ಅವಧಿಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.

ಈ ಸಂಬಂಧ ಉಪ್ಪಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನು ಆಧರಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow