ಜೀವನದಿ ಕಾವೇರಿ ತೀರ್ಥೋದ್ಭವ: ಬ್ರಹ್ಮಕುಂಡಿಕೆಯಲ್ಲಿ ಭಕ್ತರಿಗೆ ತೀರ್ಥರೂಪಿಣಿಯಾಗಿ ದರ್ಶನ!

ಅಕ್ಟೋಬರ್ 17, 2025 - 13:58
 0  18
 ಜೀವನದಿ ಕಾವೇರಿ ತೀರ್ಥೋದ್ಭವ: ಬ್ರಹ್ಮಕುಂಡಿಕೆಯಲ್ಲಿ ಭಕ್ತರಿಗೆ ತೀರ್ಥರೂಪಿಣಿಯಾಗಿ ದರ್ಶನ!

ಮಡಿಕೇರಿ: ಸಹಸ್ರಾರು ಭಕ್ತರ ಕಾತರದ ಕಾಯುವಿಕೆ ಕೊನೆಗೂ ಆ ಸಂಭ್ರಮದ ಕ್ಷಣದೊಂದಿಗೆ ಮುಕ್ತಾಯವಾಯಿತು. ಕೊಡಗು ಜಿಲ್ಲೆಯ ಮಡಿಕೇರಿಯ ಭಾಗಮಂಡಲದಲ್ಲಿ ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ಜೀವ ನದಿ ಕಾವೇರಿ ಇಂದು ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಸರಿಯಾಗಿ ತೀರ್ಥ ರೂಪಿಣಿಯಾಗಿ ಉಕ್ಕಿ ಹರಿದಳು.

ತೀರ್ಥೋದ್ಭವದ ವೇಳೆ ಭಕ್ತರ ಜಯಘೋಷ, ಅರ್ಚಕರ ವೇದ ಮಂತ್ರಘೋಷಗಳು ಮುಗಿಲುಮುಟ್ಟಿದವು. ತೀರ್ಥ ಉಕ್ಕುತ್ತಿದ್ದಂತೆಯೇ ಮೊದಲ ತೀರ್ಥಥವನ್ನು ಬ್ರಹ್ಮ ದೇವನಿಗೆ ಅರ್ಪಣೆ ಮಾಡಲಾಯಿತು. ಬಳಿಕ ಅರ್ಚಕ ವೃಂದಕ್ಕೆ ತೀರ್ಥ ಪ್ರೋಕ್ಷಣೆ ಮಾಡಲಾಯಿತು. ನಂತರ ಭಕ್ತವೃಂದ ತೀರ್ಥ‌ಸ್ನಾನಕ್ಕೆ ಕಲ್ಯಾಣಿಗೆ ಮುಗಿಬಿದ್ದಿತು.

9 ಮಂದಿ ಅರ್ಚಕರ ತಂಡದಿಂದ ಬೆಳಗ್ಗಿನಿಂದಲೇ ತಲಕಾವೇರಿಯಲ್ಲಿ ವಿಶೇಷ ಪೂಜಾ ಕೈಕಂರ್ಯಗಳು ನಡೆದವು. ಕಲ್ಯಾಣಿಯಲ್ಲಿ ತೀರ್ಥ ಸ್ನಾನ ಮಾಡಲು ಭಕ್ತರು ಮುಗಿಬಿದ್ರು. ಬಿಂದಿಗೆ, ಪಾತ್ರೆಗಳಲ್ಲಿ ಭಕ್ತಾಧಿಗಳು ತೀರ್ಥ ಸಂಗ್ರಹ ಮಾಡುತ್ತಿರುವುದು ಕಂಡು ಬಂತು. ಇನ್ನೂ ಒಂದು ತಿಂಗಳ ಕಾಲ ಭಾಗಮಂಡಲದಲ್ಲಿ ಕಾವೇರಿ ಜಾತ್ರೆ ನಡೆಯಲಿದ್ದು, ತಲಕಾವೇರಿಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow