ಉದಯ ಟಿವಿಯಲ್ಲಿ ಮತ್ತೆ ಬರುತ್ತಿದೆ ‘ಮಾಂಗಲ್ಯ’ ಧಾರಾವಾಹಿ..! ಈ ಬಾರಿ ಹೊಸ ಕಥೆ

ಆಗಸ್ಟ್ 30, 2025 - 18:36
 0  13
ಉದಯ ಟಿವಿಯಲ್ಲಿ ಮತ್ತೆ ಬರುತ್ತಿದೆ ‘ಮಾಂಗಲ್ಯ’ ಧಾರಾವಾಹಿ..! ಈ ಬಾರಿ ಹೊಸ ಕಥೆ

ಉದಯ ಟಿವಿ ಹೊಸ ಟ್ರೆಂಡ್ಗಳಿಗೆ ಅನುಗುಣವಾಗಿ ವಿಭಿನ್ನ ಭಾವನಾತ್ಮಕ ಕಥಾಹಂದರ ಹೊಂದಿರುವ ಹೊಸಮಾಂಗಲ್ಯಧಾರಾವಾಹಿ ಪ್ರಸಾರಕ್ಕೆ ಸಜ್ಜಾಗಿದೆ. ‘ಮಂಗಳವಾರ ಮಾಂಗಲ್ಯವಾರಎಂಬ ವಿಶೇಷ ಘೋಷವಾಕ್ಯದೊಂದಿಗೆ, ಧಾರಾವಾಹಿ ಸೆಪ್ಟೆಂಬರ್ 2ರಿಂದ, ಪ್ರತಿ ಮಂಗಳವಾರ ಸಂಜೆ 7 ಗಂಟೆಗೆ ಪ್ರೇಕ್ಷಕರಿಗೆ ಲಭ್ಯವಾಗಲಿದೆ. ದುರ್ಗಾಪುರದ ಮಯೂರಿಮನೆಯ ಮಗನಂತೆ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುವ ಹುಡುಗಿ. ಕೃಷಿ, ಹೈನುಗಾರಿಕೆ, ಹಾಗೂ ನಗರದ ಶ್ರೀಮಂತ ಕುಟುಂಬದ ತೋಟದ ಉಸ್ತುವಾರಿಯೂ ಇವಳದೇ. ಶ್ರೀಮಂತ ಮನೆಯ ಕುಲಪುತ್ರನೇ ನಾಯಕ ತಾರಕ್.

ಅಮ್ಮನ ಶ್ರೀಮಂತಿಕೆಯ ಅಹಂಕಾರ ತಾಳಲಾರದ ತಾರಕ್, ಮದ್ಯವ್ಯಸನಿಯಾಗಿದ್ದಾನೆ. ಒಳ್ಳೆಯ ಮನಸ್ಸಿನ ಕುಡುಕನಾದ ತಾರಕ್, ಒಂದು ಸಂದರ್ಭದಲ್ಲಿ ತಾಯಿಯ ಅಹಂಕಾರ ಮುರಿಯಲು ಬಡ ಕುಟುಂಬದ ಮಯೂರಿಗೆ ಮಾಂಗಲ್ಯ ಕಟ್ಟಿಬಿಡುತ್ತಾನೆ. ಅಲ್ಲಿಂದ ಮಯೂರಿಯ ಜೀವನದ ಹೊಸ ಪಯಣ ಆರಂಭವಾಗುತ್ತದೆ.

ಕನ್ನಡ ಕಿರುತೆರೆ ವೀಕ್ಷಕರ ಅಚ್ಚುಮೆಚ್ಚಿನ ನಾಯಕನಟ ಬಿಗ್ಬಾಸ್, ಗಾಂಧಾರಿ, ಲಕ್ಷಣ, ಶ್ರೀಗೌರಿ ಖ್ಯಾತಿಯ ಜಗನ್ ʻಮಾಂಗಲ್ಯʼದಲ್ಲಿ ಒಳ್ಳೇ ಕುಡುಕ ಗಂಡನ ಪಾತ್ರ ನಿರ್ವಹಿಸುತ್ತಿದ್ದಾರೆ. ಜೊತೆಗೆ ನಿರ್ಮಾಣ ಹಾಗೂ ಪ್ರಧಾನ ನಿರ್ದೇಶನ ಕೂಡ ಅವರದೇ. ಉದಯ ಟಿವಿ ಜೊತೆ ನನ್ನ ಮೊದಲನೇ ಧಾರಾವಾಹಿ ಇದು. ಇದರಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಮೂರು ಪಾತ್ರಗಳನ್ನ ನಿರ್ವಹಿಸುತ್ತ ಇದ್ದೇನೆ. ಕುಡುಕ ತಾರಕ್ ಪಾತ್ರ ಬಹಳ ಸವಾಲಿನದ್ದಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow