Divya Uruduga Aravind KP: ಮದುವೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಕೆಪಿ ಅರವಿಂದ್‌, ದಿವ್ಯಾ ಉರುಡುಗ!

ಫೆಬ್ರವರಿ 19, 2025 - 20:04
 0  12
Divya Uruduga Aravind KP: ಮದುವೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಕೆಪಿ ಅರವಿಂದ್‌, ದಿವ್ಯಾ ಉರುಡುಗ!

ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಉರುಡುಗ ಸದ್ಯ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ನಿನಗಾಗಿ ಸೀರಿಯಲ್‌ ಮೂಲಕ ಸಖತ್‌ ಖ್ಯಾತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ ದುಬೈನಲ್ಲಿ ಸಖತ್ ಎಂಜಾಯ್ ಮಾಡಿರುವ ಫೋಟೋಗಳು ವೈರಲ್‌ ಆಗಿತ್ತು. ವಿಶೇಷವಾಗಿ ಮರಳಿನಲ್ಲಿ ಬಳಸೋ ಸ್ಯಾಂಡ್‌ ಮೋಟರ್ ಬೈಕ್ ಅನ್ನೂ ಏರಿ ಮನಸೋಯಿಚ್ಛೆ ಸುತ್ತಾಡಿದ್ದರು.

ʼಬಿಗ್‌ ಬಾಸ್ʼ‌ ಮನೆಯಲ್ಲಿದ್ದಾಗ ಕೆಪಿ ಅರವಿಂದ್‌, ದಿವ್ಯಾ ಉರುಡುಗ ಪ್ರೀತಿಯಲ್ಲಿ ಬಿದ್ದಿದ್ದರು. “ಹೊರಗಡೆ ಹೋದ್ಮೇಲೆ ಒಂದಷ್ಟು ವಿಷಯ ಮಾತಾಡಿಕೊಂಡು ಆಮೇಲೆ ಡಿಸೈಡ್‌ ಮಾಡ್ತೀನಿ” ಎಂದು ಅರವಿಂದ್‌ ಅವರು ದೊಡ್ಮನೆಯಲ್ಲಿದ್ದಾಗಲೇ ಹೇಳಿಕೊಂಡಿದ್ದರು. ಆನಂತರದಲ್ಲಿ ದಿವ್ಯಾ, ಅರವಿಂದ್‌ ಅವರು ಕಮಿಟ್‌ ಆಗಿದ್ದಾರೆ. ದೊಡ್ಮನೆಯಲ್ಲಿದ್ದಾಗ ಸ್ನೇಹಿತರಾಗಿದ್ದವರು ಹೊರಗಡೆ ಬಂದ್ಮೇಲೆ ಶತ್ರುಗಳ ರೀತಿ ಇದ್ದವರೂ ಇದ್ದಾರೆ. ಹೊರಗಡೆ ಶತ್ರುಗಳಾಗಿದ್ದವರು ಒಳಗಡೆ ಹೋದ್ಮೇಲೆ ಸ್ನೇಹಿತರಾದವರು ಇದ್ದಾರೆ. 

ಕೆಪಿ ಅರವಿಂದ್‌, ದಿವ್ಯಾ ಉರುಡುಗ ಅವರು ಯಾವಾಗ ಮದುವೆ ಆಗ್ತಾರೆ ಎನ್ನುವ ಪ್ರಶ್ನೆ ಆಗಾಗ ಕೇಳಿ ಬರುತ್ತಿರುತ್ತದೆ, ಆಗ ಇವರಿಬ್ಬರು ಎಸ್ಕೇಪ್‌ ಆಗಿದ್ದು ಇದೆ. ಇತ್ತೀಚೆಗೆ ಡಾಲಿ ಧನಂಜಯ, ಧನ್ಯತಾ ಅವರ ಮದುವೆಯಲ್ಲಿ ಭಾಗಿಯಾದ ಈ ಜೋಡಿ ಮದುವೆ ಯಾವಾಗ ಎಂದು ಹೇಳಿಕೊಂಡಿದ್ದಾರೆ.

ನಿರೂಪಕಿ ಚೈತ್ರಾ ವಾಸುದೇವನ್‌ ಅವರು ಎರಡನೇ ಮದುವೆ ಆಗುತ್ತಿದ್ದಾರೆ. ಮಾರ್ಚ್‌ ತಿಂಗಳಿನಲ್ಲಿ ಈ ಮದುವೆ ನಡೆಯಲಿದೆ. ಈಗಾಗಲೇ ಚೈತ್ರಾ ಚಿತ್ರರಂಗದ ಗಣ್ಯರಿಗೆ ಮದುವೆ ಆಹ್ವಾನ ನೀಡಿದ್ದಾರೆ. ಈಗ ದಿವ್ಯಾ ಉರುಡುಗ, ಕೆಪಿ ಅರವಿಂದ್‌ ಕೂಡ ಮದುವೆಗೆ ರೆಡಿ ಆಗಿದ್ದಾರೆ. ದಿವ್ಯಾ ಉರುಡುಗ ಅವರು ʼನಿನಗಾಗಿʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕೆಪಿ ಅರವಿಂದ್‌ ಅವರು ಮೋಟಾರ್‌ಸ್ಪೋರ್ಟ್ಸ್‌ ಕಡೆಗೆ ಗಮನ ಕೊಡುತ್ತಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಯಾರದ್ದೇ ಮದುವೆ ಇರಲೀ, ಪ್ರೀಮಿಯರ್‌ ಶೋ ಇರಲೀ, ಅದರಲ್ಲಿ ದಿವ್ಯಾ ಉರುಡುಗ, ಕೆಪಿ ಅರವಿಂದ್‌ ಅವರು ಭಾಗಿಯಾಗಿದ್ದರು. ಈ ಮೂಲಕ ಅವರು ತಾವು ಲವ್‌ನಲ್ಲಿರೋದು ಪಕ್ಕಾ, ಮದುವೆ ಆಗ್ತಿರೋದು ಪಕ್ಕಾ ಎಂದು ಹೇಳಿಕೊಂಡಿದ್ದರು. 

ಇನ್ನು ʼಪಾರುʼ ಧಾರಾವಾಹಿ ನಟಿ ಮಾನ್ಸಿ ಜೋಶಿ, ʼಬ್ರಹ್ಮಗಂಟುʼ ಧಾರಾವಾಹಿ ನಟ ಅಭಿಜಿತ್‌ ಸಿಂಗ್‌ ಅವರು ಮದುವೆಯಾಗಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಒಬ್ಬರಾದ ಮೇಲೆ ಒಬ್ಬರು ಮದುವೆ ಆಗುತ್ತಿದ್ದಾರೆ. ಈ ನೆಪದಲ್ಲಿ ಎಲ್ಲರೂ ಸೇರುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow