ಬಾಯ್ಸ್ vs ಗರ್ಲ್ಸ್ ಶೋನಲ್ಲಿ ಕಾಣಿಸದ ಹನುಮಂತ: ಶೋನಿಂದಾ ಹೊರಬಂದ್ರಾ!?

ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಹನುಮಂತ ಸಖತ್ ಬ್ಯೂಸಿ ಆಗಿದ್ದಾರೆ. ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಗೆಲುವಿನ ನಗೆ ಬೀರಿದವರು ಕುರಿಗಾಹಿ ಹನುಮಂತ ಲಮಾಣಿ. 5 ಕೋಟಿಗೂ ಅಧಿಕ ವೋಟ್ಸ್ ಪಡೆದ ಹನುಮಂತ ಲಮಾಣಿ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ವಿನ್ನರ್ ಆದರು. ‘ಬಿಗ್ ಬಾಸ್’ ಮುಗಿಯುತ್ತಿದ್ದ ಹಾಗೆ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋಗೆ ಹನುಮಂತ ಲಮಾಣಿ ಕಾಲಿಟ್ಟರು.
5 ಕೋಟಿ ಕನ್ನಡಿಗರ ಪ್ರೀತಿ ಪಡೆದಿರುವ ಗಾಯಕ 'ಬಾಯ್ಸ್ ವರ್ಸ್ ಗರ್ಲ್ಸ್' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದರು. ಓಪನಿಂಗ್ ಎಪಿಸೋಡ್‌ನಲ್ಲಿ ದೋಸ್ತಾ ಧನರಾಜ್ ಆಚಾರ್ ಜೊತೆ ಮಸ್ತ ಮಾಡ್ಕೊಂಡು, ಹುಡುಗಿಯರ ಕಾಲು ಎಳೆಯುತ್ತಿದ್ದ ಹನುಮಂತು ಎರಡನೇ ವಾರದಿಂದಲೇ ಕಾಣಿಸುತ್ತಿಲ್ಲ. ಎಷ್ಟೇ ಆದ್ರೂ ವಿನ್ನರ್ ಅಲ್ವಾ ಬ್ಯುಸಿ ಇರಬೇಕು ಅಂದುಕೊಂಡರೆ ಮೂರನೇ ವಾರ ಕೂಡ ಬಂದಿಲ್ಲ. ಅಲ್ಲಿಗೆ ವೀಕ್ಷಕರಿಗೆ ಅನುಮಾನಗಳು ಹುಟ್ಟಿಕೊಂಡಿದೆ...
ಎರಡು ವಾರ ಹನುಮಂತು ಕಾಣಿಸದ ಕಾರಣ ಶೋನಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಆದರೆ ಈ ವಿಚಾರದ ಬಗ್ಗೆ ಹನುಮಂತು ಯಾವುದೇ ಕ್ಲಾರಿಟಿ ನೀಡಿಲ್ಲ. ಹಾಗೆ ಶೋನಿಂದ ಹೊರ ಕೂಡ ನಡೆದಿಲ್ಲ. ಹನುಮಂತು ವಿನ್ನರ್ ಆಗಿರುವ ಕಾರಣ ತಮ್ಮ ಹುಟ್ಟೂರು ಹಾಗೂ ಉತ್ತರ ಕರ್ನಾಟಕದ ಮಂದಿ ಸಿಕ್ಕಾಪಟ್ಟೆ ಪ್ರೀತಿ ಕೊಟ್ಟಿದ್ದಾರೆ ಹೀಗಾಗಿ ಅಲ್ಲೆಲ್ಲಾ ಕಾರ್ಯಕ್ರಮಗಳು ನಡೆಯುತ್ತಿದೆ. ಹನುಮಂತು ವಿಶೇಷ ಅತಿಥಿಯಾಗಿ ಹೋಗುತ್ತಿದ್ದಾರೆ ಹಾಗೂ ಹಾಡುತ್ತಿದ್ದಾರೆ. ಈ ಕಾರಣಕ್ಕೆ ಎರಡನೇ ವಾರದ ಎಪಿಸೋಡ್‌ಗೆ ಬರುವುದಿಲ್ಲ ಎಂದು ತಿಳಿಸಿದ್ದರಂತೆ. ಆದರೆ ಮೂರನೇ ವಾರದ ಎಪಿಸೋಡ್?
ಒಂದು ವಾರ ಬಂದಿಲ್ಲ ಓಕೆ ಎರಡನೆ ವಾರನೂ ಬಂದಿಲ್ಲ ಅಂದ್ರೆ ಶೋಗೆ ಗುಡ್ ಬೈ ಹೇಳುವ ಸೂಚನೆ ಕೊಡುತ್ತಿದ್ದಾರೆ ಎನ್ನಬಹುದು. ಅಲ್ಲದೆ ಹನುಮಂತು ಇಲ್ಲದೆ ಶೋ ನೋಡಲು ಬೋರ್ ಆಗುತ್ತಿದೆ ಏನೂ ತಮಾಷೆ ಇಲ್ಲ ಹಾಗೆ ನಮ್ಮ ದೋಸ್ತನಿಗೆ ಜೋಡಿ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಹನುಮಂತು ಮತ್ತೆ ನಾಲ್ಕನೇ ವಾರದ ಎಪಿಸೋಡ್‌ಗೆ ಬರ್ತಾರಾ ಇಲ್ವಾ ಎಂದು ನೋಡಿದರೆ ಅವರ ಗುಡ್ ಬೈ ಗಾಸಿಪ್ ನಿಜ ಅಥವಾ ಸುಳ್ಳು ಎಂದು ತಿಳಿದುಬಿಡುತ್ತದೆ. ಇನ್ನು ಬಿಗ್ ಬಾಸ್ ಶೋನಿಂದ ಸುಮಾರು ಸ್ಪರ್ಧಿಗಳು ಈ ಶೋನಲ್ಲಿ ಇದ್ದಾರೆ. ಸ್ವತಃ ಆಂಕರ್ ಅನುಪಮಾ ಗೌಡ ಕೂಡ ಎರಡು ಸಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ ಹಾಗೂ ಒಂದು ಸಲ ವಿಶೇಷ ಅತಿಥಿಯಾಗಿ ಮಿಂಚಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






