75 ವರ್ಷಕ್ಕೆ ನಿವೃತ್ತಿ ಕಡ್ಡಾಯವಲ್ಲ: ಪ್ರಧಾನಿ ಮೋದಿ ನಿವೃತ್ತಿ ಚರ್ಚೆಗೆ ತೆರೆ ಎಳೆದ ಮೋಹನ್ ಭಾಗವತ್!

ಆಗಸ್ಟ್ 30, 2025 - 12:14
 0  13
75 ವರ್ಷಕ್ಕೆ ನಿವೃತ್ತಿ ಕಡ್ಡಾಯವಲ್ಲ: ಪ್ರಧಾನಿ ಮೋದಿ ನಿವೃತ್ತಿ ಚರ್ಚೆಗೆ ತೆರೆ ಎಳೆದ ಮೋಹನ್ ಭಾಗವತ್!

ನಾನು ಕೂಡ 75ನೇ ವರ್ಷಕ್ಕೆ ನಿವೃತ್ತಿಯಾಗುತ್ತಿಲ್ಲ, ಯಾರನ್ನೂ ಅಧಿಕಾರದಿಂದ ಇಳಿಯುವಂತೆ ಕೇಳಿಲ್ಲ ಎಂದು ಆರ್​​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್ ತಿಳಿಸಿದ್ದಾರೆ. 75 ವರ್ಷ ದಾಟಿದ ನಾಯಕರಿಗೆ ನಿವೃತ್ತಿ ನೀಡುವ ಅಲಿಖಿತ ನಿಯಮದ ಚರ್ಚೆಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ..

ಕಳೆದ ತಿಂಗಳಷ್ಟೆ ನಿವೃತ್ತಿಯ ಸೂಚನೆ ರವಾನಿಸಿದ್ದ ಸಂಘದ ಸರ್ವೋಚ್ಛ ನಾಯಕ ಮೋಹನ್​ ಭಾಗವತ್​​, ದಿಢೀರ್​​​ ತಮ್ಮ ಮಾತಿನಿಂದ ಯೂಟರ್ನ್​​ ಹೊಡೆದಿದ್ದಾರೆ..  75 ವರ್ಷವಾದಾಗ ನಾನು ನಿವೃತ್ತಿಯಾಗುತ್ತೇನೆ ಅಥವಾ ಬೇರೆಯವರು ನಿವೃತ್ತಿಯಾಗಬೇಕು ಅಂತ ಹೇಳಿಲ್ಲ.. ಸಂಘ ನಮಗೆ ಏನು ಹೇಳುತ್ತದೆಯೋ ಅದನ್ನು ನಾವು ಮಾಡುತ್ತೇವೆ. ನಾವೆಲ್ಲರೂ ಸಂಘದ ಸ್ವಯಂ ಸೇವಕರು. ನಮಗೆ ಇಷ್ಟವಿರಲಿ, ಇಲ್ಲದಿರಲಿ, ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ನನಗೆ 80 ವರ್ಷವಾದ್ರೂ ಸಂಘ ನಡೆಸು ಅಂದ್ರೆ ಮುನ್ನಡೆಸಬೇಕು.

ಇಲ್ಲ ನನಗೆ 75 ವರ್ಷ ಆಗಿದೆ. ನಾನು ವಿಶ್ರಾಂತ ಜೀವನ ಕಳೆಯಲು ಬಯಸ್ತೇನೆ ಅಂತ ಹೇಳುವಂತಿಲ್ಲ. ನಾನು 80 ವರ್ಷವಾದ್ರೂ ಸಂಘವನ್ನ ಮುನ್ನಡೆಸ್ತೇನೆ ಅನ್ನೋ ಮೂಲಕ ಮೋಹನ್ ಭಾಗವತ್ ಅವರು ವದಂತಿಗೆ ಬ್ರೇಕ್​​​ ಹಾಕಿದ್ದಾರೆ.. ಭಾಗವತ್ ಅವರು ಆರ್‌ಎಸ್‌ಎಸ್‌ನ ಶತಮಾನೋತ್ಸವದ ಸಮಾರಂಭದಲ್ಲಿ ಮಾತನಾಡುತ್ತಾ, ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವೆ ಭಿನ್ನಾಭಿಪ್ರಾಯಗಳು ಇರಬಹುದು ಆದರೆ ಸಂಘರ್ಷ ಇಲ್ಲ ಎಂದು ಹೇಳಿದರು. ಎರಡೂ ಸಂಘಟನೆಗಳು ದೇಶದ ಅಭಿವೃದ್ಧಿಗೆ ಕೆಲಸ ಮಾಡುತ್ತಿವೆ ಎಂದು ಅವರು ಸ್ಪಷ್ಟಪಡಿಸಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow