ನನಗೆ ಹಳೆಯ ದಿನಗಳು ನೆನಪಾಗುತ್ತೆ.. ಅವಳನ್ನು ಮಿಸ್ ಮಾಡಿಕೊಳ್ಳುತ್ತೇನೆ: ಚಂದನ್ ಶೆಟ್ಟಿ

ಜುಲೈ 9, 2025 - 20:53
 0  12
ನನಗೆ ಹಳೆಯ ದಿನಗಳು ನೆನಪಾಗುತ್ತೆ.. ಅವಳನ್ನು ಮಿಸ್ ಮಾಡಿಕೊಳ್ಳುತ್ತೇನೆ: ಚಂದನ್ ಶೆಟ್ಟಿ

ಬೆಂಗಳೂರು: ಕನ್ನಡದ ಪ್ರಸಿದ್ಧ ರ್ಯಾಪರ್ ಹಾಗೂ ಗಾಯಕ ಚಂದನ್ ಶೆಟ್ಟಿ ಹಾಗೂ ಟಿವಿ ಪ್ರಸಿದ್ಧಿ ಹೊಂದಿದ ನಿವೇದಿತಾ ಗೌಡ ಇವರಿಬ್ಬರ ಮದುವೆ, ನಂತರದ ಸಂಬಂಧ, ಹಾಗೂ ವಿಚ್ಛೇದನ ಎಲ್ಲವೂ ಸಾರ್ವಜನಿಕ ಗಮನ ಸೆಳೆದಿತ್ತು. ಇದೀಗ ಚಂದನ್ ಶೆಟ್ಟಿ ತಮ್ಮ ಸಂಬಂಧದ ಬಗ್ಗೆ ಮನ ಮುಟ್ಟುವಂತೆ ಮಾತನಾಡಿದ್ದು, ‘ನಿವೇದಿತಾ ನೆನಪಾಗುತ್ತಾರೆ. ಆದರೆ, ನಾವು ಮತ್ತೆ ಒಟ್ಟಾಗುವುದಿಲ್ಲಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಸಂಬಂಧದ ಹಿಂದೆ ಬಿದ್ದಿರುವ ಪಾಠ:

ನಮ್ಮ ನಡುವೆ ಯಾವುದೇ ವಂಚನೆ ಆಗಿಲ್ಲ. ಅದೇ ನಮ್ಮ ಸಂಬಂಧದ ಒಂದು ಪ್ಲಸ್ ಪಾಯಿಂಟ್. ಆದರೆ ಬದುಕಿನಲ್ಲಿ ಹೊಂದಾಣಿಕೆಯಾಗದಿದ್ದಾಗ, ದಾರಿ ಬೇರೆ ಆಗುವುದು ಅನಿವಾರ್ಯ. ನಾನು ಬಹಳ ಸರಳ ವ್ಯಕ್ತಿ. ಅವಳು ಗ್ಲಾಮರ್ಲೈಫ್ ಅನುಭವಿಸುವವರಾಗಿದ್ದರು. ನಾನು ರಸ್ತೆಯ ತಿಂದರೂ ಚಿಂತೆ ಮಾಡಲ್ಲ. ಕಾರಣಗಳೇ ನಮ್ಮ ವಿಭಜನೆಯ ಬೆನ್ನುಹತ್ತಿದವುಎಂದು ಅವರು ಹೇಳಿದ್ದಾರೆ.

ಜೀವಿತದ ನೆನಪುಗಳು ಇನ್ನೂ ಹಸಿರು:

ವಿಚ್ಛೇದನದ ನಿರ್ಧಾರ ಸುಲಭವಲ್ಲ. ನಾವು ಹಲವು ಬಾರಿ ನೋವನು ಅನುಭವಿಸಿದ್ದೇವೆ. ನಿವೇದಿತಾ ಜೊತೆಗಿನ ಯಾತ್ರೆಗಳ, ಕ್ಷಣಗಳ ನೆನಪು ಇಂದಿಗೂ ಕಾಡುತ್ತದೆ. ‘ನಾನವಳನ್ನು ನಯಾಗಾರಾ ಫಾಲ್ಸ್ಗೆ ಕರೆದುಕೊಂಡು ಹೋಗಿದ್ದೆ. ಅವಳ ಹಾಸ್ಯ, ಶ್ರದ್ಧೆ ಎಲ್ಲವೂ ನೆನಪಿಗೆ ಬರುತ್ತದೆ. ಆದರೆ, ಅವಳು ಹ್ಯಾಪಿಯಾಗಿದ್ದರೆ, ನಾನೂ ಸಂತೋಷಎಂದು ಚಂದನ್ ಹೇಳಿದ್ದಾರೆ.

ಮತ್ತೆ ಒಂದಾಗುವ ಸಾಧ್ಯತೆಯ ಪ್ರಶ್ನೆಗೂ ಉತ್ತರ:

ನಿರ್ಧಾರಕ್ಕೆ ನಾವಿಬ್ಬರೂ ಸಹಮತ ಪಟ್ಟಿದ್ದೆವು. ಹಿಂದೆ ಹೋಗಿ ನೋಡುವ ಆಸೆ ಇಲ್ಲ. ಮೂರನೇ ವ್ಯಕ್ತಿ ಕಾರಣವಾಗಿಲ್ಲ. ಸತ್ಯವೆಂದರೆನಮ್ಮ ನಡುವೆ ಬದುಕಿನ ವೈಖರಿ ಬೇರೆ ಆಗಿಬಿಟ್ಟಿತ್ತುಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow