ಚೀಟಿ ಹೆಸರಲ್ಲಿ ಹಣ ಹೂಡ್ತಿದ್ದೀರಾ: ಹುಷಾರ್ ಜನರೇ.. ದೋಚಿಕೊಂಡು ಹೋಗ್ತಾರೆ!

ಜುಲೈ 9, 2025 - 22:22
 0  10
ಚೀಟಿ ಹೆಸರಲ್ಲಿ ಹಣ ಹೂಡ್ತಿದ್ದೀರಾ: ಹುಷಾರ್ ಜನರೇ.. ದೋಚಿಕೊಂಡು ಹೋಗ್ತಾರೆ!

ಬೆಂಗಳೂರು;-ಬರೋ ಅಲ್ಪ ಸ್ಪಲ್ವ ಹಣದಲ್ಲಿ ಮನೆ ತೂಗಿಸಿಕೊಂಡು ಹಾಗೋ ಹೀಗೋ ಮಾಡಿ ಚೀಟಿ ಕಟ್ಟಿ ಮಕ್ಕಳ ಮದುವೆ, ಮನೆತಗೋಬೇಕು ಅಂತ ಅದೆಷ್ಟೋ ಜನ ಕನಸು ಕಂಡಿರ್ತಾರೆ. ಹಾಗೆ ಚೀಟಿ ಕಟ್ಟೋರು ಕೊಂಚ ಈ ಸ್ಟೋರಿ ನೋಡಿ. ಇಲ್ಲೊಂದು ದಂಪತಿ ಒಂದಲ್ಲ ಎರಡಲ್ಲ ಬರೋಬ್ಬರಿ ಮೂನ್ನೂರು ಕೋಟಿ ರೂಪಾಯಿ ಚೀಟಿ ಹಣ ತಗೊಂಡು ರಾತ್ರಿ ರಾತ್ರಿ ಮನೆ ಖಾಲಿ ಮಾಡಿಕೊಂಡು ಎಸ್ಕೇಪ್‌ ಆಗಿದ್ದಾರೆ.

ಅಂದ ಹಾಗೆ ಈ ಘಟನೆ ನಡೆದಿರೋದು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ. ಕೇರಳ ಮೂಲಕ ಎ ವಿ ಟಾಮಿ ಹಾಗೂ ಪತ್ನಿ ಶಿನಿ ಟಾಮಿ ಸುಮಾರು 20-30 ವರ್ಷದಿಂದ ಬೆಂಗಳೂರಿನಲ್ಲೇ ವಾಸವಾಗಿದ್ರು. ಈ ಕತರ್ನಾಕ್‌ ಜೋಡಿ ಎ ಎಂಡ್‌ ಎ ಚಿಟ್‌ ಫಂಟ್‌ ಹಾಗೂ ಪೈನಾನ್ಸ್‌ ಹೆಸರಿನಲ್ಲಿ ಕಂಪೆನಿ ಶುರುಮಾಡಿ ದುಪ್ಪಟ್ಟು ಬಡ್ಡಿ ಕೊಡೋ ಆಸೆ ತೋರಿಸಿದ್ರು. ಹೀಗಾಗಿ ಇವ್ರನ್ನ ನಂಬಿ ಸುಮಾರು 500ಕ್ಕೂ ಅಧಿಕ ಜನ ಹಣ ಹೂಡಿಕೆ ಮಾಡಿದ್ದಾರೆ.

 ಬಬ್ಬೊಬ್ಬರಿಂದಲೂ ಈ ಕಿಲಾಡಿ ಜೋಡಿ 50 ಲಕ್ಷದಿಂದ ಒಂದು ಕೋಟಿ ವರೆಗೂ ಹಣ ಪಡೆದು ಇಪತ್ತನಾಲ್ಕು ಫರ್ಸೆಂಟ್‌ ಬಡ್ಡಿ ಕೊಡ್ತಿವಿ ಎಂದು ಯಾಮಾರಿಸಿದ್ದಾರೆ. ಇದೀಗ ದಂಪತಿಯ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು ಆಫಿಸ್‌ ಕೂಡ ಕ್ಲೋಸ್‌ ಆಗಿದೆ. ಇತ್ತ ಮನೆ ಹತ್ರ ಹೋದ್ರೆ ಮನೆಯನ್ನು ಮಾರಿಕೊಂಡು ಎಸ್ಕೇಪ್‌ ಆಗಿದ್ದಾರೆ. ಇದರಿಂದ ಕಂಗಲಾದ ಜನರು ರಾಮಮೂರ್ತಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರೋ ದಂಪತಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow